ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭವಿಷ್ಯ ನಿಧಿ: ಅರ್ಜಿ ಸಲ್ಲಿಕೆಯಲ್ಲಿ ಬದಲಾವಣೆ

Srinivasa Murthy VN
Updated On : 12 Aug 2013, 11:32 am

ಭವಿಷ್ಯ ನಿಧಿ ಖಾತೆ ವರ್ಗಾಣೆಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅನೂಕೂಲವಾಗುವ ನಿಟ್ಟಿನಲ್ಲಿ ಭವಿಷ್ಯ ನಿಧಿ ಸಂಸ್ಥೆ ಕೆಲವೊಂದು ಬದಲಾವಣೆ ತಂದಿದೆ.
ಖಾತೆ ವರ್ಗಾವಣೆಗೆ ಅರ್ಜಿಯ ಹೊಸ ನಮೂನೆಯನ್ನು ಬಿಡುಗಡೆ ಮಾಡಿದ್ದು, ಹಿಂದೆ ಇದ್ದ ಅರ್ಜಿ ನಮೂನೆ ಫಾರಂ 13(ಆರ್) ಸ್ಥಗಿತಗೊಳಿಸಲಾಗಿದೆ. ಉದ್ಯೋಗಿಗಳು ಆನ್‌ಲೈನ್ ಮೂಲಕ ವರ್ಗಾವಣೆ ಅರ್ಜಿಯನ್ನು ತಮ್ಮ ಉದ್ಯೋಗದಾತರ ಡಿಜಿಟಸ್ ಸಹಿಯೊಂದಿಗೆ ದೃಢೀಕರಿಸಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುವುದು. ಆನ್‌ಲೈನ್ ಮೂಲಕ ವರ್ಗಾವಣೆ ಅರ್ಜಿಯನ್ನು ಸಲ್ಲಿಸಲು ಉದ್ಯೋಗದಾತರ ಡಿಜಿಟಲ್ ಸಹಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಉದ್ಯೋಗದಾತರಿಗೆ ಪ್ರತ್ಯೇಕವಾಗಿ ಮಾಹಿತಿ ಕೊಡಲಾಗಿದೆ.
ಡಿಜಿಟಲ್ ಸಹಿ: ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಗೆ ಬರುವ ಉದ್ಯೋಗದಾತರು ಈ ಮೇಲಿನ ಸೂಚನೆಗಳನ್ನು ಗಮನಿಸಿ ತುರ್ತಾಗಿ ತಮ್ಮ ಸಂಸ್ಥೆಗಳ ಅಧಿಕೃತ ಅಧಿಕಾರಿಗಳ ಡಿಜಿಟಲ್ ಸಹಿಗಳನ್ನು ನೋಂದಾಯಿಸಲು ಮತ್ತೊಮ್ಮೆ ಈ ಮೂಲಕ ಕೋರಲಾಗಿದೆ.
ಈ ಸಂಬಂಧ ವೆಬ್ ಸೈಟ್ ಶಿವಮೊಗ್ಗ- ಭವಿಷ್ಯ ನಿಧಿ ಖಾತೆ ವರ್ಗಾಣೆಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅನೂಕೂಲವಾಗುವ ನಿಟ್ಟಿನಲ್ಲಿ ಭವಿಷ್ಯ ನಿಧಿ ಸಂಸ್ಥೆ ಕೆಲಮೊಂದು ಬದಲಾವಣೆ ತಂದಿದೆ. ಖಾತೆ ವರ್ಗಾವಣೆಗೆ ಅರ್ಜಿಯ ಹೊಸ ನಮೂನೆಯನ್ನು ಬಿಡುಗಡೆ ಮಾಡಿದ್ದು, ಹಿಂದೆ ಇದ್ದ ಅರ್ಜಿ ನಮೂನೆ ಫಾರಂ 13(ಆರ್ನ್ನು ಸ್ಥಗಿತಗೊಳಿಸಲಾಗಿದೆ.
ಉದ್ಯೋಗಿಗಳು ಆನ್ಲೈನ್ ಮೂಲಕ ವರ್ಗಾವಣೆ ಅರ್ಜಿಯನ್ನು ತಮ್ಮ ಉದ್ಯೋಗದಾತರ ಡಿಜಿಟಲಲ್ಸಹಿಯೊಂದಿಗೆ ದೃಡೀಕರಿಸಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುವುದು. ಆನ್‌ಲೈನ್ ಮೂಲಕ ವರ್ಗಾವಣೆ ಅರ್ಜಿಯನ್ನು ಸಲ್ಲಿಸಲು ಉದ್ಯೋಗದಾತರ ಡಿಜಿಟಲ್ ಸಹಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಉದ್ಯೋಗದಾತರಿಗೆ ಪ್ರತ್ಯೇಕವಾಗಿ ಮಾಹಿತಿ ಕೊಡಲಾಗಿದೆ.
ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಗೆ ಬರುವ ಉದ್ಯೋಗದಾತರು ಈ ಮೇಲಿನ ಸೂಚನೆಗಳನ್ನು ಗಮನಿಸಿ ತುರ್ತಾಗಿ ತಮ್ಮ ಸಂಸ್ಥೆಗಳ ಅಧಿಕೃತ ಅಧಿಕಾರಿಗಳ ಡಿಜಿಟಲ್ ಸಹಿಗಳನ್ನು ನೋಂದಾಯಿಸಲು ಮತ್ತೊಮ್ಮೆ ಈ ಮೂಲಕ ಕೋರಲಾಗಿದೆ.
ಈ ಸಂಬಂಧ ವೆಬ್ ಸೈಟ್(www.epfindia.gov.in)ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಥವಾ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು, ಕಂಪ್ಯೂಟರ್ ವಿಭಾಗವನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತ ಕೆ.ಸಿ. ಚಂದ್ರಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ- 08182-275105.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement