ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೂರು ಕಾಲಿನ ಮಗು ಜನನ!

Srinivasa Murthy VN
Updated On : 25 Mar 2014, 11:05 am

ಸಿಂಧನೂರು: ನಗರದ ಮಹೆಬೂಬ ಕಾಲೋನಿಯ ತಿಪ್ಪಮ್ಮ ಗಂ. ತಿಪ್ಪಣ್ಣ ಎನ್ನುವ ಮಹಿಳೆ ಮೂರು ಕಾಲಿನ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮನೆಯಲ್ಲಿಯೇ ಹೆರಿಗೆಯಾಗಿದ್ದು, ಅಪರೂಪದ ಮಗು ಜನಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಲಾಯಿತು. ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಎರಡು ಎತ್ತುಗಳ ಆಕಸ್ಮಿಕ ಸಾವು
ಶಹಾಬಾದ್: ಗ್ರಾಮದ ರೈತ ಮೆಹಮೂದ ನಬಿ ಎಂಬುವರ ಎರಡು ಎತ್ತುಗಳು ಗ್ರಾಮದ ಹೊಲಮೊಂದರಲ್ಲಿ ಶನಿವಾರ ಆಕಸ್ಮಿಕವಾಗಿ ಸತ್ತಿವೆ. ಕೀಶನ್ ರಾಥೋಡ ಎನ್ನುವರಿಗೆ ಸೇರಿದ ಈ ಎರಡು ಎತ್ತುಗಳ ಬೆಲೆ ಸುಮಾರು 1 ಲಕ್ಷ ಅಂದಾಜು ಮಾಡಲಾಗಿದೆ. ಇವುಗಳ ದುಡಿಮೆಯಿಂದ ರೈತ ಬದುಕುತ್ತಿದ್ದ, ಈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ರೈತ ಬಸವರಾಜ ರಾಮಗುಂಡ ಒತ್ತಾಯಿಸಿದ್ದಾರೆ.

ಬೈಕ್‌ನಿಂದ ಬಿದ್ದು ಇಬ್ಬರ ಸಾವು
ರಾಯಚೂರು: ಮಾನವಿ ತಾಲೂಕಿನ ನಸಲಾಪುರ ಕ್ರಾಸ್ ಬಳಿ ಪರೀಕ್ಷೆ ಬರೆಯಲು ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೈಕ್‌ನಿಂದ ಬಿದ್ದು ಸಾವಿಗೀಡಾಗಿದ್ದಾರೆ. ಮೃತರನ್ನು ಅಜಮ್ ಕೊಟ್ನೆಕಲ್ ಮತ್ತು ಯಲ್ಲಪ್ಪ ಯಾಪಲಪರ್ವಿ ಎಂದು ಗುರುತಿಸಲಾಗಿದೆ. ಇವರು ಬೈಕ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಪೋತ್ನಾಳ ಗ್ರಾಮದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದ್ದು, ಪ್ರಯಾಣಿಸುತ್ತಿದ್ದ ಈ ಇಬ್ಬರು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮಾನವಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

464 ಹಾಜರು
ಚಿಂಚೋಳಿ: ಪಟ್ಟಣದ ಚಂದಾಪುರ ನಗರದ ಸರ್ಕಾರಿ ಪಿಯು ಕಾಲೇಜಿನ ದ್ವಿತೀಯ ವರ್ಷದ ವಾರ್ಷಿಕ ಕನ್ನಡ ವಿಷಯಕ್ಕೆ ಒಟ್ಟು 464 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಪ್ರಾಚಾರ್ಯ ಡಾ. ಶಿವರಾಜ ಕುಲ್ಕರ್ಣಿ ತಿಳಿಸಿದರು. ಸೋಮವಾರ ಜರುಗಿದ ಪಿಯು ದ್ವಿತೀಯ ವಾರ್ಷಿಕ ಪರೀಕ್ಷೆಗೆ ಒಟ್ಟು 504 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ 40 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು 464 ವಿದ್ಯಾರ್ಥಿಗಳು ಪರೀಕ್ಷೆ ಕುಳಿತಿದ್ದಾರೆಂದು ಪ್ರಾಚಾರ್ಯರು ತಿಳಿಸಿದರು.

ಕೇಂದ್ರ ಬದಲು
ಚಿತ್ತಾಪುರ: ತಾಲೂಕಿನ 2013-14ನೇ ಸಾಲಿಗಾಗಿ ಮಾ.28 ರಿಂದ ಏಪ್ರಿಲ್ 9ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಪ್ರೌಢಶಾಲೆ ಗುಂಡಗುರ್ತಿ ಪರೀಕ್ಷೆ ಕೇಂದ್ರ ಸಂಖ್ಯೆ 32 ಕೇಂದ್ರವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಗುಂಡಗುರ್ತಿಗೆ ಸ್ಥಳಾಂತರಿಸಲಾಗಿದೆ. ಸದರಿ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಕೇಂದ್ರದಲ್ಲಿ ಕೂಡುವ ವಿದ್ಯಾರ್ಥಿಗಳಿಗೆ ಮೊರಾರ್ಜಿ ವಸತಿ ಶಾಲೆ ಗುಂಡಗುರ್ತಿಯಲ್ಲಿ ಪರೀಕ್ಷೆಗೆ ಹಾಜರಾಗಲು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದ್ದಾರೆ.

ಉಚಿತ ಚಿಕಿತ್ಸಾ ಶಿಬಿರ ನಾಳೆಯಿಂದ
ರಾಯಚೂರು: ನಗರದ ಗಾಜಗಾರಪೇಟೆಯ ಪ್ರಾಣಸ್ಪರ್ಷ ಸಮಗ್ರ ಆರೋಗ್ಯ ಕೇಂದ್ರದಿಂದ ಮಾ.26ರಿಂದ 7 ದಿನಗಳ ಅಕ್ಯುಪಂಚರ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆಯ ಉಚಿತ ಶಿಬಿರ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಕೇಂದ್ರವು ಸ್ಪಾಂಡಿಲೈಟಿಸ್, ಸಿಯಾಟಿಕಾ, ರೊಮಟೈಡ್ ಆರ್ಥೈಟಿಸ್, ಫ್ರೋಜನ್ ಶೋಲ್ಡರ್, ಸೊಂಟ ನೋವು ಸೇರಿದಂತೆ ವಿವಿಧ ಮೂಳೆ ಹಾಗೂ ಕೀಲು ಸಂಬಂಧಿ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಡಾ. ಶಿವರಾಜ್ ಪಾಟೀಲ್ ಹಾಗೂ ಡಾ. ಶಿವಯೋಗಿ ಅವರು ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಶಿಬಿರದಲ್ಲಿ ನೀಡಲಿದ್ದಾರೆಂದು ತಿಳಿಸಿದೆ.

ಎನ್ನೆಸ್ಸೆಸ್ ಶಿಬಿರ
ರಾಯಚೂರು: ನಗರದ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಿಂದ ವಾರ್ಷಿಕ ಎನ್ನೆಸ್ಸೆಸ್ ವಿಶೇಷ ಶಿಬಿರ ಇತ್ತೀಚೆಗೆ ಆಯೋಜಿಸಲಾಗಿತ್ತು. ಹೊಸೂರಿನ ವಿಆರ್‌ಇಟಿಬಿಪಿಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಮಾತನಾಡಿದ ಮೆಥೋಡಿಸ್ಟ್ ಸಂಸ್ಥೆಯ ಪ್ರಮುಖ ಜೂಲಿಯಸ್ ಜಾನ್, ರಾಷ್ಟ್ರೀಯ ಸೇವಾ ಯೋಜನೆಯ ಗುರಿಗಳು, ಉದ್ದೇಶವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಉಪಾಧ್ಯಕ್ಷ ರೆ. ಸಂಸೋನ್ ವಹಿಸಿದ್ದರು. ಸಂಸ್ಥೆಯ ಸದಸ್ಯ ಯೇಸನ್ನ, ರವಿಭೂಷಣ್, ಬೆಂಜಾಮಿನ್, ಸ್ಯಾಮುವೇಲ್, ಇಮ್ಯಾನುವೇಲ್, ವೆಂಕಟೇಶ ಭಂಡಾರಿ, ಮಲ್ಲಿಕಾರ್ಜುನ ಹೊಸೂರು, ಸಿದ್ದಣ್ಣ ರಾಂಪೂರ ಸೇರಿದಂತೆ ಅನೇಕರಿದ್ದರು. ಕಾಲೇಜಿನ ಎನ್ನೆಸ್ಸೆಸ್ ಘಟಕದ ಶಿಬಿರಾರ್ಥಿಗಳು ಹಾಗೂ ಬೋಧಕ ವರ್ಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement