ಘಟಕದ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಸಮಾರಂಭ
ಆಳಂದ: ಹಿಂದುಳಿದ ಕೋಲಿ ಸಮಾಜವು ಬಸವಾದಿ ಶರಣರು ಮತ್ತು ಸಮಕಾಲಿನ ಅಂಬಿಗರ ಚೌಡಯ್ಯ ಹಾಕಿಕೊಟ್ಟ ಮಾರ್ಗದಲ್ಲಿ ಸಂಘಟಿತರಾಗಿ, ಬೇಕು ಬೇಡಿಕೆಗಳನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕೆಂದು ಕೋಲಿ ಸಮಾಜದ ರಾಜ್ಯ ಮುಖಂಡ ತಿಪ್ಪಣ್ಣಪ್ಪ ಕುಮಕನೂರ್ ಅವರು ಇಂದಿಲ್ಲಿ ಸಮಾಜ ಬಾಂಧವರಿಗೆ ಕರೆ ನೀಡಿದರು. ಪಟ್ಟಣದ ಗುರುಭವನದಲ್ಲಿ ಭಾನುವಾರ ಕೋಲಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು. ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ರವಿರಾಜ ಕೋರವಿ ಮಾತನಾಡಿದರು. ನೌಕರ ಸಂಘದ ಮುಖಂಡ ಶಾಂತಪ್ಪ ಕೊಡ್ಲಿ, ಜಯಾನಂದ ಜಮಾದಾರ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಚಿತಲಿ, ಕಲ್ಯಾಣಿ ಜಮಾದಾರ, ಶೇಖಪ್ಪ ಜಮಾದಾರ ತಡಕಲ್, ಅಂಬರಾಯ ಚಿತಲಿ, ಅಶೋಕ ಜಮಾದಾರ, ಶ್ರವಣಕುಮಾರ ಜಮಾದಾರ ಇದ್ದರು. ರಾಜು ತಳವಾರ ನರೋಣಾ ವಚನ ಗಾಯನ ನಡೆಸಿದರು. ಸಿದ್ದು ಮಹಾಗಾಂವ ಕಾರ್ಯಕ್ರಮ ನಿರೂಪಿಸಿದರು. ನಾಮದೇವ ಶಖಾಪುರ ಸ್ವಾಗತಿಸಿದರು. ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಜಿಲ್ಲಾಧ್ಯಕ್ಷ ರವಿರಾಜ ಕೋರವಿ ಮತ್ತು ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ್ ಅವರು ಸನ್ಮಾನಿಸಿದರು.