ಯುವಜನರಿಗೆ ಸೇವೆಯ ಮನಸ್ಸು ಅವಶ್ಯ: ಬಸವರಾಜ
ಸಿಂಧನೂರು: ತಾಲೂಕಿನ ತುರ್ವಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರವನ್ನು ಏಳುಮೈಲ್ ಕ್ಯಾಂಪ್‌ನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಗುರನಗೌಡ ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯುವಜನರಲ್ಲಿ ಸೇವಾ ಮನೋಭಾವನೆ ಅವಶ್ಯ. ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸಬೇಕಾದರೆ ಯುವಜನರು ಕಂಕಣಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದರು ಕರೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಬುಜ್ಜಯ್ಯ, ಗುಂಜಳ್ಳಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ನರಸಿಂಹ, ಶೇಖರಪ್ಪ, ಸೋಮನಾಥ, ಕನಕಪ್ಪ ಛತ್ರ, ಅಂಬಣ್ಣ, ಹನುಮಂತಯ್ಯ ಶ್ರೇಷ್ಠಿ, ನಿಂಗಪ್ಪ ನರೇಗಡದ, ಸಿ.ಎಚ್.ಪದ್ಮಾವತಿ, ಶರಣಬಸಪ್ಪ ಮುಖ್ಯಗುರುಗಳು, ಉಪನ್ಯಾಸಕರಾದ ಸಾಯೇಬಣ್ಣ, ಮಲ್ಲಪ್ಪ, ರಡ್ಡೆಪ್ಪ, ವೆಂಕಟೇಶ ಇನ್ನಿತರರು ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕ ಮಲ್ಲಪ್ಪ ಸ್ವಾಗತಿಸಿದರು. ಉಪನ್ಯಾಸಕ ಶರಣಪ್ಪ ನಿರೂಪಿಸಿದರು. ವೆಂಕಟೇಶ ವಂದಿಸಿದರು.
10ನೇ ವಾರ್ಡ್ ಸಿಸಿ ರಸ್ತೆಗೆ ಶಂಕುಸ್ಥಾಪನೆ
ಸಿಂಧನೂರು: ನಗರದ 10ನೇ ವಾರ್ಡ್‌ಗೆ ಎಸ್‌ಎಫ್‌ಸಿ ಯೋಜನೆ ಅಡಿ 3 ಲಕ್ಷ ವೆಚ್ಚದ ಸಿಸಿ ರಸ್ತೆಗೆ ನಗರಸಭೆ ಅಧ್ಯಕ್ಷ ಸೈಯದ್ ಜಾಫರ ಜಾಗೀರದಾರ, ಸದಸ್ಯೆ ಅನಿತಾ ಸಿದ್ರಾಮೇಶ ಮನ್ನಾಪೂರ ಶಂಕುಸ್ಥಾಪನೆ ನೆರವೇರಿಸಿದು. ಅನಿತಾ ಮಾತನಾಡಿ, ಹಳೇ ಬಜಾರ್ ರಸ್ತೆಯಿಂದ ಶೇಖರಯ್ಯಸ್ವಾಮಿ ಮನೆವರೆಗೆ 68 ಮೀಟರ್ ಸಿಸಿ ರಸ್ತೆಗೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಗುತ್ತೇದಾರರು ಗುಣ ಮಟ್ಟದ ಕೆಲಸ ಮಾಡಬೇಕೆಂದು ಸೂಚಿಸಿದರು. ಸದಸ್ಯರಾದ ಸಣ್ಣ ವೀರಭದ್ರಪ್ಪ ಕುರುಕುಂದಿ, ಪ್ರಭುರಾಜ, ರಾಜು ದತ್ತುರಾವ್, ಚಂದ್ರು ಮೈಲಾರ, ಅಕ್ತಾರ ಪಾಷ, ಬಸವರಾಜ ಮಸ್ಕಿ, ಪೂರ್ಣಚಂದ್ರರಾವ್, ಬಸವಲಿಂಗಯ್ಯ ಇದ್ದರು.