ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪ್ಪನ ಶ್ರಾದ್ಧ ಮಾಡಲೂ ರಜೆ ಕೊಡಲಿಲ್ಲ!

Srinivasa Murthy VN
Updated On : 19 Dec 2013, 12:30 pm

-ಶ್ರೀಕಾಂತ ಭಟ್
ಶಿವಮೊಗ್ಗ: ಸಾರಿಗೆ ಸಂಸ್ಥೆಯಲ್ಲಿನ ಕಿರುಕುಳದ ಹುಳುಕು ಕೆದಕಿದಷ್ಟೂ ಹೊರ ಬರುತ್ತಿದೆ. ಭದ್ರಾವತಿ ಘಟಕದಲ್ಲಿ ನೌಕರನೊಬ್ಬನಿಗೆ ತಂದೆಯ ಶ್ರಾದ್ಧ ಮಾಡಲೂ ರಜೆ ನೀಡದೆ ಅಡ್ಡಗಾಲು ಹಾಕಲಾಗಿದೆ.
ಕೆಳ ಹಂತದ ನೌಕರನೊಬ್ಬ ತಂದೆಯ ಶ್ರಾದ್ಧ ಮಾಡಿಸಲು 20 ದಿನಗಳ ಮುಂಚೆಯೇ ಒಂದು ದಿನದ ರಜೆ ಕೋರಿದ್ದ. ರಜೆಗೆ ಅವಕಾಶವಿದ್ದರೂ ಮೇಲಧಿಕಾರಿಗಳು ಅದಕ್ಕೆ ಅಡ್ಡಗಾಲು ಹಾಕಿ ಸತಾಯಿಸಿದ್ದಾರೆ. ಘಟಕ ವ್ಯವಸ್ಥಾಪಕ ದಿನೇಶ್‌ಕುಮಾರ್ ಚನ್ನಗಿರಿ ಅವರ ಏಕವಚನ ಪ್ರಯೋಗದಿಂದ ಹಲವಾರು ಬಾರಿ ಕೈ ಮಿಲಾಯಿಸುವ ಹಂತಕ್ಕೂ ಹೋದ ಸಂದರ್ಭಗಳಿವೆ. ನೊಂದ ಸುಮಾರು 56 ಸಿಬ್ಬಂದಿ ರಾಜ್ಯಪಾಲರು, ಕಾರ್ಮಿಕ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದ್ದಾರೆ. ಅವರು ಸಹಿ ಮಾಡಿದ ದೂರು ಸಲ್ಲಿಸಿದ್ದಕ್ಕೆ ಪ್ರತಿದಿನ ಕಿರುಕುಳ ನೀಡಲಾಗುತ್ತಿದೆ. ರಜಾ ಮಂಜೂರಾತಿ ಸರಿಪಡಿಸಲು 20,000 ಲಂಚ ಪಡೆದ ಪ್ರಕರಣವೊಂದು ಇವರ ಮೇಲಿದೆ.
ಜಗದೀಶ್ ಎಂಬ ಚಾಲಕ ಕಂ ನಿರ್ವಾಹಕ 2013, ಅ.1ರಂದು ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ರಜೆ ಕೋರಿದರೂ ಕೊಟ್ಟಿರಲಿಲ್ಲ. ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ನಿರ್ವಾಹಕರೊಬ್ಬರ ಪತ್ನಿ ಗುಲ್ಬರ್ಗದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರಜೆಗೆ ತೆರಳಲು ಕೋರಿದರೆ ನಿರಾಕರಿಸಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ರಜೆ ಇಲ್ಲದ್ದರಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗುವ ಹಂತ ತಲುಪಿದೆ. ಇವರ ಕಿರುಕುಳದಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಸಿಐಟಿಯು ಮುಖಂಡ ನರಸಿಂಹಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement