ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ
ಸಿಂಧನೂರು: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ನಡೆಯುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸುವ ಮುನ್ನ ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮಧ್ವರಾಜಾಚಾರ್ಯ ಬಾಂಗ್ಲಾದೇಶದಲ್ಲಿ 1971ರಲ್ಲಿ ಬಾಂಗ್ಲಾ ದೇಶದ ನಿರ್ಮತಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಘಟನೆಯಲ್ಲಿ ಹಿಂದೂಗಳ ಸಹಿತ ಅನೇಕರ ಕೊಲೆಯಾಗಿದೆ. ಇದಕ್ಕೆ ಕಾರಣರಾಗಿರುವ ಜಮಾತೆ-ಎ-ಇಸ್ಲಾಮಿ ಸಂಘಟನೆ ಉಪಾಧ್ಯಕ್ಷ ದಿಲಾವರ ಹುಸೈನ್ ಸಯೀದಿ ಇವರನ್ನು ಗುರುವಾರ ಗಲ್ಲಿಗೆರಿಸುವ ನಿರ್ಣಯವನ್ನು ಅಲ್ಲಿನ ನ್ಯಾಯಾಲಯವು ತೀರ್ಪು ಕೊಟ್ಟಿದೆ.
ಜಮಾತೆ-ಎ-ಇಸ್ಲಾಮಿ ಸಂಘಟನೆ ಮುಸ್ಲಿಂ ಕಾರ್ಯಕರ್ತರು ನಡೆಸಿದ ಗಲಾಟೆಯಲ್ಲಿ 4 ದಿನಗಳಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ಜನರು ಸಾವಿಗಿಡಾಗಿದ್ದಾರೆ. ಮುಸಲ್ಮಾನರು ಇಲ್ಲಿಯವರೆಗೆ ನಡೆಸಿದ ಆಕ್ರಮಣದಲ್ಲಿ ಅಲ್ಲಿನ 45 ದೇವಸ್ಥಾನ ಮತ್ತು ನೂರಾರು ಹಿಂದೂ ಮನೆಗಳನ್ನು ಧ್ವಂಸ ಮಾಡಿದ್ದಾರೆ. ಇನ್ನೂ ಕೂಡ ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ನಿಂತಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಬಿ. ಅಮರೇಗೌಡ, ಗುರುರಾಜ ಜಾಗೀರದಾರ, ಪ್ರಹ್ಲಾದ ಕೆಂಗಲ್, ಬೋಧನ ಚಕ್ರವರ್ತಿ ಮತ್ತಿತರರು ಭಾಗವಹಿಸಿದ್ದರು.