22ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಫೆ.2
ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.22ರಂದು ನಡೆಸಲು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಈ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸಮ್ಮೇಳನಾಧ್ಯಕ್ಷರ ಬಗ್ಗೆ ನಡೆದ ಚರ್ಚೆಯಲ್ಲಿ ಪ್ರಮುಖವಾಗಿ 4 ಜನರ ಹೆಸರುಗಳ ಪ್ರಸ್ತಾಪಕ್ಕೆ ಬಂದವು. ದ್ವಿಭಾಷಾ ಕವಿ ಜಿ.ವಿ. ಶರ್ಮಾ, ಡಾ. ಮಧುಮತಿ ದೇಶಪಾಂಡೆ, ಕವಿ- ಹೋರಾಟಗಾರ ನರಸಿಂಹಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ. ಹಂಪಣ್ಣ ಹಾಗೂ ಹಿರಿಯ ಪತ್ರಕರ್ತ ಡಿ.ಎಚ್. ಕಂಬಳಿ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಹೆಸರುಗಳನ್ನು ಸೂಚಿಸಿದರು.
ಮಿಲಾಪ್ಶಾದಿ ಮಹಲ್ನಲ್ಲಿ ಸಮ್ಮೇಳನ: ಕಳೆದ ಸಮ್ಮೇಳನ ನಡೆದ ಮಿಲಾಪ್ಶಾದಿ ಮಹಲ್ನಲ್ಲೇ 2ನೇ ಸಮ್ಮೇಳನ ಮಾಡುವುದು ಸೂಕ್ತವೆಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೆಂದ್ರಗೌಡ ಪ್ರಸ್ತಾಪಿಸಿದರು. ಆದರೆ ಇದಕ್ಕೆ ಕೆಲವರು ಆಕ್ಷೇಪಿಸಿದರೂ ಕೊನೆಗೆ ಹಣಕಾಸಿನ ಕೊರತೆ ಹಿನ್ನೆಲೆ ಮಿಲಾಪ್ಶಾದಿಮಹಲ್ನಲ್ಲೇ ಮಾಡುವುದು ಸೂಕ್ತವೆಂದು ಹೇಳಲಾಯಿತು.
ಸಮ್ಮೇಳನದ ವೇದಿಕೆಗೆ ಹೆಸರಿಡುವ ಚರ್ಚೆ ಬಂದಾಗ ಮಾಜಿ ಶಾಸಕ ಅಮರೇಗೌಡ ಗದ್ರಟಗಿ ಅವರ ಹೆಸರಿಡುವುದು ಸೂಕ್ತವೆಂದು ಪತ್ರಕರ್ತ ಪ್ರಹ್ಲಾದ ಗುಡಿ ಸಲಹೆ ನೀಡಿದರು. ಚಿದಾನಂದ ಅವಧೂತರ ಹೆಸರಿನ ಬಗ್ಗೆಯೂ ಚರ್ಚೆ ನಡೆಯಿತು. ಸಮ್ಮೇಳನದ ನೆನಪಿಗಾಗಿ ಹೊರತರುವ ಸ್ಮರಣ ಸಂಚಿಕೆಗೆ ಹೆಸರಿಡುವ ಕುರಿತು ಚರ್ಚೆ ನಡೆದಾಗ ಚಿನ್ನೂರ ಸಿರಿ ಭಾಗ-2, ಸೋನಾ ಸಿರಿ, ಚಿನ್ನೂರ ಚಂದನ ಮತ್ತಿತರ ಹೆಸರುಗಳು ಪ್ರಸ್ತಾಪಕ್ಕೆ ಬಂದವು.
ಚರ್ಚಿತ ವಿಷಯಗಳು: ಸಮ್ಮೇಳನದಲ್ಲಿ ಮುಖ್ಯವಾಗಿ ಈ ಭಾಗದ ನೀರಾವರಿ ಸಮಸ್ಯೆ, ತುಂಗಭದ್ರಾ ಎಡದಂಡೆ ನಾಲೆಯ ಹೂಳಿನ ಸಮಸ್ಯೆಗಳ ಕುರಿತು ಗೋಷ್ಠಿಗಳು ನಡೆಯಬೇಕೆಂದು ರೈತ ಮುಖಂಡ ಶಾಮಸುಂದರ ಕೀರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಸೂಚಿಸಿದರು. ತಾಲೂಕಿನ ಮಾಜಿ ಶಾಸಕರು, ಕಥೆಗಾರರು, ಸಾಹಿತಿಗಳ, ಕವಿಗಳ ವಿವರಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವುದು ಸೂಕ್ತವೆಂದು ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎಸ್.ಶರಣೇಗೌಡ ಹೇಳಿದರು.
ಮಹಿಳಾ ದೌರ್ಜನ್ಯ ಮತ್ತು ಪರಿಹಾರದ ಕುರಿತು ಗೋಷ್ಠಿ ನಡೆಸುವಂತೆ ಮಮತಾ ಹಿರೇಮಠ, ಸರಸ್ವತಿ ಪಾಟೀಲ್, ಬಸಮ್ಮ ತಾಳಿಕೋಟೆ, ಲಕ್ಷ್ಮೀ ಪತ್ತಾರ, ಎಂ.ಸಿ. ಸೀತಮ್ಮ ಸಲಹೆ ನೀಡಿದರು. ಸಭೆಯಲ್ಲಿ ಊಟ, ವಸತಿ, ನೆನಪಿನ ಕಾಣಿಕೆ, ಪುಸ್ತಕ ಮಳಿಗೆ, ಟೆಂಟ್, ಬ್ಯಾಗ್ಗಳ ಅಂದಾಜು ಪಟ್ಟಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಧ್ವರಾಜ ಆಚಾರ್ಯ, ನಗರಸಭೆ ಅಧ್ಯಕ್ಷ ಜಾಫರಅಲಿ ಜಾಗೀರದಾರ, ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ, ಎಸ್ಜೆಎಸ್ಆರ್ವೈ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಬಸವರಾಜ ಬಾದರ್ಲಿ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು. ಎಸ್. ದೇವೆಂದ್ರಗೌಡ ನಿರೂಪಿಸಿದರು.