ಷಡ್ಯಂತ್ರದ ಕೋಟೆ ಭೇದಿಸಿದ ಕಾಂಗ್ರೆಸ್; ಆದ್ರೂ ಜೇವರ್ಗಿ ಪಪಂ ಅತಂತ್ರ
ಕ.ಪ್ರ. ವಾರ್ತೆ ಗುಲ್ಬರ್ಗ/ಜೇವರ್ಗಿ ಮಾ.12
ಸ್ಥಳೀಯ ಪಟ್ಟಣ ಪಂಚಾಯತಿ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂಲೆ ಗುಂಪಾಗಿಸಲು ಷಡ್ಯಂತ್ರ ನಡೆದರೂ ಸಹ ಕಾಂಗ್ರೆಸ್ ಅವುಗಳನ್ನೆಲ್ಲ ಎದುರಿಸಿ ಬಂಡೆಗಲ್ಲಾಗಿ ಹೊರಹೊಮ್ಮಿದೆ. ಕಾಂಗ್ರೆಸ್- 8, ಜೆಡಿಎಸ್- 5, ಬಿಜೆಪಿ- 3, ಕೆಜೆಪಿ- 1 ಹಾಗೂ ಪಕ್ಷೇತರ- 3 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ.
ಚುನಾವಣೆಗೂ ಮುನ್ನ ಕಾಂಗ್ರೆಸ್ ಮಣಿಸಲು ಬಿಜೆಪಿ, ಜೆಡಿಎಸ್ ಹಾಗೂ ಅತೃಪ್ತ ಕಾಂಗ್ರೆಸ್ ಮುಖಂಡರು ಸ್ಥಾನ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕಿಳಿಸಿದ್ದರು. ಆದರೆ ಕಾಂಗ್ರೆಸ್ ಪಟ್ಟಣ ಪಂಚಾಯ್ತಿಯ ಎಲ್ಲಾ 20 ವಾರ್ಡಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಪಕ್ಷದ ಈ ಹೋರಾಟಕ್ಕೆ ಮತದಾರ ಬೆಂಬಲಿಸಿದ್ದಾನೆ. 8 ಸ್ಥಾನಗಳನ್ನು ಪಡೆಯುವಲ್ಲಿ ಕೊನೆಗೂ ಕಾಂಗ್ರೆಸ್ ಯಶಸ್ವಿಯಾಗಿದೆ.
ಕಳೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿಯೂ ಯಾವುದೇ ಸ್ಥಾನ ಮುಕ್ಕಾಗದೆ ಕಾಂಗ್ರೆಸ್ ಪಕ್ಷ ತನ್ನ ಸಂಖ್ಯಾಬಲ ಉಳಿಸಿಕೊಂಡಿದ್ದೇ ಬಹುದೊಡ್ಡ ಸಾಧನೆ.
ಕಳೆದ 2007ರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯಾಗಿ 6ರಲ್ಲಿ ಜೆಡಿಎಸ್, 5ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದವು. ಪಪಂ ಆಡಳಿತ ಚುಕ್ಕಾಣಿ ಕಮಲ ಪಡೆ ತನ್ನ ಮುಡಿಗೇರಿಸಿಕೊಂಡಿತ್ತು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಆದರೆ, ಪ್ರಸಕ್ತ ಪಪಂ ಚುನಾವಣೆಯಲ್ಲಿ 8 ಸ್ಥಾನಗಳನ್ನು ಕಾಂಗ್ರೆಸ್ ಭದ್ರವಾಗಿಸಿಕೊಂಡಿದೆ. ಆದರೆ ಜೆಡಿಎಸ್ಗೆ 1 ಹಾಗೂ ಬಿಜೆಪಿಗೆ 2 ಸ್ಥಾನ ನಷ್ಟ ಆಗಿದೆ. ಅಭ್ಯರ್ಥಿಗಳಿಗಿಂತ ಹಲವು ಮುಖಂಡರ ನಾಯಕತ್ವದ ಅಸ್ತಿತ್ವ ಉಳಿವಿನ ಹೋರಾಟ ಎಂದೇ ಬಿಂಬಿಸಲಾಗಿತ್ತು.
ವಾರ್ಡವಾರು ವಿಜಯಿಯಾದವರಿವರು...
1) ಕಾಂಗ್ರೆಸ್ ಶರಣಮ್ಮ ಯಶವಂತ್ರಾಯ 263 ಮತ ಪಡೆದು ಜೆಡಿಎಸ್ನ ಜಗದೇವಿ ಲಕ್ಷ್ಮೀಕಾಂತ ಅವರನ್ನು 55 ಮತ ಅಂತರದಿಂದ ಪರಾಭವಗೊಳಿಸಿದ್ದಾರೆ.
2) ಜೆಡಿಎಸ್ನ ಗುಂಡಣ್ಣ ಗೋಗಿ 286 ಮತ ಪಡೆದು, ಕಾಂಗ್ರೆಸ್ನ ಬಸವರಾಜ ಸಿದ್ದಣ ಅವರನ್ನು 92 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
3) ಬಿಜೆಪಿಯ ಶರಣಗೌಡ ನಿಂಗಪ್ಪ 420 ಮತಗಳನ್ನು ಪಡೆದು, ಕಾಂಗ್ರೆಸ್ನ ಮಕ್ಬೂಲ್ ಜಮಾದಾರ ಅವರನ್ನು 254 ಮತಗಳಿಂದ ಪರಾಭವಗೊಳಿಸಿದ್ದಾರೆ.
4) ಕಾಂಗ್ರೆಸ್ನ ಫಾತೀಮಾಬೇಗಂ ಅಬ್ದುಲ್ ನಬಿ 195 ಮತ ಪಡೆದು, ಪಕ್ಷೇತರ ಹಜೀರಾ ಬೇಗಂ ಇಶಾಕಸಾಬ್ ಅವರನ್ನು 9 ಮತಗಳಿಂದ ಸೋಲಿಸಿದ್ದಾರೆ.
5) ಪಕ್ಷೇತರ ರಾಜೇಗೌಡ ಸಿದ್ದಪ್ಪ 288 ಮತ ಪಡೆದು ಕಾಂಗ್ರೆಸ್ನ ತಿಪ್ಪಣ್ಣ ಮರೆಪ್ಪ ಅವರನ್ನು 36 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
6) ಕಾಂಗ್ರೆಸ್ನ ಮಹಿಬೂಬ ಮಶಾಕಸಾಬ 377ಮತಗಳನ್ನು ಪಡೆದು, 151ಮತ ಪಡೆದ ಅಹ್ಮದಲಿ ಮಹಿಬೂಬಲಿ ಅವರನ್ನು 226ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
7) ಕಾಂಗ್ರೆಸ್ ದಾವೂದ್ ನದೀಮಸಾಬ 166 ಮತ ಪಡೆದು, 132 ಮತ ಪಡೆದ ಕಾಂಗ್ರೆಸ್ನ ನಿಂಗಣ್ಣ ಸಾಯಬಣ್ಣ ಅವರನ್ನು 34ಮತಗಳಿಂದ ಸೋಲಿಸಿದ್ದಾರೆ.
8) ಪಕ್ಷೇತರ ಲಕ್ಷ್ಮೀಬಾಯಿ ಮಲ್ಲಿಕಾರ್ಜುನ 416 ಮತ ಪಡೆದು, 216ಮತ ಪಡೆದ ಕಾಂಗ್ರೆಸ್ನ ಶರಣಮ್ಮ ರಾಜಕುಮಾರ ಅವರನ್ನು 210ಮತಗಳಿಂದ ಸೋಲಿಸಿದ್ದಾರೆ.
9) ಬಿಜೆಪಿ ಮಾನಪ್ಪ ಭೀಮರಾಯ 189 ಮತ ಪಡೆದು, 165 ಮತ ಪಡೆದ ಪಕ್ಷೇತರ ಹರಿಶ್ಚಂದ್ರ ಬಸಪ್ಪ ಅವರನ್ನು 24ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
10) ಬಿಜೆಪಿ ವಿಶ್ವನಾಥ ಶಾಂತಪ್ಪ 216 ಮತ ಪಡೆದು, 62 ಮತ ಪಡೆದ ಕಾಂಗ್ರೆಸ್ನ ಮರೆಪ್ಪ ನಿಂಗಪ್ಪ ಅವರನ್ನು 144ಮತಗಳಿಂದ ಸೋಲಿಸಿದ್ದಾರೆ.
11) ಕಾಂಗ್ರೆಸ್ನ ಮಲ್ಲಮ್ಮ ಮಲ್ಲಣ್ಣ 248 ಮತಗಳನ್ನು ಪಡೆದು, 117 ಮತ ಪಡೆದ ಕೆಜೆಪಿಯ ಪಾರ್ವತಿ ಲಕ್ಷ್ಮಣ ಅವರನ್ನು 131 ಮತಗಳಿಂದ ಸೋಲಿಸಿದ್ದಾರೆ.
12) ಕಾಂಗ್ರೆಸ್ನ ಬಸವರಾಜ ನಿಂಗಪ್ಪ 193 ಮತ ಪಡೆದು, 155 ಮತ ಪಡೆದ ಬಿಜೆಪಿ ನಾಗಮ್ಮ ರಾಜಶೇಖರ ಅವರನ್ನು 38 ಮತಗಳಿಂದ ಸೋಲಿಸಿದ್ದಾರೆ.
13) ಕಾಂಗ್ರೆಸ್ನ ದೇವಕ್ಕೆಮ್ಮ ಕಾಂತಪ್ಪ 397 ಮತ ಪಡೆದು, 321 ಮತ ಪಡೆದ ಬಿಜೆಪಿಯ ತಾಯಮ್ಮ ಚನ್ನಪ್ಪ ಅವರನ್ನು 77 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
14) ಜೆಡಿಎಸ್ನ ಮಹ್ಮದ್ ಹನೀಫ ಬಾಷಾ 453 ಮತ ಪಡೆದು, 228 ಮತ ಪಡೆದ ಕಾಂಗ್ರೆಸ್ನ ಮಹ್ಮದ್ ಏಜಾಜ್ ಅಮೀರರನ್ನು 225 ಮತಗಳಿಂದ ಸೋಲಿಸಿದ್ದಾರೆ.
15) ಕಾಂಗ್ರೆಸ್ ಮಲ್ಲಮ್ಮ ನೀಲಕಂಠ 170 ಮತ ಪಡೆದು, 151 ಮತ ಪಡೆದು ಬಿಜೆಪಿಯ ನಾಗಮ್ಮ ನಿಂಗಣ್ಣಗೌಡರನ್ನು 19 ಮತಗಳಿಂದ ಸೋಲಿಸಿದ್ದಾರೆ.
16) ಜೆಡಿಎಸ್ನ ಅನಿತಾ ಕೇರನಾಥ 132 ಮತ ಪಡೆದು, 111 ಮತ ಪಡೆದ ಕಾಂಗ್ರೆಸ್ನ ಭಾಯಮ್ಮ ಭೀಮರಾಯರನ್ನು 21ಮತಗಳಿಂದ ಪರಾಭವಗೊಳಿಸಿದ್ದಾರೆ.
17) ಜೆಡಿಎಸ್ನ ಮಹಾಂತಯ್ಯ ಚನ್ನಮಲ್ಲಯ್ಯ 485ಮತ ಪಡೆದು, 230 ಮತ ಪಡೆದ ಕಾಂಗ್ರೆಸ್ನ ಮಹಿಬೂಬಸಾಬ ಕಾಶೀಂ ಸಾಬರನ್ನು 254 ಮತಗಳಿಂದ ಸೋಲಿಸಿದ್ದಾರೆ.
18) ಕಾಂಗ್ರೆಸ್ನ ರೇಣುಕಾ ಶರಣು 171ಮತ ಪಡೆದು 109 ಮತ ಪಡೆದ ಜೆಡಿಎಸ್ನ ಗಂಗುಬಾಯಿ ಜಟ್ಟಿಂಗರಾಯರನ್ನು 60 ಮತಗಳಿಂದ ಸೋಲಿಸಿದ್ದಾರೆ.
19) ಕೆಜೆಪಿ ಮಲ್ಲಣ್ಣ ಸಾಯಬಣ್ಣ 163ಮತ ಪಡೆದು, 116 ಮತ ಪಡೆದ ಪಕ್ಷೇತರ ಪರಶುರಾಮ ಶಂಕರ ಅವರನ್ನು 47ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
20) ಪಕ್ಷೇತರ ಸಾಯಬಣ್ಣ ಲಕ್ಷ್ಮಣ 350 ಮತ ಪಡೆದು, 272 ಮತ ಪಡೆದ ಪ್ರತಿಸ್ಪರ್ಧಿ ಕಾಂಗ್ರೆಸ್ ದೊಡ್ಡಪ್ಪ ಬಸಣ್ಣ 78ಮತಗಳಿಂದ ಸೋಲಿಸಿದ್ದಾರೆ.
ಕೈ ಏನೂ ಕಳೆದುಕೊಂಡಿಲ್ಲ
ಜೇವರ್ಗಿ: ಪಂಪಂ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ, ಪಕ್ಷೇತರರು ಒಂದಾಗಿ ಕಾಂಗ್ರೆಸ್ ಸೋಲಿಸಲು ಮಾಡಿದ್ದ ಸಂಚು ಫಲ ನೀಡಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಂದಾಗಿ ಕಾಂಗ್ರೆಸ್ ಮೂಲೆಗುಂಪಿಗೆ ಸಂಚು ರೂಪಿಸಿದ್ದರು. ಆದರದು ಈಗ ಫಲ ಕೊಟ್ಟಿಲ್ಲ. ಡಾ.ಅಜಯ್ ಮಾರ್ಗದರ್ಶನ, ಸದಸ್ಯರ ಜನಪರ ಧೋರಣೆಗಳಿಂದಾಗಿಯೇ ಜೇವರ್ಗಿ ಪಪಂನಲ್ಲಿ ಕಳೆದ ಬಾರಿ ಅದೆಷ್ಟು ಸ್ಥಾನಗಳಿದ್ದವೋ ಅಷ್ಟನ್ನೆ ಕಾಂಗ್ರೆಸ್ ಉಳಿಸಿಕೊಂಡಿದೆ. ಆದರೆ ಜೆಡಿಎಸ್, ಬಿಜೆಪಿಗೆ ಸ್ಥಾನ ನಷ್ಟವಾಗಿದೆ.
- ಅಲ್ಲಂಪ್ರಭು ಪಾಟೀಲ್ ನೆಲೋಗಿ, ಎಂಎಲ್ಸಿ, ಗುಲ್ಬರ್ಗ