ಲಿಂಗಪ್ಪ ಅಪ್ರಬುದ್ಧ ಹೇಳಿಕೆ ನಿಲ್ಲಿಸಲಿ: ಹುಸೇನ್
ಸಿಂಧನೂರು: ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನಗರಸಭಾಧ್ಯಕ್ಷ ಜಾಫರ ಅಲಿ ಜಾಗೀರದಾರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಲಿ ಎಂದು ಯುವ ಕಾಂಗ್ರೆಸ್ ತಾಲೂಕು ಯುವ ಘಟಕದ ಅಧ್ಯಕ್ಷ ಮುರ್ತುಜಾ ಹುಸೇನ್ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ತಮ್ಮ ಜೆಡಿಎಸ್ ಅಧಿಕಾರಾವಧಿಯಲ್ಲಿ ನಗರಸಭೆ ಆಡಳಿತ ಹೇಗಿತ್ತು ಎಂಬುದನ್ನು ಜನತೆ ಕಂಡಿದ್ದಾರೆ. ಅವರ ಆಡಳಿತಕ್ಕೆ ರೋಸಿ ಹೋಗಿ ಕಾಂಗ್ರೆಸ್ಗೆ ಸ್ಪಷ್ಟ ಬೆಂಬಲ ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ವಿರೋಧ ಪಕ್ಷದವರು ಮೊದಲು ಸಹಕಾರ ನೀಡಲಿ. ಟೀಕೆ ಮಾಡುವುದನ್ನು ಕೈಬಿಡಲಿ ಎಂದು ಮನವಿ ಮಾಡಿದ್ದಾರೆ.