ಕಾಯಂ ಚೀಟಿಯ ಪಡಿತರ ಬಿಡುಗಡೆ
ಗುಲ್ಬರ್ಗ: ಜಿಲ್ಲೆಯಲ್ಲಿ ಕಾಯಂ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಮೇ ಮಾಹೆಯ ಆಹಾರಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಲಾಗುವುದು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಎ.ಟಿ.ಜಯಪ್ಪ ತಿಳಿಸಿದ್ದಾರೆ.
2010ರ ಹಿಂದೆ ನೀಡಲಾದ ಕಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಮತ್ತು ಬಯೋವುಟ್ರಿಕ್ ದೋಷಪೂರಿತವಾಗಿರುವುದರಿಂದ ಇಂತಹ ಪಡಿತರ ಚೀಟಿದಾರರು ಸಹ ತಮ್ಮ ಕುಟುಂಬ ಸದಸ್ಯರ ಫೋಟೋ ಮತ್ತು ಬಯೋವುಟ್ರಿಕ್ಅನ್ನು ಫೋಟೋ ಸೇವಾ ಕೇಂದ್ರಗಳಲ್ಲಿ ನೀಡಲು ಈಗಾಗಲೇ ತಿಳಿಸಲಾಗಿದೆ.
ಇಂತಹ ಪಡಿತರ ಚೀಟಿದಾರರು ಮೊಬೈಲ್ ಮುಖಾಂತರ ಖಈಖಊಃ ಪಡಿತರ ಚೀಟಿ ಸಂಖ್ಯೆ ನಮೂದಿಸಿ 9212357123 ಸಂಖ್ಯೆಗೆ ಇಲಾಖೆಯ ವೆಬ್ಸೈಟಿನಲ್ಲಿ ಬಯೋವುಟ್ರಿಕ್ ಪಡೆಯಲು ಎಸ್.ಎಂ.ಎಸ್. ಮೂಲಕ ನೋಂದಣಿ ಮಾಡಿ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಪಡೆದುಕೊಂಡು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ವರ್ತಕರಿಗೆ ತೋರಿಸಿ ಮೇ 2013ರ ಮಾಹೆಯ ಆಹಾರಧಾನ್ಯ ಮತ್ತು ಸೀಮೆ ಎಣ್ಣೆಯನ್ನು ಪಡೆಯಬೇಕು. ಈ ರೀತಿ ನೋಂದಣಿ ಮಾಡದ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯ ಮತ್ತು ಸೀಮೆಎಣ್ಣೆ ವಿತರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಕಾಂಗ್ರೆಸ್ ಬೆಂಬಲಿಸಿದವರಿಗೆ ಅಲ್ಲಂಪ್ರಭು ಅಭಿನಂದನೆ
ಗುಲ್ಬರ್ಗ: ಕಾಂಗ್ರೆಸ್ಗೆ ಮತ ನೀಡಿ ಬಹುಮತ ಪಡೆಯಲು ಸಹಕರಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೆ, ಮುಖಂಡರಿಗೆ ಹಾಗೂ ಮತದಾರರಿಗೆ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಹೈ. ಕ. ಭಾಗದಲ್ಲಿ ಮತದಾರ ಪ್ರಭುಗಳು ಅತ್ಯಂತ ಸಮಯೋಚಿತವಾದ ನಿರ್ಣಯ ಕೈಗೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಆರಿಸಿ ತಮ್ಮ ಪ್ರೌಢಿಮೆಯನ್ನು ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ.