ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾಚಿದೇವರ ಜಯಂತ್ಯುತ್ಸವ ಆಚರಣೆ

Srinivasa Murthy VN
Updated On : 27 Nov 2013, 10:36 am

ಮಸ್ಕಿ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಮಡಿವಾಳ ಶ್ರೀಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು.
ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ಮಾಚಿದೇವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕದ ನಂತರ ಮಹಿಳೆಯರ ಕಳಶ ಕನ್ನಡಿ ಹಾಗೂ ಸಕಲ ವಾದ್ಯಗಳೊಂದಿಗೆ ಮಾಚಿದೇವರ ಭಾವಚಿತ್ರದ ಮೆರವಣಿಗೆ ಮುದಗಲ್ ಕ್ರಾಸ್, ಅಗಸಿ, ಮೇನ್ ಬಜಾರ್, ತೇರ ಬಜಾರ್, ಕನಕ ವೃತ್ತ, ಹಳೇ ಬಸ್ ನಿಲ್ದಾಣ ಸೇರಿ ಪ್ರಮುಖ ಬೀದಿಗಳಲ್ಲಿ ಸಾಗಿತು.
ಮಡಿವಾಳ ಸಮಾಜದ ಅಧ್ಯಕ್ಷ ವೀರಣ್ಣ ಕಾರ್ಲಕುಂಟಿ, ದೇವರಡ್ಡೆಪ್ಪ, ತಿರುಪತಿ ಮಡಿವಾಳ, ನಿರುಪಾದಿ, ಮಲ್ಲಯ್ಯ, ಗ್ರಾಪಂ ಸದಸ್ಯ ರವಿಕುಮಾರ, ಮಲ್ಲಿಕಾರ್ಜುನ ಬಂಡಿ, ದುರುಗಪ್ಪ ಉಡೇಜಾಲಿ, ಮೌನೇಶ ಮಡಿವಾಳ, ಮಲ್ಲಮ್ಮ ಇನ್ನಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement