ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಳಂದ ಕ್ಷೇತ್ರದಲ್ಲಿ ಕೆಜೆಪಿ ಅಲೆ: ಕಮಕನೂರ

Srinivasa Murthy VN
Updated On : 3 May 2013, 11:18 am

ಕನ್ನಡಪ್ರಭ ವಾರ್ತೆ  ಆಳಂದ  ಮೇ.2
ತಾಲೂಕಿನಲ್ಲಿ ಕೆಜೆಪಿ ಪರ ಅಲೆಯಿದ್ದು, ಹೀಗಾಗಿ ಪಕ್ಷದ ಅಭ್ಯರ್ಥಿ ಬಿ.ಆರ್. ಪಾಟೀಲ್ ಗೆಲವು ಖಚಿತ ಎಂದು ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪಣಪ್ಪ ಕಮಕನೂರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೊಲಿ ಗಂಗಾಮತ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿದ್ದಾರೆ. ಚುನಾವಣೆ ಬಂದಾಗ ಕಾಂಗ್ರೆಸ್, ಜೆಡಿಎಸ್‌ನವರು ಮತಬ್ಯಾಂಕ್ ಮಾಡಿಕೊಂಡು ಜನರಿಗೆ ಮೊಸ ಮಾಡಿದ್ದಾರೆ. ಕಾಂಗ್ರೆಸಿನ ಧರ್ಮಸಿಂಗ್, ಖರ್ಗೆ ಅವರಿಗೆ ಜನರ ಚಿಂತೆಯಿಲ್ಲ. ಏನಿದ್ದರು ತಮ್ಮ ಪುತ್ರರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಸರತ್ತು ನಡೆಸಿದ್ದಾರೆ. ಇವರಿಗೆ ನಮ್ಮ ಸಮಾಜದ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ಬಿಎಸ್‌ವೈ ಕೊಡುಗೆ ಅಪಾರ: ಬಿಎಸ್‌ವೈ ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಗಂಗಾ ಪರಮೇಶ್ವರ ವಸತಿ ನಿಲಯಕ್ಕೆ 5 ಕೋಟಿ, ನಿವೇಶನಕ್ಕೆ 50 ಲಕ್ಷ, ಅಂಬಿಗರ ಚೌಡಯ್ಯ ನಿಲಯಕ್ಕೆ 2 ಕೋಟಿ, ಗುಲ್ಬರ್ಗಯಲ್ಲಿ ಗಂಗಾನಗರ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ ಎಂದರು.
ತಾಲೂಕಿನಲ್ಲಿ ಸಮಾಜ ಹಿತಬಯಸುವ ಪಕ್ಷದ ಅಭ್ಯರ್ಥಿ ಬಿಆರ್. ಪಾಟೀಲರಿಗೆ ಮತ ನೀಡಬೇಕು ಎಂದ ಅವರು, ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳು ಗೆಲುತ್ತಾರೆ. ವಿಧಾನಸಭೆಯಲ್ಲಿ ಸಮಾಜವನ್ನು ಪ.ಪಂಗಡಕ್ಕೆ ಸೇರ್ಪಡೆಗೆ ಹೋರಾಟದ ಜತೆಗೆ ಕೇಂದ್ರಕ್ಕೂ ನಿಯೋಗಕೊಂಡಯ್ದು ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ಬಿ.ಆರ್. ಪಾಟೀಲ್ ಭರವಸೆ ನೀಡಿದ್ದಾರೆ. ಹೀಗಾಗಿ ಸಮಾಜದ ಜನರು ಒಗ್ಗಟ್ಟಿನಿಂದ ಮತ ಚಲಾವಣೆ ಮಾಡುವಂತೆ ವಿನಂತಿಸಿದರು.
ಮುಖಂಡ ಲಕ್ಷ್ಮಣ ನಾಟಿಕರ್ ಧಂಗಾಪುರ, ಆರ್.ಕೆ. ಪಾಟೀಲ್, ದಯಾನಂದ ಜಮಾದಾರ, ಶಿವಲಿಂಗ ಜಮಾದಾರ, ಶರಣು ನಿಗ್ಗುಡಗಿ, ಧನರಾಜ ಜಮಾದಾರ, ನಾಮದೇವ ಶಕಾಪುರ ಸೇರಿದಂತೆ ಇದ್ದರು.

ವೈಜನಾಥರಂತಹ ಗಟ್ಟಿ ವ್ಯಕ್ತಿ ವಿಧಾನಸಭೆಯಲ್ಲಿ ಅಗತ್ಯ: ರಜಾಕ್
ಸೇಡಂ: 371ನೇ ಕಲಂ ಸೂಕ್ತ ರೀತಿಯಲ್ಲಿ ಕಾನೂನು ರೂಪ ಪಡೆದುಕೊಳ್ಳಲು ವೈಜನಾಥ ಪಾಟೀಲರಂತಹ ಗಟ್ಟಿ ವ್ಯಕ್ತಿ ವಿಧಾನಸಭೆಯಲ್ಲಿ ಅವಶ್ಯಕತೆ ಇದೆ ಎಂದು ರಾಯಚೂರಿನ ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ರಜಾಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 371 ಕಲಂ ಜಾರಿಗಾಗಿ ನಡೆದ ಹೋರಾಟಕ್ಕೆ ಸಹಕರಿಸದ ಕೆಲವರು ಈಗ ಅದರ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಗುಡುಗಿದರು.
40 ವಿಧಾನಸಭಾ ಸದಸ್ಯರನ್ನುಳ್ಳ ಸಭೆಯಲ್ಲಿ 317 ಕಲಂ ಕುರಿತು ಯಾರೊಬ್ಬರೂ ಹೋರಾಟದ ಸಂದರ್ಭದಲ್ಲಿ ಧ್ವನಿ ಎತ್ತಿರಲಿಲ್ಲ. ಈಗ 371 ದುರುಪಯೋಗವಾಗುತ್ತಿದೆ. ಇದನ್ನರಿತು ವೈಜನಾಥ ಪಾಟೀಲರು ವಿಧಾನಸಭೆಗೆ ಹೋಗಬೇಕೆಂಬ ಮಹದಾಸೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಮೂಲಕ 371 ಕಲಂ ಸೂಕ್ತ ರೀತಿಯಲ್ಲಿ ಜನರಿಗೆ ತಲುಪಲು ಸಹಕರಿಸುವಂತೆ ಮತದಾರರಲ್ಲಿ ಕೋರಿದರು.
ಗುಲ್ಬರ್ಗದ ಪಿಡಿಎ ಕಾಲೇಜು ವಿದ್ಯಾರ್ಥಿಗಳಾದ ರಾಹುಲ್ ಮತ್ತು ಜಹೀರ್, ಕೆ.ಎಸ್. ಸಯ್ಯದುದ್ದಿನ್, ಪರ್ವತರೆಡ್ಡಿ ಪಾಟೀಲ್ ನಾಮವಾರ, ಸಮಾದ ಮನಿಯಾರ್ ಇದ್ದರು.

ಕಾಂತಾ ಮತಯಾಚನೆ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಕೆ. ಕಾಂತಾ ಅವರು ಕ್ಷೇತ್ರದ ಸಂತೋಷ ಕಾಲೋನಿಯ ಮತದಾರರ ಮನೆಗಳಿಗೆ ತೆರೆಳಿ ಮತಯಾಚನೆ ನಡೆಸಿದರು. ಯೋಗ್ಯ, ಜನಪರ ಕಾಳಜಿಯುಳ್ಳ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಭ್ಯರ್ಥಿಯನ್ನು ಬೆಂಬಲಿಸಿ ಮತದಾನ ಮಾಡುವಂತೆ ಪಕ್ಷದ ಜಿಲ್ಲಾ ವಕೀಲರ ಘಟಕದ ಅಧ್ಯಕ್ಷ ವೈಜನಾಥ ಝಳಕಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement