ಕಾಂಗ್ರೆಸ್ ಮುಖಂಡ ವೀರೇಶಪ್ಪ ಮೇಲೆ ಕೃತ್ಯ
ಸಿಂಧನೂರು: ಕಾಂಗ್ರೆಸ್ ಮುಖಂಡ ಮಾಡಸಿರವಾರ ವೀರೇಶಪ್ಪ ಅವರ ಮೇಲೆ ಗುರುವಾರ ಮಧ್ಯಾಹ್ನ ಐದಾರು ಜನರ ಗುಂಪು ಏಕಾಏಕಿಯಾಗಿ ದಾಳಿ ಮಾಡಿ ಹಲ್ಲೆ ಎಸಗಿದ ಘಟನೆ ಜರುಗಿದೆ.
ವೀರೇಶಪ್ಪ ತಹಸೀಲ್ದಾರರನ್ನು ಕೆಲಸದ ನಿಮಿತ್ತ ಭೇಟಿಯಾಗಿ ಕಚೇರಿಯಿಂದ ಹೊರ ಬರುತ್ತಿದ್ದಾಗ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಲಿಂಗರಾಜ ಹೊಸಳ್ಳಿ ಹಾಗೂ ಐದಾರು ಜನರ ಗುಂಪು ವೀರೇಶಪ್ಪ ಅವರನ್ನು ಮಾತನಾಡಿಸುವ ನೆಪದಲ್ಲಿ ಬದಿಗೆ ಕರೆದು “ÈÚáÛf ಸಂಸದ ವಿರುಪಾಕ್ಷಪ್ಪನವರ ವಿರುದ್ಧ ಹೇಳಿಕೆ ಕೊಡುವಷ್ಟು ¥æàsÚuÈÚ«ÛW¦§¾æßÞ«ÚÅæÞ...’ ಎಂದು ಏಕಾಏಕಿ ಅವರ ಮೈಮೇಲಿನ ಬಟ್ಟೆ ಹರಿದು ಹಾಕಿ ಚಪ್ಪಲಿಯಿಂದ ಥಳಿಸಿದರು. ಇದರಿಂದ ತೀವ್ರ ಘಾಸಿಗೊಂಡ ವೀರೇಶಪ್ಪ ಒಳಉಡುಪಿನ ಮೇಲೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತನ್ನನ್ನು ಬಿಡಿಸಿಕೊಳ್ಳಿ ಎಂದು ಮೊರೆಯಿಟ್ಟು ಓಡಲಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಲ್ಲೆ ನಡೆಸಿ ಕಾಲ್ಕಿತ್ತರು: ತಹಸೀಲ್ದಾರ್ ಕಚೇರಿ ಆವರಣದಲ್ಲೇ ಹಾಡಹಗಲೇ ಹಲ್ಲೆ ನಡೆಯುತ್ತಿದ್ದರೂ ಸಾರ್ವಜನಿಕರು ನೋಡುತ್ತಾ ನಿಂತಿದ್ದರೇ ವಿನಃ ಒಬ್ಬರೂ ಬಿಡಿಸಲು ಮುಂದೆ ಬರಲಿಲ್ಲ. ಆದರೆ ವೀರೇಶಪ್ಪನ ಆರ್ತನಾದ ಕೇಳುತ್ತಿದ್ದಂತೆ ದೂರದಿಂದ ಗಮನಿಸಿದ ದಸಂಸ ಚಿಟ್ಟಿಬಾಬು ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಮಾದಿಗ ದಂಡೋರ ಹೋರಾಟ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಜಯರಾಣಿ ಕೂಡ ಗಲಾಟೆ ಬಿಡಿಸಲು ಮುಂದಾದರು. ಆಗ ಹಲ್ಲೆ ನಡೆಸುತ್ತಿದ್ದವರು ಭಯಭೀತರಾಗಿ ವೀರೇಶಪ್ಪನ ಬಟ್ಟೆಗಳನ್ನೆಲ್ಲ ಹರಿದು ಹಾಕಿ ಓಡಿ ಹೋದರು ಎಂದು ಚಿಟ್ಟಿಬಾಬು ಹೇಳಿದರು.
ತಹಸೀಲ್ದಾರ್ ಕಚೇರಿ ಮುಂದೆ ಏಕಾಏಕಿ ನಡೆದ ಗಲಾಟೆಯಿಂದಾಗಿ ಕೆಲಕಾಲ ಸಾರ್ವಜನಿಕರಲ್ಲಿ ಭೀತಿ ಉಂಟಾಗಿತ್ತು. ಸಂಜೆ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪುಗಳ ನೂರಾರು ಜನ ಸೇರಿದ್ದರು. ಈ ಕುರಿತು ಶಹರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಲಿಂಗರಾಜ ಹೊಸಳ್ಳಿ, ಬೆಂಬಲಿಗರಿಂದ ಹಲ್ಲೆ'
ವಿರುಪಾಕ್ಷಪ್ಪ ವಿರುದ್ಧ ಹೇಳಿಕೆ ನೀಡಿದ್ದೇ ಕಾರಣ: ಠಾಣೆಯಲ್ಲಿ ವಿರೇಶಪ್ಪ ಆರೋಪ
ಸಿಂಧನೂರು: ನಗರದಲ್ಲಿ ಕೇವಲ ದೊಡ್ಡವರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಸಾಮಾನ್ಯರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಾಡಸಿರವಾರ ವೀರೇಶಪ್ಪ ನೊಂದು ಹೇಳಿದರು.
ಇಲ್ಲಿನ ಶಹರ್ ಪೊಲೀಸ್ ಠಾಣೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಮಾಜಿ ಸಂಸದ ವಿರೂಪಾಕ್ಷಪ್ಪ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದನ್ನೇ ಗುರಿಯಾಗಿಟ್ಟುಕೊಂಡು ತಮ್ಮ ಮೇಲೆ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಲಿಂಗರಾಜ ಹೊಸಳ್ಳಿ ಹಾಗೂ ಅವರ ಸಂಗಡಿಗರು ಹಲ್ಲೆ ನಡೆಸಿದ್ದಾರೆ. ಇದು ಪೂರ್ವನಿಯೋಜಿತ ತಯಾರಿಯಾಗಿತ್ತು.
ಏಕೆಂದರೆ ತಮ್ಮ ರೂಮಿಗೆ ಮ.3ರ ವೇಳೆಗೆ ಲಿಂಗರಾಜ ಬಂದಿದ್ದರು. ನೀವು ನಮ್ಮ ತಂದೆ ಸಮಾನ. ನಮ್ಮಿಬ್ಬರ ಮಧ್ಯೆ ವಿನಾಕಾರಣ ಮನಸ್ತಾಪ ಬೇಡ. ಪತ್ರಿಕಾ ಹೇಳಿಕೆಗಳನ್ನು ಒಬ್ಬರಿಗೊಬ್ಬರು ಕೊಡುವುದು ಬೇಡ ಎಂದು ಹೇಳಿ ಚಹಾ ಕುಡಿದು ಹೋಗಿದ್ದರು. ನಂತರ ನನ್ನನ್ನೇ ಹಿಂಬಾಲಿಸಿದ ಅವರ ತಂಡ 4 ಗಂಟೆ ವೇಳೆಗೆ ತಹಸೀಲ್ದಾರರನ್ನು ಭೇಟಿಯಾಗಿ ಹೊರ ಬರುತ್ತಿದ್ದಾಗ ಏಕಾಏಕಿ ಲಿಂಗರಾಜ ತಮ್ಮ ಮೇಲೆ ಹಲ್ಲೆಗೆ ಮುಂದಾದ ಎಂದು ವಿವರಿಸಿದರು.
ಹಲ್ಲೆಗೆ ಹೇಳಿಕೆ ನೀಡಿದ್ದೇ ಕಾರಣ: ಪ್ರಜಾಪ್ರಭುತ್ವದಲ್ಲಿ ಮಾತನಾಡಲು, ಪತ್ರಿಕಾ ಹೇಳಿಕೆಗಳನ್ನು ನೀಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಎರಡು ದಿನಗಳ ಹಿಂದೆ ನಾನು ಸುದ್ದಿಗೋಷ್ಠಿ ನಡೆಸಿ ಮಾಜಿ ಸಂಸದ ವಿರುಪಾಕ್ಷಪ್ಪ ಅವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಸರ್ಕಾರ ಆಚರಿಸಿದ ಕನಕ ಜಯಂತಿಯಲ್ಲಿ ಮೂರ್ಖರು ಭಾಗವಹಿಸಿದ್ದರು ಎಂದು ಆಪಾದಿಸಿದ್ದು ಅವರ ಘನತೆಗೆ ಭೂಷಣವಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಲಿಂಗರಾಜ ಹೊಸಳ್ಳಿ ಅವರು ವಿರುಪಾಕ್ಷಪ್ಪ ಅವರನ್ನು ಟೀಕಿಸುವಷ್ಟು ಎದೆಗಾರಿಕೆ ಬಂತೇ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾನೆ ಎಂದು ವೀರೇಶಪ್ಪ ಮಾಡಸಿರವಾರ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸರಿ ತಪ್ಪು ಎಂದು ಹೇಳಿಕೆ ನೀಡಲೂ ಹಕ್ಕು ಇಲ್ಲದಂತಾಗಿರುವುದು ದುರಾದೃಷ್ಟಕರ. ಇದು ಸಿಂಧನೂರೋ.. ಬಿಹಾರೋ.. ಎಂಬುದು ಅರ್ಥವಾಗುತ್ತಿಲ್ಲ. ತಹಸೀಲ್ದಾರ್ ಕಚೇರಿ ಆವರಣದಲ್ಲಿ ನೂರಾರು ಜನರ ಮಧ್ಯದಲ್ಲಿ ಐದಾರು ಜನರು ಸೇರಿ ಚಪ್ಪಲಿಯಿಂದ ಹೊಡೆದು ಹಿಂಸೆ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ತಮ್ಮ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳನ್ನು ದಮನ ಮಾಡುವ ಉದ್ದೇಶದಿಂದ ಮಾಜಿ ಸಂಸದ ವಿರುಪಾಕ್ಷಪ್ಪ ಈ ಕೃತ್ಯವನ್ನು ಎಸಗಿದ್ದಾರೆ ಎಂದು ವೀರೇಶಪ್ಪ ಆರೋಪಿಸಿದರು.