ವಚನ ಸಾಹಿತ್ಯದೆಡೆ ಒಲವು ತೋರಿ: ಡಾ. ಶಾಂತಲಾ
ಸಿಂಧನೂರು: ಆಧುನಿಕ ಯುಗದಲ್ಲಿ ಶಿಕ್ಷಣದ ಜೊತೆ ಜೊತೆಗೆ ವಚನ ಸಾಹಿತ್ಯದಲ್ಲಿ ಯುವಕರು ತಮ್ಮ ಒಲುಮೆ ಬೆಳೆಸಿಕೊಳ್ಳಬೇಕೆಂದು ಉಪನ್ಯಾಸಕಿ ಡಾ. ಶಾಂತಲಾ ಮುಕ್ಕುಂದಿಮಠ ಹೇಳಿದರು.
ನಗರದ ಶ್ರಾವಣ ಮಾಸದ ನಿಮಿತ್ತ ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರದಿಂದ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
12ನೇ ಶತಮಾನದ ಶರಣರು ಬರೆದ ವಚನಗಳು ಜೀವನವನ್ನು ಬದಲಾಯಿಸಿಕೊಳ್ಳುವ ಅಂಶಗಳನ್ನು ಒಳಗೊಂಡಿವೆ. ಇವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಪೀಳಿಗೆಯು ಶರಣರ ಆದರ್ಶ ಮಾರ್ಗದ ಕಡೆಗೆ ತಮ್ಮ ಇಚ್ಛೆ ತೋರಿಸಿ, ವಚನ ಸಾಹಿತ್ಯದಲ್ಲಿ ತಮ್ಮ ಪ್ರತಿಭೆ ತೋರಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ರಾಜ್ಯ ಕೃಷಿ ಆಯೋಗ ಸದಸ್ಯ ಹನುಮನಗೌಡ ಬೆಳಗುರ್ಕಿ, ನಯೋಪ್ರಾ ಅಧ್ಯಕ್ಷ ಎಸ್.ಶರಣೇಗೌಡ, ನಿವೃತ್ತ ಶಿಕ್ಷಕ ಶಿವಣ್ಣ ಸಣ್ಣಪ್ಪನವರ್, ವೀರೇಶಪ್ಪ ಸಿರುಗುಪ್ಪ, ಯೋಪ್ರಾ ಮಾಜಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಕಸಾಪ ಮಾಜಿ ಅಧ್ಯಕ್ಷ ವೆಂಕನಗೌಡ ವಟಗಲ್, ಶ್ಯಾಮಣ್ಣ ನಾಯಕ, ಕರೇಗೌಡ ಕುರುಕುಂದಿ, ಅಮರೇಶ ಗುರಿಕಾರ, ಮಹಿಳಾ ಬಸವಕೇಂದ್ರ ಅಧ್ಯಕ್ಷೆ ಸುಮಂಗಲ ಶಾಂತಪ್ಪ, ಯುವ ಘಟಕ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಯುವ ಬಸವ ಕೇಂದ್ರ ಸದಸ್ಯ ಮುತ್ತಣ್ಣ ಪಾಟೀಲ್ ಇತರರಿದ್ದರು.