ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಂತ್ರ ಮಾಂಗಲ್ಯ ವಿವಾಹಕ್ಕೆ ಅವಕಾಶ

Srinivasa Murthy VN
Updated On : 13 Mar 2013, 10:24 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.12
ರಾಷ್ಟ್ರಕವಿ ಕುವೆಂಪು ಅವರ ಆದರ್ಶ, ತತ್ವಗಳನ್ನು ಪಾಲಿಸಿಕೊಂಡು ಬರುತ್ತಿರುವ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಗೆ ಸದಾ ಸಿದ್ಧವಿದೆ.
   ಮದುವೆಗಾಗಿ ಅಪಾರ ದುಂದುವೆಚ್ಚ, ಅದಕ್ಕಾಗಿ ಮಾಡುವ ಸಾಲ, ಇದರಿಂದ ಅನುಭವಿಸುವ ಬಾಧೆಗಳನ್ನು ಕಂಡ ರಾಷ್ಟ್ರಕವಿ ಕಂಡುಕೊಂಡ  ಮಾರ್ಗ ಸರಳ ವಿವಾಹ ಅಥವಾ ಮಂತ್ರ ಮಾಂಗಲ್ಯ.
  ಇದನ್ನೇ ಮುಂದುವರೆಸಿಕೊಂಡು ಬಂದಿರುವ ಕುವೆಂಪು  ಪ್ರತಿಷ್ಠಾನ ಮಂತ್ರಮಾಂಗಲ್ಯ ವಿಧಾನದಲ್ಲಿ ವಿವಾಹವಾಗಲು ಸ್ವಇಚ್ಛೆಯಿಂದ ಬರುವ ಯುವಕ- ಯುವತಿಯರಿಗೆ  ಕುಪ್ಪಳಿಯ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನದಲ್ಲಿ ಅವಕಾಶ ಮಾಡಿಕೊಡಲಿದೆ.
   ಆದರೆ, ಮದುವೆ ಕುವೆಂಪು ಪ್ರಣೀತವಾಗಿರುವಂತೆಯೇ ನಡೆಯಬೇಕು. ಪ್ರತಿಷ್ಠಾನವು ಸೂಚಿಸುವ ನೀತಿ ನಿಯಾಮವಳಿಗಳಿಗೆ ಬದ್ಧವಾಗಿರಬೇಕು. ಇದಕ್ಕೆ ಸಿದ್ಧರಿರುವ ಎಲ್ಲಾ ಜಾತಿ ಧರ್ಮದವರಿಗೂ, ಅಂತರ್ಜಾತಿಯ ವಿವಾಹಗಳಿಗೂ  ಅವಕಾಶವಿದೆ.
   ಹೇಮಾಂಗಣದಲ್ಲಿ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳಿಲ್ಲದ ನಿಗದಿತ ದಿನಗಳಲ್ಲಿ ವಿವಾಹಕ್ಕೆ  ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕ ಡಾ. ಜೆ.ಕೆ. ರಮೇಶ್ ತಿಳಿಸಿದ್ದಾರೆ. ವಿವರಗಳಿಗಾಗಿ- 08181 228843 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement