ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಲ್ಲಿದ್ದಲು ಹಗರಣ: ಆರ್ಟಿಪಿಎಸ್ಗೆ ಸಿಬಿಐ ಭೇಟಿ

Srinivasa Murthy VN
Updated On : 25 May 2013, 11:28 am

ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಸಿಬಿಐ ಅಧಿಕಾರಿ ದಾಸ್ ಅವರು ಶುಕ್ರವಾರ ಕಲ್ಲಿದ್ದಲು ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ಲಭ್ಯವಿರುವ ಕಲ್ಲಿದ್ದಲು, ಕಲ್ಲಿದ್ದಲಿನ ಬಳಕೆ ಪ್ರಮಾಣ ಸೇರಿದಂತೆ ಮತ್ತಿತರೆ ವಿಚಾರಗಳ ಕುರಿತು ಅವರು ಕೆಪಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಿಎಜಿ ವರದಿಯಲ್ಲಿ ಕೆಪಿಸಿಯು ಕಲ್ಲಿದ್ದಲು ಖರೀದಿಗೆ ಸಂಬಂಧಿಸಿ ಹೆಚ್ಚುವರಿಯಾಗಿ 424.25 ಕೋಟಿ ಪಾವತಿಸಿದ ಬಗ್ಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲ ಹೆಚ್ಚುವರಿಯಾಗಿ ಪಾವತಿಸಿದ್ದರೂ ಕಲ್ಲಿದ್ದಲು ಗಣಿ ಕಂಪನಿಗಳು ಕಳಪೆ ಕಲ್ಲಿದ್ದಲು ಪೂರೈಸಿದ ಬಗ್ಗೆ ವಿಚಾರ ಪ್ರಸ್ತಾಪಿಸಿರುವುದರಿಂದ ಸಿಬಿಐ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿ ವಿವರ ಪಡೆಯಲು ಆರ್ಟಿಪಿಎಸ್ಗೆ ಭೇಟಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಿಐ ಡಿವೈಎಸ್ಪಿ ದಾಸ್ ಅವರು, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯಾಧರಿಸಿ ಮಾಹಿತಿ ಸಂಗ್ರಹಿಸಲು ಸಿಬಿಐ ಕೇಂದ್ರ ಕಚೇರಿಯ ಸೂಚನೆ ಮೇರೆಗೆ ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಆರ್ಟಿಪಿಎಸ್ 3ನೇ ಘಟಕ ಸ್ಥಗಿತ
ರಾಯಚೂರು:
ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರನೇ ಘಟಕವು ಗುರುವಾರ ತಡರಾತ್ರಿ ವಿದ್ಯುತ್ ಉತ್ಪಾ ದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಘಟಕದಲ್ಲಿ ಕಂಡುಬಂದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೆಪಿಸಿ ಅಧಿಕಾರಿಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಸದ್ಯ ವಿದ್ಯುತ್ ಕೇಂದ್ರದ ಇಳಿದ 7 ಘಟಕಗಳಿಂದ ಒಟ್ಟು 1200ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement