ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆಯ ಅಬ್ಬರ
ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿಯೂ ಮಳೆಯಾಗಿದ್ದು ಅತೀ ಹೆಚ್ಚು ಮಳೆ ಸಿಂಧನೂರು ತಾಲೂಕಿನ ಗುಂಜಳ್ಳಿಯಲ್ಲಿ 46ಮಿಮೀ ಮಳೆಯಾಗಿದೆ.
ನಗರದಲ್ಲಿ ಬುಧವಾರ ರಾತ್ರಿಯೂ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ನಗರದ ಬಹುತೇಕ ಕಡೆ ವಿದ್ಯುತ್ ವ್ಯತ್ಯಯವಾಗಿ ಜನತೆ ಪರದಾಡಿದರು. ತಗ್ಗು ಪ್ರದೇಶಕ್ಕೆ ಮಳೆಯ ನೀರು ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಯಿತು.
ಸಂಚಾರ ವ್ಯತ್ಯಯ: ನಗರದ ಚಂದ್ರಮೌಳೇಶ್ವರ ವೃತ್ತ, ಸೂಪರ್ ಮಾರ್ಕೆಟ್, ಸರಾಫ್ ಬಜಾರ್ ಸೇರಿದಂತೆ ವಿವಿಧೆಡೆ ರಸ್ತೆಯಲ್ಲಿ ಚರಂಡಿ ನೀರು ಹರಿದಿದ್ದರಿಂದ ವಾಹನಗಳ ಸವಾರರು ಪ್ರಯಾಪಡುತ್ತಲೇ ಸಾಗುವಂತಾಯಿತು.
ಈ ಮಧ್ಯೆ ಹದಗೆಟ್ಟಿರುವ ರಸ್ತೆ ಯಲ್ಲಿ ನೀರು ನಿಂತಿದ್ದರಿಂದ ಕೆಲ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು.
ನಗರದಲ್ಲಿ 23 ಮಿಮೀ ಮಳೆಯಾಗಿದ್ದು, ತಾಲೂಕಿನ ಯರಮರಸ್ ನಲ್ಲಿ 1.8 ಮಿಮೀ, ಯರಗೇರಾ-14 ಮಿಮೀ, ಗಿಲ್ಲೆಸೂ ಗೂರು-12.5 ಮಿಮೀ, ಕಲ್ಮಲಾ-13ಮಿಮೀ, ಚಂದ್ರಬಂಡಾ-2 ಮಿಮೀ ಮಳೆಯಾಗಿದೆ.
ಮಾನವಿ ಪಟ್ಟಣದಲ್ಲಿ 7.4ಮಿಮೀ, ಕುರ್ಡಿ-10.2 ಮಿಮೀ, ಕಲ್ಲೂರು-7ಮಿಮೀ, ಸಿರವಾರ-28.4ಮಿಮೀ, ಮಲ್ಲಟ-11 ಮಿಮೀ, ಕುರುಕುಂದಾ-12 ಮಿಮೀ, ಕವಿತಾಳ-7 ಮಿಮೀ, ಪಾಮನಕಲ್ಲೂರು2.2ಮಿಮೀ, ರಾಜಲಬಂಡಾ-8ಮಿಮೀ ಹಾಗೂ ಹಾಲಾಪೂರ-9 ಮಿಮೀ ಮಳೆ ಬಿದ್ದಿದೆ.
ದೇವದುರ್ಗ0ಲ್ಲಿ 0.5ಮಿಮೀ, ಗಬ್ಬೂರಿನಲ್ಲಿ 6.2ಮಿಮೀ, ಜಾಲಹಳ್ಳಿ-8.5ಮಿಮೀ ಮಳೆಯಾಗಿದೆ.
ಲಿಂಗಸ್ಗೂರು ತಾಲೂಕಿನ ಮಸ್ಕಿಯಲ್ಲಿ 4.4ಮಿಮೀ, ಮುದಗಲ್ ನಲ್ಲಿ 5.2ಮಿಮೀ ಮಳೆ ಬಿದ್ದಿದ್ದರೆ, ಸಿಂಧನೂರು ನಲ್ಲಿ 17.2ಮಿಮೀ ಮಳೆಯಾಗಿದೆ. ಜವಳಗೇರಾ-7.8 ಮಿಮೀ, ಸಾಲಗುಂದಾ- 22.6 ಮಿಮೀ, ಬಳಗಾನೂರು-7ಮಿಮೀ, ಗುಡದೂರು- 7.2ಮಿಮೀ, ತುರ್ವಿಹಾಳ- 31.6ಮಿಮೀ, ವಲ್ಕಂದಿನ್ನಿ-12.6 ಮಿಮೀ, ಜಾಲಿಹಾಳ-42.2ಮಿಮೀ, ಹೆಡ ಗಿನಾಳ-10ಮಿಮೀ ಮಳೆಯಾಗಿದೆ.