ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಬ್ಬಂದಿ ವರ್ಗಾವಣೆಗೆ ಆಗ್ರಹ

Srinivasa Murthy VN
Updated On : 3 Feb 2014, 11:23 am

ದೇವದುರ್ಗ: ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಒಂದೇ ಸ್ಥಳದಲ್ಲಿ ಕಳೆದ 20ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ವರ್ಗಾವಣೆ ನಿಯಮ ಮೇಲಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಮುಖಂಡ ಹಾಗೂ ಜಾಲಹಳ್ಳಿಯ ಪ್ರಗತಿಪರ ರೈತ ಗೋವಿಂದಪ್ಪ ಬಂಡಿ, ಸರ್ಕಾರದ ವರ್ಗಾವಣೆ ನಿಯಮ ರೈತ ಸಂಪರ್ಕ ಕೇಂದ್ರದಲ್ಲಿನ ಸಿಬ್ಬಂದಿಗೆ ಅನ್ವಯಿಸುತ್ತಿಲ್ಲ. ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಬೀಡು ಬಿಟ್ಟಿರುವುದರಿಂದ ಸರ್ಕಾರದ ಯೋಜನೆಗಳನು ರೈತರಿಗೆ ಮುಟ್ಟಿಸುವಲ್ಲಿ ಈ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಕೂಡಲೇ ಈ ಸಿಬ್ಬಂದಿಯನು ಬೇರೆಡೆಗೆ ಸರ್ಕಾರ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

ವಸತಿ ಶಾಲೆಯಲ್ಲಿ ಸಮಸ್ಯೆ
ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಮೊರಾರ್ಜಿ ವಸತಿ ನಿಲಯದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಸಿಬ್ಬಂದಿ ವಿಫಲವಾಗಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಒತ್ತಾಯಿಸಿದೆ. ಈ ಕುರತು ಜೆಡಿಎಸ್ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಜಿ.ವಿ. ಮೇಟಿ ಹೇಳಿಕೆ ನೀಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ರಾತ್ರಿ ವೇಳೆ ವಿಷ ಜಂತುಗಳ ಹಾವಳಿ ಹೆಚ್ಚಿದೆ. ಮಳೆಗಾಲದಲ್ಲಿ ಮತ್ತು ಕಾಲುವೆಗೆ ಹರಿದು ಬರುವ ನೀರಿನಿಂದ ನಿಲಯದ ಮೈದಾನ ಸಂಪೂರ್ಣ ಜಲಾವೃತ್ತವಾಗುತ್ತದೆ ಎಂದು ಆರೋಪಿಸಿದ್ದಾರೆ. ವಸತಿ ನಿಲಯದಲ್ಲಿ ಅಡುಗೆ ಅನಿಲದ ಸೌಲಭ್ಯ ಒದಗಿಸಿದ್ದರೂ ಸೌದೆಯ ಬಳಸಲಾಗುತ್ತಿದೆ. ಮಕ್ಕಳಿಗೆ ಸೂಳ್ಳೆ ಪರದೆ ಒದಗಿಸಿಲ್ಲ ಎಂದು ಆರೋಪಿಸಿದ್ದು, ಕೂಡಲೇ ಸಮಸ್ಯೆ ಪರಿಹರಿಸಲು ಅವರು ಆಗ್ರಹಿಸಿದ್ದಾರೆ.

ಗ್ರಾನೈಟ್ ಲಾರಿಗಳ ವಶ
ಲಿಂಗಸ್ಗೂರು: ಯಾದಗಿರಿ ಜಿಲ್ಲೆಯ ಸುರಪುರದಿಂದ ಇಲಕಲ್‌ಗೆ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ ಮೂರು ಲಾರಿಗಳನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಪಿಐ ವರದರಾಜು ಈ ಕುರಿತು ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಗ್ರಾನೈಟ್ ಕಲ್ಲು ಸಹಿತ ಲಾರಿ ಜಪ್ತಿ ಮಾಡಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿಯಿಲ್ಲದೇ ಹಾಗೂ ರಾಯಲ್ಟಿ ಪಾವತಿಸಿದ ಬಗ್ಗೆ ದಾಖಲೆಗಳಿಲ್ಲದಿದ್ದರೂ ಸಾಗಿಸುತ್ತಿರುವುದು ದಾಳಿ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ಲಾರಿಗಳನು ವಶಕ್ಕೆ ತೆಗೆದುಕೊಂಡು ರಾಯಚೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ವರದರಾಜು ತಿಳಿಸಿದ್ದಾರೆ.

ಕಡಲೆಗೆ ಪ್ರೋತ್ಸಾಹ ಧನ: ನಿಯೋಗ
ಲಿಂಗಸ್ಗೂರು: ಜಿಲ್ಲೆಯ ಪ್ರಮುಖ ಬೆಳೆ ಕಡಲೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ಫೆ.3ಕ್ಕೆ ಬೆಂಗಳೂರಿಗೆ ರೈತರ ನಿಯೋಗ ತೆರಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ತಿಳಿಸಿದರು. ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ 2013-14 ನೇ ಸಾಲಿನ ಕಡಲೆಗೆ ಕನಿಷ್ಟ ಬೆಂಬಲ ಬೆಲೆ 3200 ಯಿದ್ದು, ರಾಜ್ಯ ಸರ್ಕಾರ ತೊಗರಿ, ಭತ್ತಕ್ಕೆ ನೀಡಿದಂತೆ ಕಡಲೆಗೆ ಒಂದು ಸಾವಿರ ಪ್ರಾತ್ಸಾಹಧನ ನೀಡಿ ಖರೀದಿಸಿದರೂ ರೈತರಿಗೆ ಲಾಭವಿಲ್ಲ. ಕಡಲೆಗೆ 5ಸಾವಿರ ಖರೀದಿಸಬೇಕೆಂದು ರೈತಸಂಘದ ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸೇರಿ 11 ಜನ ರೈತರ ತಂಡ ಬೆಂಗಳೂರಿಗೆ ತೆರಳಿ ಸಿಎಂ ಹಾಗೂ ಕೃಷಿ ಸಚಿವರಿಗೆ ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಸಮುದಾಯ ಭವನಕ್ಕೆ ಮನವಿ
ಲಿಂಗಸ್ಗೂರು: ಸರ್ಕಾರದ ಸೌಲಭ್ಯ ಕಲ್ಪಿಸುವ ಜತೆಗೆ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡುವಂತೆ ಗಂಗಾಮತಸ್ಥ ಸಮಾಜದಿಂದ ಶಾಸಕ ಮಾನಪ್ಪ ವಜ್ಜಲರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು. ಗಂಗಾಮತಸ್ಥ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜ ಕುಲಕಸುಬು ಮೀನುಗಾರಿಕೆ ಹಾಗೂ ದೋಣಿ ನಡೆಸುವ ಕಾರ್ಯದಲ್ಲಿ ತೊಡಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಬೇರೆಯವರ ಪಾಲಾಗುತ್ತಿದ್ದು, ಈ ಬಗ್ಗೆ ಶಾಸಕರು ಗಮನ ಹರಿಸಿ ನ್ಯಾಯ ದೊರಕಿಸಿ ಕೊಡಬೇಕು. ಲಿಂಗಸ್ಗೂರು ಪಟ್ಟಣದಲ್ಲಿ ಗಂಗಾಮತಸ್ಥ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ತಾಲೂಕು ಅಧ್ಯಕ್ಷ ಅಮರೇಶ ಪೂಜಾರಿ, ಕಾರ್ಯಾಧ್ಯಕ್ಷ ಅಮರೇಶ ಕಲ್ಲೂರ, ಉಪಾಧ್ಯಕ್ಷ ನಾಗಪ್ಪ ಫೂಲಬಾವಿ, ಜಿಲ್ಲಾ ಉಪಾಧ್ಯಕ್ಷ ನಾಗೇಶ ಕಬ್ಬೇರ, ಕನಕಪ್ಪ ಮಾವಿನಬಾವಿ ಸೇರಿದಂತೆ ಒತ್ತಾಯಿಸಿದ್ದಾರೆ.

ಮನೋಜ ಕುಮಾರ್‌ಗೆ ರಾಷ್ಟ್ರ ಮಟ್ಟದ ಚಿನದ ಗರಿ
ಸಿಂಧನೂರು: ಬೆಂಗಳೂರಿನ ಮಹಾವೀರಜೈನ್ ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದ್ದ ನಗರದ ಮನೋಜ್‌ಕುಮಾರ್ ಇಲ್ಲೂರ ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ವಿಭಾಗದಿಂದ ನಡೆದ ರಾಷ್ಟ್ರ ಮಟ್ಟದ ಪ್ರಾಜಕ್ಟ್‌ನಲ್ಲಿ ವಿಷಯ ಮಂಡನೆಗೆ ಮಾನ್ಯತೆ ನೀಡಿ ಗೌರವಿಸಿ 10 ಸಾವಿರ, ಸ್ಟೂಡೆಂಟ್ ಪ್ರಾಜೆಕ್ಟ್ ಅವಾರ್ಡ್ 2013 ನೀಡಿ ಓರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗೆ ಮಹಾವೀರ್ ಜೈನ್ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಸಂಸ್ಥೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಖ್ಯಾತ ದಿಗ್ಗಜ ನಂದನ್ ನೀಲೆಕಣಿ ಚಿನದ ಪದಕ ನೀಡಿ ಗೌರವಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement