ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾನೈಟ್ ಅಕ್ರಮ ಗಣಿಗಾರಿಕೆ ತನಿಖೆ ಆರಂಭ

Srinivasa Murthy VN
Updated On : 29 Oct 2013, 10:40 am

ಮುದಗಲ್: ಲಿಂಗಸ್ಗೂರು ತಾಲೂಕಿನಲ್ಲಿ ನಡೆಯುತ್ತಿರುವ ಗ್ರಾನೈಟ್ ಅಕ್ರಮ ಗಣಿಗಾರಿಕೆ ಮತ್ತು ಗಣಿಗಾರಿಕೆ ಸ್ಥಳಗಳ ತನಿಖೆ ಸೋಮವಾರದಿಂದ ಆರಂಭವಾಗಿದ್ದು, ಗಣಿ ಮಾಲೀಕರಲ್ಲಿ ಸಂಚಲನ ಉಂಟಾಗಿದೆ.
ಸಹಾಯಕ ಆಯುಕ್ತ ಯೋಗೇಶ್ವರ ನೇತೃತ್ವದ ತಂಡದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ಸಿಕಂದರ್ ಬಾಷಾ, ಎಡಿಎಲ್‌ಆರ್ ಪರಿಸರ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ತನಿಖಾ ತಂಡದಲ್ಲಿ ಇರುತ್ತಾರೆ ಎಂದು ಸಹಾಯಕ ಆಯುಕ್ತ ಯೋಗೇಶ್ವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತನಿಖೆ ನಡೆಸಲಾಗುತ್ತಿದ್ದು, ಸರ್ವೇಯನ್ನು ಮೊದಲು ಚೈನ್‌ನಿಂದ ಮಾಡಲಾಗುತ್ತಿತ್ತು. ಈಗ ಹೊಸ ತಂತ್ರಜ್ಞಾನದ ಮೂಲಕ ಮೊದಲು ಸರ್ವೇ ನಂಬರ್ ಪೂರ್ಣ ಅಳತೆ ಮಾಡಿದ ನಂತರ ಗ್ರಾನೈಟ್ ಗಣಿಗಾರಿಕೆಯನ್ನು ಯಾವ ಹಂತದಲ್ಲಿ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ನಿರ್ಧರಿಸಲಾಗುತ್ತಿದೆ. ನಂತರ ಗಣಿ ಮಾಲೀಕರು ಗಣಿಗಾರಿಕೆಗೆ ಪಡೆದ ಪರವಾನಗಿ ಎಷ್ಟು ಎನ್ನುವ ಬಗ್ಗೆ ತನಿಖೆ ನಡೆಯುತ್ತದೆ.
ತಾಲೂಕಿನ ಮುದಗಲ್, ಮಾಕಾಪೂರ, ಆದಾಪೂರ, ಸಜ್ಜಲಗುಡ್ಡ, ಬೊಮ್ಮನಾಳ, ನಾಗರಹಾಳ, ಜಾಲಿಬೆಂಚಿ ಸೇರಿದಂತೆ ಎಲ್ಲೆಲ್ಲಿ ಗಣಿಗಾರಿಕೆ ನಡೆದಿದೆ ಎನ್ನುವ ವರದಿ ಪಡೆದು, ಎಲ್ಲ ಮಾಲೀಕರಿಗೂ ನೋಟಿಸ್ ನೀಡಲಾಗಿದೆ. ತನಿಖೆ ಆರಂಭವಾಗಿದ್ದು, ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು. ಗಣಿ ಮಾಲೀಕರಿಗೆ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡುವಂತೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ. ತನಿಖೆ ನಡೆಸುವ ದಿನದಂದು ಖುದ್ದು ಹಾಜರಿರುವಂತೆ ಸೂಚಿಸಲಾಗಿದೆ ಎಂದರು.
ಅ.26ರಂದು 'ಕನ್ನಡಪ್ರಭ' ಗ್ರಾನೈಟ್ ಅಕ್ರಮ ಗಣಿಗಾರಿಕೆ ಕುರಿತು ವಿಶೇಷ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು.

ನೌಕರರ ಸಂಘಕ್ಕೆ 17 ಮಂದಿ ನಾಮನಿರ್ದೇಶಿತ ಸದಸ್ಯರ ನೇಮಕ
ಸಿಂಧನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ವಿವಿಧ ಇಲಾಖೆಯ 17 ಜನ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗಿದೆ.
ಪ್ರೌಢಶಾಲಾ ವಿಭಾಗದಿಂದ ಆನಂದ ಕುಮಾರ ಮಹೇಂದ್ರಕರ್, ಆರೋಗ್ಯ ಇಲಾಖೆಯಿಂದ ಶಿವನಮ್ಮ ಮುಪ್ಪಿನಗೌಡ್ರು, ಗಂಗಮ್ಮ, ಲಿಪಿಕ ನೌಕರರಿಂದ ಕೆ.ವೀರಶೇಖರ, ಸಮಾಜ ಕಲ್ಯಾಣ ಇಲಾಖೆಯಿಂದ ಬಸನಗೌಡ, ನೀರಾವರಿ ಇಲಾಖೆಯಿಂದ ಎಸ್.ಎ. ಖಾದರ ಸುಭಾನಿ, ಪ್ರಾಥಮಿಕ ಶಾಲಾ ವಿಭಾಗದಿಂದ ಎ.ಬಿ.ಪಾಟೀಲ್, ಎಂ.ಬಿ. ದೊಡ್ಡಮನಿ, ಬಸವರಾಜ ಹಳ್ಳಿ, ಮಲ್ಲಪ್ಪ, ಚಂಪಕ್ಕ, ನಿಂಗಪ್ಪ ಭೂತಲದಿನ್ನಿ, ಹುಸೆನಸಾಬ್, ಸರಸ, ಬಸವರಾಜ ಬಿರದಾರ, ಚಕ್ರಸಾಲಿ ಕೊಟ್ರೇಶಪ್ಪ ಹಾಗೂ ಒಕ್ಕೂಟಕ್ಕೆ ರಾಜಿನಾಮೆ ನೀಡಿ ಸಂಘಕ್ಕೆ ಬಂದ ಮಹ್ಮದ್ ಮೌಲಾಸಾಬ್ ಗಂಜಳ್ಳಿ ಅವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಸಭೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹಿರೇಮಠ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement