ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮನಸೆಳೆದ ಮಹಿಳಾ ವೀರಗಾಸೆ

Srinivasa Murthy VN
Updated On : 14 May 2013, 10:25 am

ಸಿಂಧನೂರು: ತಾಲೂಕಾಡಳಿತ ಮತ್ತು ಬಸವಕೇಂದ್ರ, ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರ ಸೇರಿದಂತೆ ಇನ್ನಿತರ ಶರಣರ ಭಾವಚಿತ್ರಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು.
ಮೆರವಣಿಗೆಯಲ್ಲಿ ವಿಶೇಷವಾಗಿ ಹೊನ್ನಳಿ ತಾಲೂಕಿನ ನರಸಗುಂಡನಳ್ಳಿಯಿಂದ ಜನಪದ ಕೀಲುಕುದುರೆ ಪ್ರದರ್ಶನ ಮತ್ತು ಮಂಗಳೂರಿನ ಮಹಿಳಾ ತಂಡದವರ ವೀರಗಾಸೆ ಕುಣಿತ ಗಮನಸೆಳೆಯಿತು. ಮೆರವಣಿಗೆಯುದ್ದಕ್ಕೂ ಶರಣರ ಘೋಷಣೆಗಳನ್ನು ಕೂಗುತ್ತಾ ಬಸವಣ್ಣನವರನ್ನು ವಚನಗಳು ಸ್ಮರಿಸುತ್ತಾ ಜನಮನ ಸೆಳೆದವು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತ ನಾಸೀರ್ ಅಲಿ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ, ನ.ಯೋ.ಪ್ರಾ.ಅಧ್ಯಕ್ಷ ಎನ್.ಶಿವನಗೌಡ ಗೊರೆಬಾಳ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಎಪಿಎಂಸಿ ನಿರ್ದೇಶಕ ಶರಣೇಗೌಡ ಗಿಣಿವಾರ, ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಕಾರ್ಯದರ್ಶಿ ಎಚ್.ಬಸವರಾಜ, ಹಡಪದ ಸಮಾಜದ ಅಧ್ಯಕ್ಷ ಶಂಕ್ರಪ್ಪ ಕರಡೋಣಿ, ಮೇದಾರ ಸಮಾಜದ ಅಧ್ಯಕ್ಷ ಬಸವರಾಜ, ಬಸವಕೇಂದ್ರದ ವೀರಭದ್ರಪ್ಪ ಕುರುಕುಂದಿ, ಸಿದ್ರಾಮಪ್ಪ ಮಾಡಸಿರವಾರ, ಶಂಬನಗೌಡ, ಮಹಿಳಾ ಬಸವಕೇಂದ್ರದ ಅಧ್ಯಕ್ಷೆ ದೇವಿರಮ್ಮ, ಬಸಮ್ಮ ತಾಳಿಕೋಟೆ, ಯುವ ಬಸವಕೇಂದ್ರದ ಅಧ್ಯಕ್ಷ ಶೇಖರ ಯರದಿಹಾಳ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಬಸವ ತತ್ವ ಪರಿಪಾಲನೆಗೆ ಸಲಹೆ
ಸಿಂಧನೂರು: 12ನೇ ಶತಮಾನದ ಯುಗ ಪುರುಷ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆಯ ಸಮಾಜ ನಿರ್ಮಾಣದತ್ತ ಸಾಗುವಂತೆ ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಬಳೇಶ ಕರೆ ನೀಡಿದರು.
ತಾಲೂಕಿನ ಬಳಗಾನೂರು ಗ್ರಾಮ ಪಂಚಾಯಿತಿ ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಣ್ಣನವರು ಶೋಷಿತ ಸಮುದಾಯಗಳ ಧ್ವನಿಯಾಗಿ ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಶ್ರಮಜೀವಿ ಬಸವಣ್ಣ ಎಂದು ಬಣ್ಣಿಸಿದರು. ಪತ್ರಕರ್ತ ಡಾ. ಎಸ್.ಎಸ್. ಜಾಗೀರದಾರ, ದಲಿತ ಮುಖಂಡ ಬಿ.ತಿಕ್ಕಯ್ಯ, ಪಿಡಿಒ ನಾಗೇಶ ಮಾತನಾಡಿದರು.
ಸದಸ್ಯರಾದ ಜಗದೀಶ ಗುತ್ತೇದಾರ, ನಾಗರಾಜ ಕೊಂಡರಡ್ಡಿ, ಗಣೇಶ ಡಿಶ್, ಹನುಮಂತ ಭಜಂತ್ರಿ, ರಾಮಣ್ಣ ಉದ್ಬಾಳ, ಹನುಮಂತ ಗೊಡೆಕರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವನಗೌಡ ಶಿವಕುಮಾರಗೌಡ ಅಳ್ಳಳ್ಳಿ, ನಾಗಬಸಪ್ಪ, ಎಂ.ಡಿ. ಆಲಂಸಾಬ, ಮೈಬೂಬಪಾಷ್ ಅತ್ತಾರ, .ಟಿ ಅಮರೇಶ ನಾಯಕ, ಮಾಜಿ ಅಧ್ಯಕ್ಷ ಯಂಕಪ್ಪ ನಾಯಕ ಮರಿದೇವಪ್ಪ ಪೂಜಾರಿ, ಅಮರೇಶ ಉಪ್ಪಾರ, ಮಲ್ಲಿಕಾರ್ಜುನ ಹಾಲಾಪುರು, ಬಲವಂತರಾಯಗೌಡ, ವೀರೇಶ ಸಜ್ಜನ ಮತ್ತಿತರರು ಇದ್ದರು. ಪಂಪಾಪತಿ ನಾಯಕ ಸ್ವಾಗತಿಸಿದರು. ತಿರುಪತಿ ಉಪ್ಪಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement