'ಪಾಲಕರೇ, ಬಾಲ್ಯವಿವಾಹ ಪದ್ಧತಿ ವಿರೋಧಿಸಿ'
ದೇವದುರ್ಗ: ಬಾಲ್ಯವಿವಾಹ ಅನಿಷ್ಟ ಪದ್ಧತಿಯಾಗಿದ್ದು, ಪಾಲಕರು ಬಾಲ್ಯವಿವಾಹಕ್ಕೆ ಪ್ರೋತ್ಸಾಹಿಸುವ ಕಾರ್ಯ ಮಾಡದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಲ್ಲಮ್ಮ ಮೇಟಿ ಸಲಹೆ ನೀಡಿದರು.
ತಾಲೂಕಿನ ಗಬ್ಬೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನೆಹರು ಯುವ ಕೇಂದ್ರ ರಾಯಚೂರು ಮತ್ತು ಬಂಜಾರಾ ಸಾಂಸ್ಕೃತಿಕ ಕಲಾ ಮಂಡಳಿ, ಯುನಿಸೆಫ್ನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುನಿಸೆಫ್ನ ಸಿದ್ದಲಿಂಗಪ್ಪ, ಡಾ. ಎನ್.ಧರ್ಮಣ್ಣ, ಮುಖ್ಯೋಪಾಧ್ಯಾಯ ಸುಭಾಶಸಿಂಗ್ ಮಾತನಾಡಿದರು. ರವಿಕುಮಾರ, ರಮೇಶ ಯಾಟಿ, ಬಸಲಿಂಗಪ್ಪ, ದುರ್ಗಪ್ಪ ಶಿವಲಿಂಗ ಜಗದೀಶ ಸೇರಿ ಕಾಲೇಜು, ಪ್ರೌಢಶಾಲೆಯ ಮಕ್ಕಳು ಉಪಸ್ಥಿತರಿದ್ದರು.