ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೀದಿ ಹೆಣಕ್ಕೂ ಕಡೆಯಾದ ಪಡಿತರ ಕಾರ್ಡ್ ಅರ್ಜಿಗಳು

Srinivasa Murthy VN
Updated On : 30 Nov 2013, 10:37 am

ಮುದಗಲ್: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರು.ಗೆ ಕೆಜಿ ಅಕ್ಕಿ ನೀಡುತ್ತಿರುವುದರಿಂದ ಹೊಸ ಕಾರ್ಡ್‌ಗಳು ಹೆಚ್ಚಿದ್ದು, ಅರ್ಜಿಗಳನ್ನು ಪರಿಶೀಲನೆಗೆಂದು ಪಟ್ಟಣ ಪಂಚಾಯಿತಿಗೆ ಕಳಿಸಲಾಗಿದೆ.
ಅರ್ಹ ಫಲಾನುಭವಿಗಳ ಸಮಕ್ಷಮದಲ್ಲಿ ಅರ್ಜಿಗಳನ್ನು ಪರಿಶೀಲನೆ ಮಾಡಿ ಅವರಿಂದ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಅರ್ಜಿದಾರರಿಂದ ಖುದ್ದು ಸಹಿ ಪಡೆದು  ಅರ್ಜಿಗಳನ್ನು ವಾಪಾಸು ಆಹಾರ ಇಲಾಖೆಗೆ ಕಳಿಸಬೇಕು.
ನಾಪತ್ತೆ: ಆದರೆ, ಪಟ್ಟಣ ಪಂಚಾಯಿತಿಯಲ್ಲಿ ಕಸದ ರಾಶಿಯಂತೆ ಅರ್ಜಿಗಳ ಫಾರಂಗಳನ್ನು ಬಿಸಾಡಿದ್ದಾರೆ. ಅಲ್ಲದೆ, ವಾರ್ಡ್‌ಗಳಲ್ಲಿನ ಅನೇಕರು ತಮಗೆ ಬೇಕಾದ ಅರ್ಜಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅನೇಕರು ಬೇಕಿಲ್ಲದವರ ಅರ್ಜಿಗಳನ್ನು ನಾಪತ್ತೆ ಮಾಡುತ್ತಿದ್ದಾರೆ.
ಯಾರದೋ ಅರ್ಜಿ ಯಾರೋ ತೆಗೆದುಕೊಂಡು ಹೋಗುತ್ತಿದ್ದಾರೆ. ಪರಿಶೀಲನೆಗೆಂದು ಬಂದ ಅರ್ಜಿಗಳನ್ನು ಪರಿಶೀಲನೆ ಮಾಡುವವರೇ ಇಲ್ಲ. ಅರ್ಜಿದಾರರು ತಮ್ಮ ಅರ್ಜಿಗಳನ್ನು ತಾವೇ ಹುಡುಕಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಡಿತರ ಚೀಟಿ ಅವ್ಯವಸ್ಥೆ ಮತ್ತಷ್ಟು ಹದಗೆಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ದಲಿತ ಮುಖಂಡ ವೀರೇಶ.
ಸಿಬ್ಬಂದಿ ನೇಮಕ: ಪಡಿತರ ಕಾರ್ಡ್‌ಗಳಿಗಾಗಿ ಅಜಿಂ ಸಲ್ಲಿಸಿದ್ದವರು ಪರಿಶೀಲನೆಗೆ ಬಂದಿದ್ದು, ವಾರ್ಡ್‌ಗಳಿಗನುಸಾರ ಪರಿಶೀಲನೆ ಮಾಡಿ ಫಲಾನುಭವಿಗಳಿಂದ ಸೂಕ್ತ ದಾಖಲೆಗಳನ್ನು ಪಡೆಯುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement