ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತ ಎಣಿಕೆ: ನೋಡಲ್ ಅಧಿಕಾರಿಗಳ ನೇಮಕ

Srinivasa Murthy VN
Updated On : 4 May 2013, 10:47 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 3
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2013ರ ಮತದಾನವು ಮೇ 5ರಂದು ಜರುಗಲಿದ್ದು, ಮತ ಎಣಿಕೆ 8ರಂದು ಬೆ.8ರಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳಲ್ಲಿ ನಡೆಯಲಿದೆ.
ಜಿಲ್ಲೆಯ ಎಲ್ಲ 9 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಗೆ ನೇಮಕ ಮಾಡಲಾದ ನೋಡಲ್ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ  ಇಂತಿದೆ.
 ಅಫಜಲ್ಪುರ(ಗಣಿತ ವಿಭಾಗ ಕಟ್ಟಡ): ಅಫಜಲ್ಪುರ ತಾಪಂ ಇಒ ಶಿವಶರಣಪ್ಪ ನಂದಗಿರಿ- 9448910135, ಅಫಜಲ್ಪುರ ಬಿಇಒ ಚಿತ್ರಶೇಖರ ದೇಗಲಮಡಿ- 9480695208.
 ಜೇವರ್ಗಿ(ಪರೀಕ್ಷಾ ಕೇಂದ್ರ ಕಟ್ಟಡ): ಜೇವರ್ಗಿ ತಾಪಂ ಇಒ ಪಲ್ಲಾ ನರಸಾರೆಡ್ಡಿ- 9448144129, ಜೇವರ್ಗಿ ಬಿಇಒ ಗುರಪ್ಪ ಗುಂಡಗುರ್ತಿ- 9480695214.
 ಚಿತ್ತಾಪುರ(ಒಳ ಕ್ರೀಡಾಂಗಣ ಕಟ್ಟಡ): ಚಿತ್ತಾಪುರ ತಾಪಂ ಇಒ ಸುರೇಶ ಬಿರಾದಾರ- 9448145645, ಚಿತ್ತಾಪುರ ಬಿಇಒ ಚವ್ಹಾಣ ಶೆಟ್ಟಿ- 9480695211/9480212831.
 ಸೇಡಂ(ಒಳ ಕ್ರೀಡಾಂಗಣ ಕಟ್ಟಡ): ಸೇಡಂ ತಾಪಂ ಇಒ ಬಸವರಾಜ ಹಾರಕುಡೆ- 9743908253, ಸೇಡಂ ಬಿಇಒ ಚಂದ್ರಕಾಂತ ರೆಡ್ಡಿ- 9480007500/9481695295.
 ಚಿಂಚೋಳಿ(ಸಸ್ಯಶಾಸ್ತ್ರ ವಿಭಾಗ): ತಾಪಂ ಇಒ ಜಗದೇವಪ್ಪ- 9480866115, ಚಿಂಚೋಳಿ ಬಿಇಒ ಹಣಮಂತಪ್ಪ ನಾಟಿಕಾರ- 9480695210.
 ಗುಲ್ಬರ್ಗ ಗ್ರಾಮೀಣ(ಪರೀಕ್ಷಾ ಕೇಂದ್ರ): ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಗುಲ್ಬರ್ಗ ವಿಜಯಕುಮಾರ ಮೂಲಗೆ, ಗುಲ್ಬರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ.
 ಗುಲ್ಬರ್ಗ ದಕ್ಷಿಣ(ಕನ್ನಡ ವಿಭಾಗ): ಗುಲ್ಬರ್ಗ ತಾಪಂ ಇಒ ವಿಜಯೇಂದ್ರ- 9480866100, ಗುಲ್ಬರ್ಗ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ- 9480695212.
 ಗುಲ್ಬರ್ಗ ಉತ್ತರ(ಕನ್ನಡ ವಿಭಾಗ): ಗುಲ್ಬರ್ಗ ಮಹಾನಗರ ಪಾಲಿಕೆ ಎಇಇ ಮಜ್ಜೀದ್, ಗುಲ್ಬರ್ಗ ಉತ್ತರ ಬಿಇಒ ಶಿವಶರಣಪ್ಪ ಕೋಬಾಳ- 9480695213.
 ಆಳಂದ(ಪರೀಕ್ಷಾ ಕೇಂದ್ರ): ಆಳಂದ ತಾಪಂ ಇಒ ಅಬ್ದುಲ್ ಸಲಾಂ- 9480866110, ಆಳಂದ ಬಿಇಒ ಇನಾಂದಾರ್.
ಇದಲ್ಲದೆ ಸಂಪೂರ್ಣ 9 ಚುನಾವಣಾ ವೀಕ್ಷಕರಿಗೆ ಹಾಗೂ ಮಾಧ್ಯಮ ವರದಿಗಾರರ ಕೋಣೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣಾ ವೀಕ್ಷಕರಿಗೆ ಹಾಗೂ ಮಾಧ್ಯಮ ವರದಿಗಾರರಿಗೆ- ಗುಲ್ಬರ್ಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಟಿ.ಜಯಪ್ಪ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ ಪಾಟೀಲ್ ಮೊ. 9448191719 ಇವರನ್ನು ಮತ ಎಣಿಕೆ ಕೇಂದ್ರಗಳಿಗೆ ವಾಹನ ಸೌಲಭ್ಯ ಕಲ್ಪಿಸಲು ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಸಂಯೋಜಕ ಅಧಿಕಾರಿ: ಈ ನೋಡಲ್ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಇಲಿಯಾಸ್ ಇಸಾಮುದ್ದೀನ್ ಅವರನ್ನು ಮತ ಎಣಿಕೆಯ ಸಂಯೋಜಕ ಅಧಿಕಾರಿಯೆಂದು ನೇಮಕ ಮಾಡಲಾಗಿದೆ.
ಮತ ಎಣಿಕೆ ಸುಗಮವಾಗಿ ನಡೆಯಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರ ಒಂದು ಟೇಬಲ್, ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳ ಒಂದು ಟೇಬಲ್, ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳ ಒಂದು ಟ್ಯಾಬೂಲೇಟರ್ ಟೇಬಲ್, ಮತ ಎಣಿಕೆಗಾಗಿ 14 ಟೇಬಲ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.
ಮತ ಎಣಿಕೆಗಾಗಿ ಸ್ಥಾಪಿಸಲಾಗುವ 14 ಟೇಬಲ್‌ಗಳಿಗಾಗಿ ಪ್ರತಿ ಟೇಬಲ್ಲಿಗೆ ತಲಾ ಒಬ್ಬ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಕೇಂದ್ರ ಸರ್ಕಾರದ ಸೇವೆಗೊಳ್ಳಪಟ್ಟಂತಹ ಹೆಚ್ಚುವರಿ ಎಣಿಕೆ ಮೇಲ್ವಿಚಾರಕರನ್ನು ನೇಮಿಸಿದೆ. ಪ್ರತಿ ಟೇಬಲ್‌ಗೆ ಭದ್ರತಾ ಕೋಣೆಯಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸಲು ಒಬ್ಬ ಡಿ-ಗ್ರೂಪ್ ಸಿಬ್ಬಂದಿ ನೇಮಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement