ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾಲೂಕು ಮಟ್ಟದ ಕ್ರೀಡಾಕೂಟ

Srinivasa Murthy VN
Updated On : 13 Sept 2013, 11:03 am

ಸಿಂಧನೂರು: ಪದವಿಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಅನಿಕೇತನ ಕಾಲೇಜು ಪ್ರಮುಖ 3 ಆಟಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿಯರ ಕಬಡ್ಡಿ ಸ್ಪರ್ಧೆಯಲ್ಲಿ ಅನಿಕೇತನ ಕಾಲೇಜು ಪ್ರಥಮ ಸ್ಥಾನ ಪಡೆದರೆ ವಾಸವಿ ಬಾಲಕಿಯರ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ. ಬಾಲಕರ ಕಬಡ್ಡಿ ಸ್ಪರ್ಧೆಯಲ್ಲಿ ಅನಿಕೇತನ ಪ್ರಥಮ ಸ್ಥಾನ ಪಡೆದರೆ ಎಕ್ಸಲೆಂಟ್ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ. ಬಾಲಕರ ಖೋಖೋ ಸ್ಪರ್ಧೆಯಲ್ಲಿ ಅನಿಕೇತನ ಪ್ರಥಮ ಸ್ಥಾನ ಎಕ್ಸಲೆಂಟ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಾಲಕರ ವಾಲಿಬಾಲ್‌ನಲ್ಲಿ ಎಕ್ಸಲೆಂಟ್ ಪ್ರಥಮ ಸ್ಥಾನ ಪಡೆದಿದ್ದು ಕೃಷ್ಣದೇವರಾಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ವಾಸವಿ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಕೃಷ್ಣದೇವರಾಯ ವಿದ್ಯಾ ಸಂಸ್ಥೆಯು ತಾಲೂಕ ಮಟ್ಟದ ಕ್ರೀಡಗಳನ್ನು ಸಂಘಟಿಸಿತ್ತು.

ರಾಷ್ಟ್ರಪ್ರಶಸ್ತಿ ಶಿಕ್ಷಕನಿಗೆ ಗೌರವ
ಮುದಗಲ್: ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಾಜಿಮಲಂಗ ಬಾಬಾ ಅವರಿಗೆ ಹಜರತ್‌ಪಾಜಾ ಗರೀಬಾ ನವಾಜ್ ಇಸ್ಲಾಮಿಕ್ ಟ್ರಸ್ಟ್‌ನವರು ಸನ್ಮಾನಿಸಿ ಗೌರವಿಸಿದರು. ಟ್ರಸ್ಟ್ ಅಧ್ಯಕ್ಷ ಹಾಗೂ ಪಪಂ ಸದಸ್ಯ ಎಂ.ಡಿ. ಮಾಸೂಮ್ ಶರೀಫ್, ಉಪಾಧ್ಯಕ್ಷ ಗಯಾಸುದ್ದೀನ್, ಮುಖಂಡರಾದ ಲಾಲ್‌ಮಹ್ಮದ್‌ಸಾಬ, ಜಹಾವೀರ್‌ಅಲಿ, ಮಹಿಬೂಬ್‌ಪಾಷಾ, ರಹಿಮಾನ್, ಸಲಿಂಪಾಷಾ ಸೇರಿದಂತೆ ಮುಂತಾದವರಿದ್ದರು.

2ನೇ ಅಂತಸ್ತಿನಲ್ಲಿ ಕಚೇರಿ; ಕಂಗಾಲು
ಶಹಾಪುರ: ಪಟ್ಟಣದಲ್ಲಿರುವ ಅಂಚೆ ಕಚೇರಿಗೆ ಶಾಶ್ವತ ಕಟ್ಟಡವಿಲ್ಲದ ಪ್ರಯುಕ್ತ ಪಟ್ಟಣದಾದ್ಯಂತ ಸಿಕ್ಕ ಸ್ಥಳಾವಕಾಶದಲ್ಲಿ ಸ್ಥಳಾಂತರಗೊಳ್ಳುತ್ತಿದ್ದು, ಸದ್ಯ ಮುಖ್ಯರಸ್ತೆಯ ಎರಡಂತಸ್ತಿನ ಖಾಸಗಿ ಕಟ್ಟಡದಲ್ಲಿ ಕಾರ್ಯಾರಂಭ ನಡೆಸಿದೆ. ಪಿಂಚಣಿಗಾಗಿ ಬರುವ ವೃದ್ಧರು ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಹೊತ್ತಿಗೆ ಮೇಲುಸಿರು ಬಿಡುವಂತ ಸ್ಥತಿಯಾಗಿ ಕಂಗಾಲಾಗಿದ್ದಾರೆ. ವಿವಿಧ ಪಿಂಚಣಿಗಾಗಿ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ  ಅಂಚೆ ಕಚೇರಿ ಅಧಿಕಾರಿಗಳು ಪರಿಶೀಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement