ಮತದಾರರ ಪಟ್ಟಿ; ಅವಧಿ ವಿಸ್ತರಣೆ
ರಾಯಚೂರು: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಅವಧಿಯನ್ನು ವಿಸ್ತರಿಸಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತಿತರೆ ಪ್ರಕ್ರಿಯೆಗೆ ನ.29 ಕಡೆಯ ದಿನವೆಂದು ತಿಳಿಸಲಾಗಿತ್ತು. ಸದ್ಯ ಡಿ.6 ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಆಸಕ್ತರು ಅರ್ಜಿಯನ್ನು ಮತಗಟ್ಟೆಯ ಅಧಿಕಾರಿಗಳಿಗೆ ಇಲ್ಲವೇ ತಹಸೀಲ್ದಾರರಿಗೆ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿ ತಿಳಿಸಿದ್ದಾರೆ.
ನಾಳೆ ವಿಶ್ವ ಏಡ್ಸ್ ದಿನಾಚರಣೆ ಜಾಥಾ
ರಾಯಚೂರು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿ.1ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8.30ಕ್ಕೆ ಜಾಥಾ ಆಯೋಜಿಸಿದ್ದು, ಭಾರತೀಯ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಎಚ್ಐವಿ, ಏಡ್ಸ್ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ತಿಳಿಸಿದೆ.
---
ನಾಡು, ನುಡಿ ರಕ್ಷಿಸಿ
ಮುದಗಲ್ ರಾಜ್ಯೋತ್ಸವದಲ್ಲಿ ಟಿ.ಆರ್.ನಾಯ್ಕ
ಮುದಗಲ್: ಕನ್ನಡ ನಾಡು, ನುಡಿ ರಕ್ಷಣೆಯ ಜವಾಬ್ದಾರಿ ರಾಜ್ಯದ ಪ್ರತಿಯೊಬ್ಬ ನಾಗರಿಕರ ಮೇಲಿದ್ದು, ಎಲ್ಲರೂ ಒಂದಾಗಿ ಕನ್ನಡ ನಾಡು- ನುಡಿ ರಕ್ಷಣೆಗೆ ಮುಂದಾಗಬೇಕೆಂದು ನಿವೃತ್ತ ಡಿಐಜಿ ಟಿ.ಆರ್.ನಾಯ್ಕ ಕರೆ ನೀಡಿದರು.
ಪಟ್ಟಣದಲ್ಲಿ ಕರವೇ ಮುದಗಲ್ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕನ್ನಡದ ಕ್ರಾಂತಿಯಾಗಬೇಕಾದರೆ ಇಂದಿನ ಯುವ ಪೀಳಿಗೆ ಇಂಗ್ಲಿಷ್ ವ್ಯೋಮೋಹ ಬಿಡಬೇಕು. ಜೊತೆಗೆ ಕನ್ನಡದ ಮಹತ್ವ ಹಾಗೂ ಕನ್ನಡದ ಬಳಕೆ ಎಲ್ಲ ರಂಗಗಳಲ್ಲಿಯೂ ಬೆಳಗಬೇಕು ಲಎಂದು ತಿಳಿಸಿದರು.
ದೇಶದಲ್ಲಿ ನಾನಾ ಬಗೆಯ ಜಾತಿ- ಭೇದಗಳ ಜನಸಾಮಾನ್ಯರಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿ ಜೀವಿಸಬೇಕೆಂದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನೂರ್ಭಾಷಾ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು.
ಮೆರವಣಿಗೆ: ರಾಜ್ಯೋತ್ಸವದ ನಿಮಿತ್ತ ಪಟ್ಟಣದಲ್ಲಿನ ಶಾಲಾ- ಕಾಲೇಜು ಮಕ್ಕಳಿಂದ ಪ್ರಭಾತ್ ಪೇರಿ ನಡೆಯಿತು. ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೇರಿದ ಮುದಗಲ್ನ ನಾನಾ ಶಾಲಾ ಮಕ್ಕಳಿದಂ ಕನ್ನಡ ಪರ ಜಯಘೋಷಗಳು ಮೊಳಗಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಪಪಂ ಸಭಾಂಗಣದೊಳಗೆ ಕರೆತರಲಾಯಿತು. ಕನ್ನಡ ಧ್ವಜಗಳನ್ನು ಹಿಡಿದು ಮಕ್ಕಳು ಕನ್ನಡಕ್ಕಾಗಿ ನಮ್ಮ ಜೀವ ಎಂಬಂತೆ ಜಯಘೋಷಗಳನ್ನು ಹಾಕಿದರು.
ಕರವೇ ಅಧ್ಯಕ್ಷ ಎಸ್.ಎ.ನಯೀಮ್, ಎಸ್.ಎನ್. ಖಾದ್ರಿ, ಸಂತೋಷ ಗಬ್ಬೂರು, ತಿಮ್ಮನಗೌಡ ವ್ಯಾಕರನಾಳ, ಸಾಬುಹುಸೇನ್, ಸಮೀರ, ಲೋಕೇಶ್, ವಿಜಯ್ಕುಮಾರ್, ಇಸ್ಮಾಯಿಲ್, ನಾಗರಾಜ, ಅಬ್ದುಲ್, ಹಾಗೂ ಮುನ್ವರಖಾನ್, ಮೂಬೀನ್ ಸಾಬ್, ಟಿ.ಶೇಷಣ್ಣ, ಮಲ್ಲಪ್ಪ ಹೂಗಾರ, ಶಿವರಾಜ ತಳವಾರ, ರೆಹಮಾನ್ಸಾಬ್ ಹಳೇಪೇಟೆ ಸೇರಿದಂತೆ ನಾನಾ ಶಾಲೆಗಳ ಮುಖ್ಯಗುರುಗಳು, ಸಿಬ್ಬಂದಿ ಭಾಗವಹಿಸಿದ್ದರು.