ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರಜಾಪ್ರಭುತ್ವ ಉಳಿವಿಗಾಗಿ ಕಡ್ಡಾಯ ಮತದಾನ ಮಾಡಿ

Srinivasa Murthy VN
Updated On : 28 Mar 2014, 11:41 am

ಲಿಂಗಸ್ಗೂರು: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಗೆ ಪ್ರತಿಯೊಂದು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ಅಗತ್ಯ ಎಂದು ಸಹಾಯಕ ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ. ಯೋಗೇಶ್ ತಿಳಿಸಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಆಯೋಗ ಪ್ರಜಾ ಪ್ರತಿನಿಧಿ ಕಾಯಿದೆಯಡಿ ಕಳೆದ 1951ರಿಂದ 2014ರವರೆಗೆ ಅಂದರೆ ಸುಮಾರು 64 ವರ್ಷಗಳ ಕಾಲ ಪ್ರತಿಯೊಂದು ಚುನಾವಣೆ ನಡೆಸುತ್ತಾ ಬಂದಿದೆ. ರಾಜ್ಯದಲ್ಲಿ ಕಳೆದ 2009ರ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಲ್ಲಿ ಕೇವಲ ಶೇ.45 ಮತದಾನವಾಗಿದ್ದು, ಇದು ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಪ್ರತಿಮತದಾರ ಅದರಲ್ಲೂ ಯುವಕರು ಮತದಾರರು ತಪ್ಪದೇ ಮತದಾನ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿ ರಾಯಚೂರು ಜಿಲ್ಲೆ ಉತ್ತಮ ಮತದಾನ ಮಾಡಿದ ಕೀರ್ತಿ ತರಬೇಕೆಂದು ಕರೆ ನೀಡಿದರು.

ಆಪ್, ಜೆಎಸ್ಪಿ ಸಮನ್ವಯ ಸಮಿತಿ ರಚನೆ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಚುನಾವಣೆಯ ಕೋರ್ಕಮಿಟಿ ಹಾಗೂ ಜನಸಂಗ್ರಾಮ್ ಪರಿಷತ್ನ ಸಮನ್ವಯ ಸಮಿತಿ ಸಭೆಯನ್ನು ಈಚೆಗೆ ನಗರದ ಆಪ್ ಪಕ್ಷದ ಕಚೇರಿ ಆವರಣದ ಉದ್ಯಾನವನದಲ್ಲಿ ಆಯೋಜಿಸಲಾಗಿತ್ತು.
ಸಮನ್ವಯ ಸಮಿತಿ ರಚನೆ: ಈ ವೇಳೆ ಆಪ್ ಮತ್ತು ಜನಸಂಗ್ರಾಮ ಪರಿಷತ್ನ ಸಮನ್ವಯ ಸಮಿತಿ ರಚಿಸಲಾಯಿತು. ಸಮನ್ವಯ ಸಮಿತಿ ಗೌರವ ಸಂಚಾಲಕರಾಗಿ ರಾಘವೇಂದ್ರ ಕುಷ್ಟಗಿ, ಸಂಚಾಲಕರಾಗಿ ವೈಜನಾಥಸ್ವಾಮಿ ಗುರುಮಠಕಲ್ ಹಿರೇಮಠ (ಯಾದಗಿರಿ), ಆನಂದ ಕುಮಾರ (ರಾಯಚೂರು), ಭೀಮರಾಯ ಜರದಬಂಡಿ (ದೇವದುರ್ಗ), ಸಿದ್ದನಗೌಡ ಪಾಟೀಲ್ (ಮಾನ್ವಿ), ಅನ್ನಪೂರ್ಣ ಎಂ.ಜವಳಿ (ಮಹಿಳಾ ಉಸ್ತುವಾರಿ ಮತ್ತು ಲಿಂಗಸ್ಗೂರು), ಅಮೀನರೆಡ್ಡಿ ಕಾಳೆಬೆಳಗುಂದಿ (ಶಹಾಪುರ), ಎಂ.ಎಚ್.ಖಾನ್ (ಸುರಪೂರ), ಜನಸಂಗ್ರಾಮ ಪರಿಷತ್ ನಿಂದ ಡಾ. ವಿ.ಎ. ಮಾಲಿಪಾಟೀಲ್, ಅಹ್ಮದ್ ಪಟೇಲ್ ನಾಗುಂಡಿ, ಸಿರಾಜ್ ಅಹ್ಮದ್ ಜಾಫ್ರಿ (ರಾಯಚೂರು ಗ್ರಾಮೀಣ)ಸೇರಿ ಅನೇಕರು ಸಮಿತಿಗೆ ನೇಮಕಗೊಂಡಿದ್ದಾರೆಂದು ಆಪ್ ಪಾರ್ಟಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement