ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾರ್ಥಿ, ಯುವಜನ, ಮಹಿಳೆಯರ ಸಮಾವೇಶ

Srinivasa Murthy VN
Updated On : 27 Nov 2013, 10:36 am

ರಾಯಚೂರು: ನಗರದ ಸರ್ಕಾರಿ ನೌಕರರ ಭವನ ಸ್ಪಂದನದಲ್ಲಿ ನ.27ರಂದು ವಿದ್ಯಾರ್ಥಿ, ಯುವಜನ, ಮಹಿಳೆಯರ ಜಿಲ್ಲಾ ಸಮಾವೇಶವನ್ನು ಆಯೋಜಿಸಲಾಗಿದೆ.
ಎಐಎಂಎಸ್‌ಎಸ್, ಎಐಡಿವೈಓ ಹಾಗು ಎಐಡಿಎಸ್‌ಓ ಸಂಘಟನೆಗಳು ಜಂಟಿಯಾಗಿ ನಿರ್ಭಯ ಘಟನೆ ಮರುಕಳಿಸದಿರಲಿ ಎನ್ನುತ್ತಾ ಮಹಿಳೆಯರ ಮೇಲಿನ ಅಪರಾದಗಳನ್ನು ತಡೆಗಟ್ಟಲು ಆಗ್ರಹಿಸಿ ಆಯೋಜಿಸಿರುವ ಸಮಾವೇಶವು ಅಂದು ಬೆಳಗ್ಗೆ 11ಕ್ಕೆ ನಡೆಯಲಿದೆ.
ಕಡಿವಾಣ: ಮಹಿಳೆಯರನ್ನು ಭೋಗದ ವಸ್ತುವಾಗಿ ಕಾಣುವ ಪುರುಷ ಪ್ರಧಾನ ಮನೋಭಾವನೆ ತೊಡೆದುಹಾಕಬೇಕು. ನೈಜ ಪ್ರಜಾತಾಂತ್ರಿಕ ಮೌಲ್ಯಗಳನ್ನು ಬೆಳೆಸಿ ಮಹಿಳೆಯರ ಘನತೆ-ಗೌರವ ಎತ್ತಿ ಹಿಡಿಯಬೇಕು. ಉನ್ನತ ಆದರ್ಶ, ಮೌಲ್ಯಗಳ ಆಧಾರದಲ್ಲಿ ಹೊಸ ಸಮಾಜವನ್ನು ಸ್ಥಾಪಿಸಬೇಕು. ಆಗ ಮಾತ್ರ  ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಹೆಣ್ಣು-ಗಂಡು ಜತೆಗೂಡಿಯೇ ಮಹಿಳೆಯರ ಘನತೆ ಕುಂದಿಸುವ ಅನಿಷ್ಟ ಕಿತ್ತೊಗೆಯಬೇಕು. ಆದ್ದರಿಂದ ಈ ಸಾಂಸ್ಕೃತಿಕ-ಸಾಮಾಜಿಕ ಆಂದೋಲನ ಕೈಗೆತ್ತಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ವಿವಿಧ ಸಂಘಟನೆಗಳು ತಿಳಿಸಿವೆ. ನ.27ರಂದು ನಡೆಯುವ ಸಮಾವೇಶದಲ್ಲಿ ಎಚ್‌ಕೆಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಚೆಟ್ಟಿ, ಮಸ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕುಮಾರಸ್ವಾಮಿ, ವಕೀಲರಾದ ಶಿವರಾಜ ಪಾಟೀಲ್ ಹಿರೇಬಾದರದಿನ್ನಿ ಹಾಗೂ ವಕೀಲ ವೀಣಾ ಪ್ರಮೋದ್, ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಬಿ. ರವಿ, ಎಐಡಿವೈಒ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್ ಭಾಷಣಕಾರರಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆ ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ ವಹಿಸುವರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ ಚೀಕಲ ಪರ್ವಿ ಮಾತನಾಡುವರು. ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಂಘಟನೆಗಳು ಮನವಿ ಮಾಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement