ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಳಿವಿನ ಭೀತಿ ಸಡಿಲಿಸಿದ ವ್ಯೋಮಾವ್ಯೋಮ: ಹುಡಗಿ

Srinivasa Murthy VN
Updated On : 4 May 2013, 10:48 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಚುಟುಕು ಸಾಹಿತ್ಯ, ಕತೆ, ಕವನಗಳೇ ಹೆಸರು ಮಾಡಿರುವ ಇಂದಿನ ಕಾಲದಲ್ಲಿ ಮಹಾಕಾವ್ಯ ಮುಗಿದೇ ಹೋಯಿತು ಎಂಬ ಭೀತಿ ಕಾಡುತ್ತಿತ್ತು. ಆದರೆ, ಚೆನ್ನಣ್ಣ ವಾಲೀಕಾರರ ವ್ಯೋಮವ್ಯೋಮ ಮಹಾಕಾವ್ಯ ಈ ಕೊರತೆ ನೀಗಿಸಿದೆ ಎಂದು ಚಿಂತಕ ಪ್ರೊ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದಲಿತ ಬಂಡಾಯ ಸಮುದಾಯ ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆ ಬುಧವಾರ ಸಂಜೆ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ ಚೆನ್ನಣ್ಣ ವಾಲೀಕಾರರ ವ್ಯೋಮಾವ್ಯೋಮ ಕಾವ್ಯದ ವಿಮರ್ಶಾ ಹೊತ್ತಿಗೆ ಲೋಕಾರ್ಪಣೆ ಮತ್ತು ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ: ಮಹಾನ್ ಸಂಘರ್ಷದ ವಿಷಯವನ್ನು ಇಂದು ಇಳಿ ವಯಸ್ಸಿನಲ್ಲಿಯೂ ತಮ್ಮ ಆಳವಾದ ಅನುಭವ ಬೆರೆಸಿ ವಾಲೀಕಾರರು ಸಹನೆಯಿಂದ ಕೃತಿ ರಚಿಸಿದ್ದಾರೆ. ಅವರೊಬ್ಬ ಕನ್ನಡ ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಎಂದು ಬಣ್ಣಿಸಿದರು.
ಕಾವ್ಯದ ವಿಮರ್ಶಾ ಹೊತ್ತಿಗೆ ಕುರಿತು ಮಾತನಾಡಿದ ಡಾ. ವಿ. ನಾಗರಾಜ, ಪ್ರಸ್ತುತ ನೆಲದ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮತ್ತು ಸಾಹಿತ್ಯ ಪಟ್ಟಭದ್ರ ಶಕ್ತಿಗೂ ವಿಮರ್ಶಕರಿಗೆ ಈ ಕೃತಿ ಸವಾಲಾಗಿದೆ. ಅವರು ಭೌದ್ಧಿಕವಾಗಿ ಜಾಣ್ಮೆ ಮೆರೆದಿದ್ದಾರೆ. ಕರ್ತೃಮತ್ತು ಸಿಹಿ ಕರ್ತೃತ್ವದ ಸಂಬಂಧ ಗಟ್ಟಿಯಾಗಿ ಮೂಡಿದೆ ಎಂದರು.
ಡಾ. ಕಾಶಿನಾಥ ಅಂಬಲಗಿ ಕೃತಿ ಲೋಕಾರ್ಪಣೆ ಮಾಡಿದರು. ಕೇಂದ್ರೀಯ ವಿವಿಯ ಡಾ. ಅಪ್ಪಗೆರೆ ಸೋಮಶೇಖರ, ಡಾ. ಬಸವರಾಜ ಸಬರದ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷತೆ ವಹಿಸಿದ್ದರು.
ಶಿವರಾಜ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಮಾಂಗ್ ಸ್ವಾಗತಿಸಿದರು. ಸಿದ್ದಲಿಂಗ ಶಕಾಪುರ ಕಾರ್ಯಕ್ರಮ ನಿರೂಪಿಸಿದರು.

ಅದ್ಧೂರಿಯಾಗಿ ಎಳೆದ ಶರಣಬಸವನ ರಥ
ಕನ್ನಡಪ್ರಭ ವಾರ್ತೆ ಚಿತ್ತಾಪುರ  ಮೇ 3
ಇಲ್ಲಿನ ಹೊರವಲಯದಲ್ಲಿರುವ ಶರಣಬಸವೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ನಿಮಿತ್ತ ಮಂಗಳವಾರ ರಥೋತ್ಸವ ಜರುಗಿತು.
ಶರಣಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಾಳೆಹಣ್ಣು, ಉತ್ತತ್ತಿ ಸೇರಿದಂತೆ ವಸ್ತುಗಳು ರಥದೆಡೆ ಎಸೆದು ಭಕ್ತಿ ಭಾವ ಮೆರೆದರು. ಪುರಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ, ಗಚ್ಚಿನ ಮಠದಿಂದ ಕಳಸ, ದೇಶಮುಖ ಅವರ ಮನೆಯಿಂದ ಕುಂಭ, ಪ್ರಭುರಾಜ ರೇಷ್ಮಿ ಮನೆಯಿಂದ ಪಲ್ಲಕ್ಕಿ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ತಲುಪಿತು. ರಾತ್ರಿ ದೀಪೋತ್ಸವ ಹಾಗೂ ಭಜನೆ ಕಾರ್ಯಕ್ರಮಗಳು ಜನಮನ ಸೆಳೆದವು.
ವೀರಶೈವ ಸಮಾಜದ ಅಧ್ಯಕ್ಷ ಚಂದ್ರಶೇಖರ ಅವಂಟಿ, ಯುವ ಅಧ್ಯಕ್ಷ ಸಿದ್ರಾಮಪ್ಪ ರೇಷ್ಮಿ, ಮುಖಂಡರಾದ ಚಂದ್ರಶೇಖರ ದಿಗ್ಗಾಂವಕರ್, ಪ್ರಭುದೇವ ಬಮ್ಮನಳ್ಳಿ, ನಾಗರಾಜ ರೇಷ್ಮಿ, ಮಹಾದೇವಪ್ಪ ಪಾಲಪ, ಶ್ರೀಮಂತ ಕುಂಬಾರ ಸಾಹೇಬಗೌಡ ಕಾಳಗಿ, ಬಸವರಾಜ ಬೆಣ್ಣೂರ, ಶಿವಣ್ಣ ದೊಡ್ಮನಿ, ಪ್ರಭು ರಾಠೋಡ ಉಪಸ್ಥಿತರಿದ್ದರು.

ಚುನಾವಣೆ; ಗುರುತಿಸುವ ಅಧಿಕಾರಿಗಳ ನೇಮಕ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ವಿಧಾನಸಭಾ ಚುನಾವಣೆಯು ಮೇ 5ರಂದು ಜರುಗಲಿದ್ದು, ಮತ ಎಣಿಕೆಯು ಮೇ 8ರಂದು ಬೆಳಗ್ಗೆ 8 ಗಂಟೆಯಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳಲ್ಲಿ ನಡೆಯಲಿದೆ. ಈ ಪ್ರಯುಕ್ತ ಗುಲ್ಬರ್ಗ ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಯಾವುದೇ ವಾಹನಗಳನ್ನು ಹಾಗೂ ಗುರುತಿನ ಚೀಟಿ ಇಲ್ಲದ ಸಿಬ್ಬಂದಿ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂತಹ ವಾಹನಗಳನ್ನು ಹಾಗೂ ಸಿಬ್ಬಂದಿ ಗುರುತಿಸಿ ಒಳ ಕಳುಹಿಸಬೇಕಾದಲ್ಲಿ ಸ್ಥಳೀಯ ಮಾಹಿತಿಯುಳ್ಳ ಸಿಬ್ಬಂದಿಯನ್ನು ನೇಮಿಸುವುದು ಅತಿ ಅವಶ್ಯವಾಗಿದೆ. ಈ 9 ವಿಧಾನಸಭಾ ಕ್ಷೇತ್ರದ ಕಂದಾಯ ನಿರೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ನೇಮಕಗೊಂಡ ಸಿಬ್ಬಂದಿ ಮೇ 8ರಂದು ಬೆಳಗ್ಗೆ 6 ಗಂಟೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಹಾಕಿರುವ ಶಾಮಿಯಾನ್‌ದಲ್ಲಿ ಹಾಜರಾಗಿ ತಮ್ಮ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳನ್ನು ಹಾಗೂ ಅವರ ವಾಹನಗಳನ್ನು ಅಲ್ಲದೇ ಸಿಬ್ಬಂದಿ ವರ್ಗದವರನ್ನು ಒಳಹೋಗಲು ಗುರುತಿಸಿ ಅವರ ಪರ ಎಣಿಕೆ ಕೇಂದ್ರದ ಬಗ್ಗೆ ಮಾಹಿತಿ ನೀಡಿ ಅನುವು ಮಾಡಿಕೊಡುವುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement