ಹಾಸ್ಟೆಲ್ ಕಾಮಗಾರಿಗೆ ವಜ್ಜಲ್ ಪೂಜೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಜೂ.4
ಪಟ್ಟಣದಲ್ಲಿ ಪಾಲಿಟೆಕ್ನಿಕ್ ಕಾಲೇಜು ನಿಲಯ ಹಾಗೂ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿ ಆರಂಭಕ್ಕೆ ಬುಧವಾರ ಶಾಸಕ ಮಾನಪ್ಪ ವಜ್ಜಲ್ ಭೂಮಿ ಪೂಜೆ ನೆರವೇರಿಸಿದರು.
ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ ಮೇರೆಗೆ 2013-14ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಯೋಡನೆಯಡಿ ರು. 99.60 ಲಕ್ಷ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ಗಳ ವಿದ್ಯಾರ್ಥಿ ನಿಲಯ ಹಾಗೂ ಮಿನಿ ವಿಧಾನಸೌಧ ಹತ್ತಿರ ರು. 98 ಲಕ್ಷ ವೆಚ್ಚದಲ್ಲಿ ಪದವಿ ಮಹಾವಿದ್ಯಾಲಯ ನಿಲಯ ಕಟ್ಟಡ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿ. (ಭೂ ಸೇನಾ ನಿಗಮ) ದಿಂದ ಕಟ್ಟಡ ನಿರ್ಮಿಸಲಾಗುತ್ತಿದ್ದು, ಕಟ್ಟಡ ಕಾಮಗಾರಿ 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಿದೆ.
ಈ ವೇಳೆ ಭೂ ಸೇನಾ ನಿಗಮದ ಅಧಿಕಾರಿ ಎಂ.ಜಗದೀಶ ಪ್ರಕಾಶ, ಎಂಜಿನಿಯರ್ ನರಸಿಂಹರಾಜ್, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಸಿ.ಜೆ.ಕೂಡ್ಲಿ, ಸಿಬ್ಬಂದಿ ಮಲ್ಲಪ್ಪ, ವಿಜಯ ಕುಮಾರ, ಷಣ್ಮುಖಪ್ಪ ಪಾಟೀಲ್, ರಾಘವೇಂದ್ರ, ಲಕ್ಷ್ಮಣ ನಾಯಕ, ಬಸವರಾಜ ಹಾಗೂ ಜೆಡಿಎಸ್ ಮುಖಂಡ ಗಿರಿಮಲ್ಲನಗೌಡ ಕರಡಕಲ್ ಇನ್ನಿತರರು ಇದ್ದರು.