ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳೆಯರು ಹಕ್ಕು ಪಡೆಯಲು ಮುಂದಾಗಲಿ: ನ್ಯಾ.ಈಶಪ್ಪ ದೇಸಾಯಿ

Srinivasa Murthy VN
Updated On : 28 Oct 2013, 11:30 am

ಮಸ್ಕಿ: ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಜಾಗೃತರಾಗಬೇಕು. ಕಾನೂನಿನ ಅರಿವಿನ ಮೂಲಕ ಮಹಿಳೆಯರು ದೌರ್ಜನ್ಯಗಳಿಂದ ಪಾರಾಗಬಹುದು ಎಂದು ನ್ಯಾಯವಾದಿ ಈಶಪ್ಪ ದೇಸಾಯಿ ಸಲಹೆ ನೀಡಿದರು.
ಅವರು ಇಲ್ಲಿಗೆ ಸಮೀಪದ ಗುಡದೂರು ಗ್ರಾಮದ ಕೇರಿಬಸವೇಶ್ವರ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಹಕ್ಕುಗಳಿದ್ದು, ಸ್ತ್ರೀಯರು ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸದೇ ಕಾನೂನಿನ ಸಹಾಯ ಪಡೆಯಬೇಕು. ಮಹಿಳೆಯರಿಗೆ ವಿಚ್ಚೇದನವಾದಲ್ಲಿ ಅಂತಹ ಮಹಿಳೆಯರು ಪತಿಯಿಂದ ಜೀವನಾಂಶ ಪಡೆಯಬಹುದು ಎಂದು ಮಾಹಿತಿ ನೀಡಿದರು.
ನ್ಯಾಯವಾದಿ ಪಂಪನಗೌಡ ಮಾತನಾಡಿ, ಮಗು ಜನಿಸಿದ ತಕ್ಷಣವೇ ಪ್ರಮಾಣ ಪತ್ರ ಪಡೆಯಬೇಕು. ಮುಂದಿನ ಎಲ್ಲ ಸೌಲಭ್ಯಗಳನ್ನು ಪಡೆಯಲು ಈ ಪ್ರಮಾಣ ಪತ್ರ ನೆರವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಗ್ರಾಪಂನ ಮಾಜಿ ಅಧ್ಯಕ್ಷ ಬಸವರಾಜಪ್ಪಗೌಡ, ಗ್ರಾಪಂ ಉಪಾಧ್ಯಕ್ಷ ಬಸವರಾಜ, ಬಸನಗೌಡ, ಶರಣಮ್ಮ ಪೋಲಿಸ್ ಪಾಟೀಲ್, ಪಂಪಣ್ಣ ಅಂಗಡಿ, ಬಸಪ್ಪ ವಡ್ಕಿ, ಬಸಯ್ಯಸ್ವಾಮಿ, ಬಸವರಾಜ ತಳವಾರ, ಅಂಗನವಾಡಿ ಮೇಲ್ವಿಚಾರಕಿ ಶಾಂತಮ್ಮ, ಸುನಿತಾ, ಅಂಗನವಾಡಿ ಕಾರ್ಯಕರ್ತರು, ಹಾಗೂ ಸ್ತ್ರೀ-ಶಕ್ತಿ ಗುಂಪಿನ ಸದಸ್ಯರು ಹಾಗೂ ಇನ್ನಿತರ ಮಹಿಳೆಯರು ಪಾಲ್ಗೊಂಡಿದ್ದರು.

ಕಾಮಗಾರಿಗೆ ಶಾಸಕ ವಜ್ಜಲ್ ಚಾಲನೆ
ಲಿಂಗಸ್ಗೂರು: ತಾಲೂಕಿನ ಮರಗಂಟನಾಳ ಹಾಗೂ ಬೆಂಡೋಣಿ ಗ್ರಾಮಗಳಲ್ಲಿ ನೇ ಹಂತದ ಸುವರ್ಣ ಗ್ರಾಮ ಯೋಜನೆ ಕಾಮಗಾರಿ ಆರಂಭಕ್ಕೆ ಶಾಸಕ ಮಾನಪ್ಪ ವಜ್ಜಲ್ ಶಂಕುಸ್ಥಾಪನೆ ನೆರವೇರಿಸಿದರು.
ಮರಗಂಟನಾಳ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಕಾಮಗಾರಿ ಹಾಗೂ ಬೆಂಡೋಣಿ ಗ್ರಾಮದಲ್ಲಿ 31 ಲಕ್ಷ ವೆಚ್ಚದ ಕಾಮಗಾರಿ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕುಡಿವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಸುವರ್ಣ ಗ್ರಾಮಗಳನ್ನಾಗಿ ಮಾಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಬಸಣ್ಣ ಮೇಟಿ, ಬಸವರಾಜ ನೀರಕೇರಿ, ಶರಣಪ್ಪ ಕುಂಬಾರ, ರಾಜಾಸಾಬ, ಮಲ್ಲಮ್ಮ ವೀರೇಶ, ದೇವಪ್ಪ, ಗದ್ದೆಪ್ಪ ಗೌಂಡಿ, ಹಸನಸಾಬ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement