ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಖೋ ಖೋ: ಲಿಂಗಸ್ಗೂರು ತಂಡಕ್ಕೆ ಗೆಲವಿನ ಸಿಹಿ

Srinivasa Murthy VN
Updated On : 27 Nov 2013, 10:39 am

ಕನ್ನಡಪ್ರಭ ವಾರ್ತೆ  ಸಿಂಧನೂರು  ನ.26
ಕ್ರೀಡೆಗಳ ಬೆಳವಣಿಗೆಗೆ ಕ್ರೀಡಾಭಿಮಾನಿಗಳ ಸಹಾಯ, ಸಹಕಾರ ಅಗತ್ಯ. ಕೀಡಾಪಟುವಿಗೆ ಕ್ರೀಡೆಯ ಸಾಧಕ ಬಾದಕಗಳು ನೆನಪಿನಲ್ಲಿರುತ್ತವೆ. ಕ್ರೀಡಾಪಟುವಿಗೆ ಮೂಲ ಸೌಕರ್ಯ ದೊರೆಯುವಂತಾಗಲು ಎಲ್ಲರೂ ಶ್ರಮಿಸಬೇಕೆಂದು ಎಪಿಎಂಸಿ ಮಾಜಿ ನಿರ್ದೇಶಕ ಶೇಖರಪ್ಪ ಮೇಟಿ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೆಂದ್ರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಯಚೂರು ಜಿಲ್ಲಾ ಅಮೇಚೂರ ಖೋಖೋ ಅಸೋಶಿಯೇಶನ್ ಹಾಗೂ ಗ್ರಾಮದ ಉದಯಾ ಕ್ರೀಡಾ ಕ್ಲಬ್, ಹಳೆಯ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಖೋಖೋ ಅಸೋಶಿಯೇಶನ್ ಅಧ್ಯಕ್ಷ ಸಂಗಪ್ಪ ಬಾಗೇವಾಡಿ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲು ಬಳಗಾನೂರು ಗ್ರಾಮದಲ್ಲಿ ನಡೆದ ಈ ಪಂದ್ಯಾವಳಿಗಳು ವೇದಿಕೆಯಾಗಲಿವೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ ಮಾತನಾಡಿದರು.
ಲಿಂಗಸ್ಗೂರು ತಂಡಕ್ಕೆ ಮೊದಲ ಬಹುಮಾನ: ಪಂದ್ಯಾವಳಿಯಲ್ಲಿ ಲಿಂಗಸ್ಗೂರು ಖೋಖೋ ತಂಡ ಪ್ರಥಮ ಬಹುಮಾನ ಗಳಿಸಿತು. ಅರೆಕೇರಾ ದ್ವಿತೀಯ ಬಹುಮಾನವನ್ನು ಗ್ರಾಮದ ಉದಯ ಕ್ರೀಡಾಕ್ಲಬ್‌ನ ತಂಡ ತೃತೀಯ ಬಹುಮಾನ ಗಳಿಸಿತು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ, ಉಪಾಧ್ಯಕ್ಷ ಎಚ್.ಮಹಾಬಳೇಶ, ಸದಸ್ಯ ಎಸ್.ಮೌನೇಶಗೌಡ ಗದ್ದಿಗೌಡ್ರು, ಮಲ್ಲನಗೌಡಗದ್ದಿ, ಮಹೇಶ ದುಮಖಂಡಿ, ಹನುಮೇಶ ಮೀಲ್ಟ್ರಿ, ಸಂತೋಷ ಅಂಬ್ಲಿ, ದೈಹಿಕ ಶಿಕ್ಷಕ ಮಹಾದೇವಪ್ಪ, ಮೌನೇಶ ಜಿ.ಪಿ, ಪಂಪಾಪತಿ ಗುತ್ತೇದಾರ, ರಾಘವೇಂದ್ರ ವೈನ್ಸ್, ಟಿ.ಸಿದ್ರಾಮಪ್ಪ, ಪಂಪಾಪತಿ ನಾಯಕ, ಹನುಮಂತ ಭಜಂತ್ರಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ವಿಜೇತ ತಂಡದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.
ಸೇವೆ ಸಲ್ಲಿಸಿದ ಶಿಕ್ಷಕರಿಗೆ ಕ್ರೀಡಾ ಪ್ರೇಮಿಗಳಿಗೆ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿ ಬಳಗದವರಿಗೆ ಬಹುಮಾನ ಪ್ರಾಯೋಜಕರಿಗೆ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಉಪನ್ಯಾಸಕ ಎಚ್.ಸುರೇಶ ನಿರೂಪಿಸಿದರು. ಪ್ರಾಚಾರ್ಯ ಪಂಪಾಪತಿ ಗುತ್ತೇದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement