ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸಾಮೂಹಿಕ ವಿವಾಹಗಳಿಂದ ವೆಚ್ಚದಲ್ಲಿ ಕಡಿತ'

Srinivasa Murthy VN
Updated On : 14 May 2013, 10:24 am

ಯಾದಗಿರಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡವಾಣ ಹಾಕಿದಂತಾಗುತ್ತದೆ. ಅಲ್ಲದೆ ಸಮಾಜದಲ್ಲಿ ಸಾಮರಸ್ಯ ಮೂಡಲು ಇದು ನೆರವಾಗುತ್ತದೆ ಎಂದು ಬೆಳಗಾವಿ ಜಿಲ್ಲೆಯ ಇಚಲಕರಂಜಿಯ ಶಿವಾನಂದ ಭಾರತೀ ಸ್ವಾಮೀಜಿ ನುಡಿದರು.
ಶಹಾಪುರ ತಾಲೂಕಿನ ಗೊಂದೆನೂರ ಗ್ರಾಮದಲ್ಲಿ ಸಿದ್ಧಪುರುಷ ಬಸ್ಸಯ್ಯತಾತನವರ ಪುಣ್ಯಶ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 51 ನವ ದಂಪತಿಗೆ ಆಶೀರ್ವದಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಿಂದ ಕುಟುಂಬ ವರ್ಗಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಅಲ್ಲದೇ ಮುಂದಿನ ಜನಾಂಗಕ್ಕೆ ಇದು ಉತ್ತಮ ದಾರಿದೀಪ. ಪುಣ್ಯಾಶ್ರಮದ ಪೀಠಾಧಿಪತಿ ಲಿಂಗಣ್ಣ ತಾತನವರ ಕೈಂಕರ್ಯ ಶ್ಲಾಘನೀಯವಾದದ್ದು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನವದಂಪತಿ ಸಾಮರಸ್ಯ ಜೀವನ ನಡೆಸುವಂತೆ ಶ್ರೀಗಳು ಹಾರೈಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಕೌಳೂರ, ಕೆಎಂಎಫ್ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್, ಮಲ್ಲರೆಡ್ಡೆಪ್ಪಗೌಡ ಅರಕೇರಾ, ವೆಂಕಣ್ಣಗೌಡ ಗೋರೆಬಾಳ ಹುಬ್ಬಳ್ಳಿ, ಅಮರೇಗೌಡ ಯಾಟಗಲ್, ಸಿದ್ರಾಮರೆಡ್ಡಿ ಚೆನ್ನೂರ, ಸಿದ್ದಲಿಂಗಪ್ಪಗೌಡ ಕರಕಳ್ಳಿ, ಬಸವರಾಜಪ್ಪಗೌಡ ದಳಪತಿ ಮುಷ್ಟೂರ, ಸಾಯಬಣ್ಣಾ ವರಕೇರಿ, ಚಂದ್ರಾಯ ಕೊಂಕಲ್, ಲಿಂಗಣ್ಣಗೌಡ ಕೊಪ್ಪೂರ, ಬಸವರಾಜ ಕೊದಂಡ, ಗೋಪಾಲ ನಾಯಕ್, ನಿಂಗಣ್ಣ ಜಡಿ ಇತರರು ಇದ್ದರು.
ಬಸವರಾಜ ಯಾಟಗಲ್ ನಿರೂಪಿಸಿದರು. ಅಂಬಣ್ಣ ಸ್ವಾಗತಿಸಿದರು. ಶಂಭುಲಿಂಗ ವಂದಿಸಿದರು.

ಸಿದ್ದು ಸಿಎಂ: ಅಭಿಮಾನಿಗಳ ವಿಜಯೋತ್ಸವ
ಕೆಂಭಾವಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೆಂಭಾವಿಯಲ್ಲಿ ಕನಕ ಯುವ ಸೇನೆಯ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಸಂಘದಿಂದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದು, ಅಭಿನವ ದೇವರಾಜ ಅರಸು ಎಂದೇ ಖ್ಯಾತರಾಗಿದ್ದಾರೆ. ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ಅಭಿವೃದ್ಧಿ ಹರಿಕಾರ ಎಂಬ ಹೆಸರಿಗೆ ಪಾತ್ರರಾಗಲಿ ಎಂದು ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement