ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಂಕ್ರಪ್ಪ ಹೂಗಾರ್ 'ಜಿಲ್ಲಾ ಉತ್ತಮ ಶಿಕ್ಷಕ'

Srinivasa Murthy VN
Updated On : 11 Sept 2013, 10:33 am

ಸಿಂಧನೂರು: ತಾಲೂಕಿನ ಆರ್.ಎಚ್.ಕಾಲೋನಿ 2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಂಕ್ರಪ್ಪ ಹೂಗಾರ್ ಅವರು ಶಿಕ್ಷಣ ಇಲಾಖೆ ಕೊಡಮಾಡುವ 2012- 13ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ 14 ವರ್ಷಗಳಿಂದ ತಾಲೂಕಿನ ಬಂಗಾಲಿ ನಿರಾಶ್ರಿತರ ಕಾಲೋನಿಗಳಲ್ಲಿ ಒಂದಾದ ಆರ್.ಎಚ್. ಕಾಲೋನಿ ನಂ.2ರಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಎರಡು ಬಾರಿ ಚಿಣ್ಣರ ಅಂಗಳ ಕೇಂದ್ರವನ್ನು ಯಶಸ್ವಿಗೊಳಿಸಿದ್ದಾರೆ. ಜೊತೆಗೆ 2005ರಲ್ಲಿ ಕಲಿಕಾ ಖಾತ್ರಿ ಕಾರ್ಯಕ್ರಮದಲ್ಲಿ “G’ ಗ್ರೇಡ್ ಪಡೆಯುವಲ್ಲಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿದ್ದಾರೆ.
ಉದಾತ್ತ ಸೇವೆ: 2006- 07ರಲ್ಲಿ ರಾಜ್ಯ ಮಟ್ಟಕ್ಕೆ ಬಾಲಕಿಯರ ತಂಡವನ್ನು ಕರೆದುಕೊಂಡು ಹೋಗಿರುವುದಲ್ಲದೆ 2008-09ರಲ್ಲಿ ಜಿಲ್ಲಾ ಮಟ್ಟದ ಕಬಡ್ಡಿಗೆ ಮಕ್ಕಳನ್ನು ತರಬೇತುಗೊಳಿಸಿದ್ದಾರೆ.
ಸ್ವತಃ ಕ್ರೀಡಾಪಟುಗಳಾದ ಇವರು 2009- 10, 11- 12ರಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ 2011- 12ರಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಕಬಡ್ಡಿಯಲ್ಲಿ ನಾಯಕತ್ವ ವಹಿಸಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯು ಇವರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.
ಅಭಿನಂದನೆ: ಇವರ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ವಿರೂಪಾಕ್ಷಪ್ಪ ಹುನುಗುಂದ, ಶಿಕ್ಷಣ ಸಂಯೋಜಕ ಹುಸೇನಪ್ಪ, ಸಿಆರ್‌ಪಿಗಳಾದ ಅಮರಯ್ಯ ಪತ್ರಿಮಠ, ಶೇಖರಪ್ಪ ರಾಠೋಡ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸುಕೃತಿ ಬಿಸ್ವಾಸ್, ಪ್ರಭಾರಿ ಮುಖ್ಯಗುರು ಬಸಪ್ಪ ಕಮತರ್, ಶಾಲಾ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಸದಸ್ಯರು ಹಾಗೂ ಇನ್ನಿತರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement