ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಿಂಗಸ್ಗೂರು, ಕುಷ್ಟಗಿಯಲ್ಲಿ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ

Srinivasa Murthy VN
Updated On : 13 May 2013, 12:25 pm

ಕ.ಪ್ರ. ವಾರ್ತೆ, ಮುದಗಲ್, ಮೇ 12
ವಿಧಾನಸಭೆ ಚುನಾವಣೆಯಲ್ಲಿ ಕುಷ್ಟಗಿ ಮತ್ತು ಲಿಂಗಸಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ಕಾಂಗ್ರೆಸ್ಸಿಗರೇ ಕಾರಣ.
  ರಾಜ್ಯದ ಜನತೆ ಒಳ್ಳೆಯ ತೀರ್ಮಾನ ಕೈಗೊಂಡು ಪಕ್ಷದ ಸಾಮಾಜಿಕ ನ್ಯಾಯಕ್ಕೆ ಬೆಂಬಲ ಸೂಚಿಸಿ ರಾಜ್ಯದ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ ಎಂದು ಕುಷ್ಟಗಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಪಟ್ಟಣದಲ್ಲಿ ಸ್ಥಳೀಯ ಪಪಂ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲರ ಸಹೋದರನ ಮಗಳ ಮದುವೆ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಶ್ಲಾಘನೀಯ: ರಾಜ್ಯದ ಜನತೆ ಉತ್ತಮ ನಿರ್ಣಯ ಕೈಗೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಸೋನಿಯಾ ಗಾಂಧಿ ಕೂಡ ನೇರನಡೆ ನುಡಿಗಾರ, ನಿಷ್ಠೂರವಾದಿ, ಭ್ರಷ್ಟಾಚಾರರಹಿತ ಆಡಳಿತ ನಡೆಸುವ, ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ. ಇದು ನನಗೆ ಸಂತಸ ತಂದಿದೆ. ಉತ್ತಮ ಆಡಳಿತ ನೀಡುವ ಭರವಸೆ ಕೂಡ ನನಗಿದೆ.
 ಅಲ್ಲದೇ ಸೇಡಿನ ರಾಜಕೀಯ ಮಾಡದೇ ರಾಜ್ಯದ ಜನತೆಗೆ ಉತ್ತಮವಾದ ಯೋಜನೆಗಳ ಮೂಲಕ ಕಾಂಗ್ರೆಸ್‌ಗೆ ಹೆಸರನ್ನು ತರುವವರಾಗಿದ್ದಾರೆ.
  ಮೈಸೂರು ಭಾಗದಲ್ಲಿ ದೇವರಾಜ ಅರಸು ನಂತರ ಇವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖರಾಗಿದ್ದಾರೆ. ಅವರಿಗಿಂತ ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಅಭಿಮಾನವುಳ್ಳವರು ಎನ್ನುವ ಹೆಗ್ಗಳಿಕೆ ಇವರಿಗೆ ಸಲ್ಲಲಿದೆ.
ಉತ್ತಮ ಸರ್ಕಾರ: ರಾಜ್ಯದಲ್ಲಿ ಚುನಾವಣಾ ಫಲಿತಾಂಶ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮತ್ತು ಸರ್ವರಿಗೂ ಅನುಕೂಲವಾಗುವ ದಿಕ್ಸೂಚಿ ಎಂದು ಬಣ್ಣಿಸಿದರು. ಹಿಂದಿನ ಯಾವುದೇ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಲೆಕ್ಕಿಸದೇ ಒಳ್ಳೆಯ ಸರಕಾರವನ್ನು ರಾಜ್ಯಕ್ಕೆ ಕೊಡಲಿದೆ ಎಂದರು.
 ಕುಷ್ಟಗಿ ಮತದಾರರಿಗೆ ನನ್ನ ನೇರವಾದಿ ನಡೆ ನುಡಿ, ನ್ಯಾಯ ನಿಷ್ಠೂರತೆ, ನನ್ನ ವಯಕ್ತಿಕ ನಡೆ ನುಡಿ ಒಳ್ಳೆಯದಾಗಿ ಕಂಡು ಬಂದಿರಲಿಕ್ಕಿಲ್ಲ. ಜೊತೆಗೆ ಪಕ್ಷದಲ್ಲಿನ ಆಂತರಿಕ ಜಗಳವೇ ಸೋಲಿಗೆ ಕಾರಣವಾಗಿರಬಹುದು. ನಾನು ಸೇವಾ ಮನೋಭಾವನೆಯ ರಾಜಕೀಯ ನನ್ನದಾಗಿದೆ.
  ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹೇಳುವ ಹಾಗೆ ರಾಜಕೀಯ ಸನ್ಯಾಸ ಸ್ವೀಕಾರ ಮಾಡುವುದಕ್ಕೆ ಅವರು ನನಗೆ ಮಾರ್ಗದರ್ಶಕರಾಗಬೇಕಿಲ್ಲ. ನಾನು ನನಗಾಗಿ ರಾಜಕೀಯ ಮಾಡಿದವನಲ್ಲ. ಜನರ ಸೇವೆಗಾಗಿ ರಾಜಕೀಯ ಮಾಡುವವನು. ಬರುವ ಲೋಕಸಭಾ ಚುನಾವಣೆ  ಅಭ್ಯರ್ಥಿಯೇ ಎನ್ನುವ ಪ್ರಶ್ನೆಗೆ ಹೇಳಿದ ಅವರು ನಾನು ಯಾವುದೇ ರೀತಿ ಆಕಾಂಕ್ಷಿ ಅಲ್ಲ ಎಂದರು.
ಕ್ರಮ: ಲಿಂಗಸಗೂರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವೆಂದರೆ ಕಾಂಗ್ರೆಸ್ ಹಿರಿಯ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ಕಾರಣವಾಗಿದೆ.
 ಅದಕ್ಕೆ ಈಗಾಗಲೇ ಪರಾಜಿತ ಅಭ್ಯರ್ಥಿ ಜಿಲ್ಲಾಧ್ಯಕ್ಷರಿಗೆ, ಕೆಪಿಸಿಸಿಗೆ ದೂರು ಸಲ್ಲಿಸಿರುವುದು ತಿಳಿದು ಬಂದಿದೆ. ನಾನು ಕೂಡ ಈಗಾಗಲೇ ಅವರು ಕೇಳಿದ ಹಾಗೆ ವರದಿಯನ್ನು ನೀಡಿದ್ದೇನೆಂದರು. ಪಕ್ಷ ವಿರೋಧಿ ಚಟುವಟಿಕೆಗಾಗಿ ಸತ್ಯಶೋಧನಾ ನೀತಿ ರಚಿಸಿದ್ದಾರೆ.
 ಆ ಸಮಿತಿ ಅಂತಹವರ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದರು. ಈ ಸಮಯದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನ್, ಹಿರಿಯ ಮುಖಂಡ ನೀಲಕಂಠಪ್ಪ ಸುಂಕದ, ಜಿಪಂ ಆರೋಗ್ಯ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅದ್ಯಕ್ಷ ಭೂಪನಗೌಡ ಕರಡಕಲ್ಲ, ರಾಘವೇಂದ್ರ ದೇಶಪಾಂಡೆ, ಮಹಾಂತೇಶ ಪಾಟೀಲ  ಇದೇ ಸಂದರ್ಭದಲ್ಲಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement