ಮತದಾರರ ಜಾಗೃತಿ ಕಾರ್ಯಕ್ರಮ ಯಶಸ್ವಿ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 3
ತಾಲೂಕಿನ ಯರಗೇರಾದಲ್ಲಿನ ಗುಲ್ಬರ್ಗ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಸಮಾಜಕಾರ್ಯ ಅಧ್ಯಯನ ವಿಭಾಗ, ಸಹಾಯದ ಹಸ್ತ(ರಿ)ಸಂಸ್ಥೆ ರಾಯಚೂರು ಹಾಗೂ ಐಸಿಟಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಂಜಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅಥಿತಿಯಾಗಿ ಸೋಮನಾಥ ರೆಡ್ಡಿ ಗಣದಿನ್ನಿ ವಕೀಲರು ಆಗಮಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಸಮರ್ಥ ಆಡಳಿತಗಾರರ ಅವಶ್ಯಕತೆಯಿದೆ. ಮತದಾನದ ನಿರಾಸಕ್ತಿಯಿಂದ ಈ ದೇಶದ ಪ್ರಗತಿಗೆ ಮಾರಕವಾಗುತ್ತದೆ. ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆಗೆ ಕಡ್ಡಾಯ ಮತದಾನ ಮಾಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಕೇಂದ್ರದ ಐಟಿ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಎಸ್.ಪಾರ್ವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಕಾಶ ಬಳಿಚಕ್ರ, ಡಾ. ಗಾದೆಪ್ಪ, ಡಾ.ಶ್ರೀಧರ ಪಾಲ್ಗೊಂಡಿದ್ದರು. ಡಾ. ರಶ್ಮಿರಾಣಿ ಅಗ್ನಿಹೊತ್ರಿ ಕಡ್ಡಾಯ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷತೆಯನ್ನು ಡಾ. ಪಿ. ಭಾಸ್ಕರ್ ವಹಿಸಿದ್ದರು.
ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಾಸವಿ ಕ್ಲಬ್ನಿಂದ ಜಾಗೃತಿ ರ್ಯಾಲಿ
ರಾಯಚೂರು: ನಗರದಲ್ಲಿ ಇತ್ತೀಚೆಗೆ ವಾಸವಿ ಕ್ಲಬ್ ವತಿಯಿಂದ ಮತದಾರರ ಜಾಗೃತಿ ರ್ಯಾಲಿ ಆಯೋಜಿಸಲಾಗಿತ್ತು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ರ್ಯಾಲಿಗೆ ಚಾಲನೆ ನೀಡಿದರು. ರ್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾರರ ಗಮನ ಸೆಳೆಯಲಾಯಿತು. ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವಂತೆ ಘೋಷಣೆ ಕೂಗಲಾಯಿತು. ರ್ಯಾಲಿಯಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರಾದ ಸಾವಿತ್ರಿ ಪುರುಷೋತ್ತಮ, ಮಾರಂ ತಿಪ್ಪಣ್ಣ, ಜಗದೀಶ್ ಗುಪ್ತಾ, ಕುಂಟ್ನಾಳ ವೆಂಕಟೇಶ್, ಪಿ.ಬಸವರಾಜ್, ಶೆಟ್ಟಿ ನಾಗರಾಜ್ ಸೇರಿದಂತೆ ಆರ್ಯವೈಶ್ಯ ಸಮಾಜದ ವಿವಿಧ ಅಂಗ ಸಂಸ್ಥೆಗಳ ಪ್ರಮುಖರನೇಕರು ಪಾಲ್ಗೊಂಡಿದ್ದರು.