ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯದಲ್ಲಿ ಶ್ರೀಮಧ್ವ ನವಮಿ ಸಂಭ್ರಮ

Srinivasa Murthy VN
Updated On : 9 Feb 2014, 12:17 pm

ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದಲ್ಲಿ ಶನಿವಾರ ಮಧ್ವನವಮಿ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀಮಠದಲ್ಲಿ ಬೆಳಗ್ಗೆ ಪ್ರಾಣದೇವರ ವಿಗ್ರಹಕ್ಕೆ ಕಿರಿಯಶ್ರೀಗಳಾದ ಸುಬುಧೇಂದ್ರತೀರ್ಥರು ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ ಶ್ರೀಮಠದ ಪ್ರಾಕಾರದಲ್ಲಿ ಮಧ್ವಾಚಾರ್ಯರ ಭಾವಚಿತ್ರವಿರಿಸಿದ ಚಿನ್ನದ ರಥೋತ್ಸವ ನೆರವೇರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳ ಸದಸ್ಯರು ಭಕ್ತಿ ಸಂಕೀರ್ತನೆ ಕೈಗೊಂಡರು. ರಥೋತ್ಸವದಲ್ಲಿ ಶ್ರೀಗಳೂ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement