ಇಂದು ಬಿಜೆಪಿ ಸಮಾವೇಶ
ಸಿಂಧನೂರು: ಲಿಂಗಸ್ಗೂರು ತಾಲೂಕಿನ ಮಸ್ಕಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಬಳಗಾನೂರಿನಲ್ಲಿ ಮಾ.17 ರಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡರಾದ ಸಂಜಯಕುಮಾರ ಜೈನ್ ಹಾಗೂ ರಾಜಶೇಖರ ನಾಗಲೀಕರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿ, ಸಮಾವೇಶದಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಸಂಗಣ್ಣ ಕರಡಿ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ಯ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಜಿಪಂ ಸದಸ್ಯರಾದ ಮಹಾದೇವಪ್ಪಗೌಡ, ವಿಶ್ವನಾಥ ಪಾಟೀಲ್ ತೋರಣದಿನ್ನಿ, ಮುಖಂಡರಾದ ರಾಜಶೇಖರ ಪಾಟೀಲ್, ಕೊಲ್ಲಾ ಶೇಷಗಿರಿರಾವ್, ಎನ್. ಶಿವನಗೌಡ ಗೋರೆಬಾಳ, ಗುಡದೂರು ತಿಮ್ಮನಗೌಡ, ಶಂಕರ್ ಮೇದಾರ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷ ಎಂ. ದೊಡ್ಡಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಂಕುಶ ದೊಡ್ಡಿ, ಮಸ್ಕಿ ಬ್ಲಾಕ್ ಅಧ್ಯಕ್ಷ ಸಂಗಮೆಶ ಹತ್ತಿಗುಡ್ಡ ಸೇರಿ ಮಸ್ಕಿ ಮತ್ತು ಸಿಂಧನೂರ ಉಭಯ ಕ್ಷೇತ್ರದ ಜನಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಮಾಜಿ ಸಂಸದ ದಿ. ಸಿದ್ದರಾಮೇಶ್ವರ ಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಮಸ್ಕಿ ಘಟಕದ ಉಪಾಧ್ಯಕ್ಷ ರುದ್ರಗೌಡ ಕೊಂಡರೆಡ್ಡಿ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ವೈ. ಮರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಪಂಪಾಪತಿ ಕೊಂಡರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪದ್ಮಾವತಿ ಎ. ಕಮ್ಮಾರ, ಮುಖಂಡರಾದ ವಾಜೇಂದ್ರರಾವ್ ಪಟವಾರಿ, ಕಂಟೆಪ್ಪ ನಾಯಕ, ಬಸವರಾಜಗೌಡ ಜಿನ್ನಿಂಗ್ ಮತ್ತಿತರರಿದ್ದರು.
ಬಳಗಾನೂರಿನಲ್ಲಿ...
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಮಾ. 17ರಂದು ಮಸ್ಕಿ ವಿಧಾನ ಸಭಾಕ್ಷೇತ್ರದ ಬಳಗಾನೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿಯ ಸಂಜಯಕುಮಾರ ಜೈನ್ ಹಾಗೂ ರಾಜಶೇಖರ ನಾಗಲಿಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಿನ ಸಮಾವೇಶದಲ್ಲಿ ಕೊಪ್ಪಳ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಸಂಗಣ್ಣ ಕರಡಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ಯ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಜಿಪಂ ಸದಸ್ಯರಾದ ಮಹಾದೇವಪ್ಪಗೌಡ, ವಿಶ್ವನಾಥ ಪಾಟೀಲ್ ತೋರಣದಿನ್ನಿ, ಮುಖಂಡರಾದ ರಾಜಶೇಖರ ಪಾಟೀಲ್, ಕೊಲ್ಲಾ ಶೇಷಗಿರಿರಾವ್, ಎನ್. ಶಿವನಗೌಡ ಗೋರೆಬಾಳ, ಗುಡದೂರು ತಿಮ್ಮನಗೌಡ, ಶಂಕರ್ ಮ್ಯಾದರ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷ ಎಂ. ದೊಡ್ಡಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಂಕುಶದೊಡ್ಡಿ, ಮಸ್ಕಿ ಬ್ಲಾಕ್ ಅಧ್ಯಕ್ಷ ಸಂಗಮೆಶ ಹತ್ತಿಗುಡ್ಡ ಸೇರಿದಂತೆ ಮಸ್ಕಿ ಮತ್ತು ಸಿಂಧನೂರ ಉಭಯ ಕ್ಷೇತ್ರದ ಜನಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ರುದ್ರಗೌಡ ಕೊಂಡರೆಡ್ಡಿ, ಬಸವರಾಜ ವೈ. ಮರೆಡ್ಡಿ, ಪಂಪಾಪತಿ ಕೊಂಡರೆಡ್ಡಿ, ಪದ್ಮಾವತಿ ಎ. ಕಮ್ಮಾರ, ವಾಜೇಂದ್ರರಾವ್ ಪಟವಾರಿ, ಕಂಟೆಪ್ಪ ನಾಯಕ, ಬಸವರಾಜಗೌಡ ಜಿನ್ನಿಂಗ್ ಮತ್ತಿತರರು ಇದ್ದರು.