ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊಸ ನಗರಸಭೆಗೆ ಹಳೇ ಸವಾಲು

Srinivasa Murthy VN
Updated On : 13 Mar 2013, 10:23 am

-ಮೋಹನ್‌ಕುಮಾರ್ ಎನ್.
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.11
ಚುನಾವಣೆ ಮುಗಿದಿದೆ. ಈಗ ನಗರಸಭೆಗೆ ಪುರಪಿತೃಗಳು, ಜತೆಗೆ ಅನುಭವಿಗಳೂ ಬರಲಿದ್ದಾರೆ. ಆದರೆ ನಗರಸಭೆಯಲ್ಲಿ ಹಿಂದಿನ ಸಮಸ್ಯೆಗಳೇ ಬಗೆಹರಿಯದೆ ಇನ್ನೂ ನೂರಾರು ಸಮಸ್ಯೆಗಳು ಕಾಯುತ್ತಿವೆ.
ಸದ್ಯ ಅತಂತ್ರ ಫಲಿತಾಂಶದಿಂದ ನಗರಸಭೆಯ ಅಧಿಕಾರದ ಗದ್ದುಗೆ ಏರಲು ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ಮಗ್ನರಾಗಿವೆ. ಈ ಬಗ್ಗೆ “OÚ«Ú­sÚ®Úúڒ ನಗರದ ನಾಗರಿಕರು, ಪ್ರಮುಖರನ್ನು ಭೇಟಿ ಮಾಡಿ ಹೊಸ ನಗರಸಭೆಯ ಬಗ್ಗೆ ಅವರ ನಿರೀಕ್ಷೆಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡಿತು.

ಬೇಡಿಕೆಗಳ ಪಟ್ಟಿ
 ನಗರಸಭೆಯ ಆಡಳಿತಕ್ಕೆ ಹೊಸ ಸ್ವರೂಪ ಕೊಡಬೇಕು. ಜನಸ್ನೇಹಿ ಆಡಳಿತ ರೂಪುಗೊಳ್ಳಬೇಕು.
 ಜನರ ಕುಂದುಕೊರತೆಯನ್ನು ಆಲಿಸಿ ತ್ವರಿತವಾಗಿ ಬಗೆಹರಿಸಲು ನಗರಸಭೆ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು.
 ಜನರ ಬೇಡಿಕೆಗಳನ್ನು ತಿಳಿದುಕೊಳ್ಳಲು ಅವರೇ ಬಂದು ಅರ್ಜಿ ಕೊಡಬೇಕು ಎಂಬ ಧೋರಣೆ ಕೈಬಿಟ್ಟು ಇಂಟರ್‌ನೆಟ್ ಇತ್ಯಾದಿ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು.
 ಶಾಶ್ವತ ಹೆಲ್ಪ್ ಡೆಸ್ಕ್ ಸ್ಥಾಪಿಸಿ ತುರ್ತು ಸಂದರ್ಭದಲ್ಲಿ ಸ್ಪಂದಿಸಬೇಕು. ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದರೆ ಸೂಕ್ತ.
 ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡಿ ಜನರೇ ನಗರಸಭೆಗೆ ಬಂದು ಕೆಲಸ ಮಾಡಿಕೊಳ್ಳಲು ಈ ಹೆಲ್ಪ್ ಡೆಸ್ಕ್ ಸಿಬ್ಬಂದಿ ಸಹಾಯ ಮಾಡಬೇಕು. ಮಧ್ಯವರ್ತಿಗಳಾಗದಂತೆ ಎಚ್ಚರಿಕೆ ವಹಿಸಬೇಕು.
 ನಗರಸಭೆ ಅಧಿಕಾರಿಗಳು ಆಗಾಗ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುವುದನ್ನು ತಪ್ಪಿಸಿ ಜನರ ಸೇವೆಗೆ ಸದಾ ಸಿದ್ಧರಾಗಿರುವಂತೆ ನೋಡಿಕೊಳ್ಳಬೇಕು.

ಯಾವುದೇ ನಗರಸಭೆಯ ಪ್ರಮುಖ ಜವಾಬ್ದಾರಿ ಸ್ವಚ್ಛತೆಯನ್ನು ಕಾಪಾಡುವುದು. ನಗರದಲ್ಲಿ ಈ ವರೆಗೆ ಶೇ.100 ಸ್ವಚ್ಛತೆಯನ್ನು ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಮಾಡಿಲ್ಲ. ಇದೇ ನಾಗರಿಕರ ಪ್ರಮುಖ ಬೇಡಿಕೆಯಾಗಿದೆ. ಇದರ ಜತೆಗೆ ನಿರ್ಲಕ್ಷಿತ ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಒದಗಿಸುವತ್ತಲ್ಲೂ ಗಮನ ಹರಿಸಬೇಕು ಎಂಬುದು ನಾಗರಿಕರ ಅಭಿಪ್ರಾಯ

ಸ್ವಚ್ಛತೆ ಬಗ್ಗೆ ಹೆಚ್ಚು ಒತ್ತು ನೀಡಿ, ಅದರ ನಿರ್ವಹಣೆಯನ್ನು ಆಯಾ ವಾರ್ಡ್‌ನ ಸದಸ್ಯರಿಗೆ ವಹಿಸಬೇಕು. ನಗರಸಭೆಯಿಂದ ನೀಡಲಾಗುವ ಪತ್ರ ವ್ಯವಹಾರಗಳು (ಖಾತೆಗಳು) ಕಂಪ್ಯೂಟರೀಕರಣ ಆಗಬೇಕು. ಯಾವ ವಾರ್ಡ್‌ನಲ್ಲಿ ಯಾರಿಂದ ಎಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ಮಾಸಿಕ ಸಭೆ ನಡೆಸಿ ಚರ್ಚಿಸಬೇಕು.
    - ಕೆ.ವಿ. ವಸಂತಕುಮಾರ್, ಪ್ರಧಾನ ಕಾರ್ಯದರ್ಶಿ, ನಾಗರಿಕ ಹಿತ ರಕ್ಷಣ ವೇದಿಕೆ

ನಗರದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ತೆರೆಯಲು ಕ್ರಮ, ಕುಡಿಯುವ ನೀರಿನ ಗುಣಮಟ್ಟ ಹೆಚ್ಚಳ, ಒಳಚಂರಡಿ ವ್ಯವಸ್ಥೆ ಮಾಡಬೇಕು. ನಗರಸಭೆಯ ಆಡಳಿತದಲ್ಲಿ ಪಾರದರ್ಶಕತೆ ತರಲು ನಾಗರಿಕ ಸಮಿತಿಯೊಂದನ್ನು ರಚಿಸಿ ಅದರ ಸಲಹೆ, ಸೂಚನೆಗಳನ್ನು ಪಡೆಯಬೇಕು. ಪ್ರಮುಖ ರಸ್ತೆ ಹಾಗೂ ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಆಗಬೇಕು.
      - ಮಹೇಂದ್ರಪ್ಪ, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ

ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಮೊದಲು ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮ ಕೈಗೊಳ್ಳಬೇಕು.
  ನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಬೇಕು. ಜನಪರ ಯೋಜನೆಗಳ ತರುವು ಮೊದಲು ಕೆಲ ಸಂಘ, ಸಂಸ್ಥೆಗಳು ಹಾಗೂ ನಾಗರಿಕರೊಂದಿಗೆ ಚರ್ಚಿಸಬೇಕು.
        - ಗೋಪಿನಾಥ್, ಅಧ್ಯಕ್ಷ, ನಮ್ಮ ಕನಸಿನ ಶಿವಮೊಗ್ಗ

ಹೊಸದಾಗಿ ನಗರಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರು ಮಹಿಳೆಯರ ಬಗ್ಗೆ ಕಾಳಜಿ ವಹಿಸಿ, ನಗರಸಭೆಯಿಂದ ಸಿಗಬೇಕಾದ ಹೊಲಿಗೆ ಯಂತ್ರ, ವಿದ್ಯಾರ್ಥಿನಿಯರಿಗೆ ಸಿಗಬೇಕಾದ ಕಂಪ್ಯೂಟರ್‌ಗಳು ಸೇರಿದಂತೆ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ನೀಡಬೇಕು. ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಡಬೇಕು.
           - ಶಾಂತ ಸುರೇಂದ್ರ, ಅಧ್ಯಕ್ಷರು,ಶಾಶ್ವತಿ
                            ಮಹಿಳಾ ವೇದಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement