ಸಿದ್ದರಾಮಯ್ಯ ಪ್ರಮಾಣ: ಕಾಂಗ್ರೆಸ್ ವಿಜಯೋತ್ಸವ
ಕೊಪ್ಪ: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಹಿಂದುಳಿದ ವರ್ಗದವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯವರು ನಡೆಸಿಕೊಂಡು ಬಂದ ಭ್ರಷ್ಟಚಾರ, ಸ್ವಜನಪಕ್ಷ ಪಾತ, ರಾಜಕೀಯ ದ್ವೇಷಗಳಂತಂಹ ಕೆಟ್ಟ ಸಂಸ್ಕೃತಿಯನ್ನು ಬುಡ ಸಮೇತ ಕಿತ್ತು ಇವರ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಅಲ್ಪ ಮತಗಳಿಂದ ಪಕ್ಷ ಸೋತಿದ್ದರೂ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ನಮ್ಮ ನಾಯಕರ ಗಮನಕ್ಕೆ ತಂದು ಪರಿಹಾರಿ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.
ವಿಜಯೋತ್ಸವದಲ್ಲಿ ಪಪಂ ಸದಸ್ಯರಾದ ಸುಬ್ರಮಣ್ಯ, ಹರೀಶ್ ಭಂಡಾರಿ, ಮಲಾತಿ, ಅಲ್ಪಸಂಖ್ಯಾತ ವಿಭಾಗದ ತಾಲೂಕು ಅಧ್ಯಕ್ಷ ಖಾದರ್, ಮುಖಂಡರಾದ ಒಣಿ ತೋಟ ರತ್ನಾಕರ್, ವಕೀಲ ಆದರ್ಶ, ಇನೇಶ್, ಎಂ.ಸಿ. ಆಶೋಕ್, ನುಗ್ಗಿಮಂಜು, ಅಲ್ತಾಫ್, ಬರ್ಕ್ತ್ ಮತ್ತಿತರು ಹಾಜರಿದ್ದರು.
ಜೋಗಿಸರ, ನಾರ್ವೆ, ನುಗ್ಗಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಹೊರನಾಡಿನಲ್ಲಿ ಅಕ್ಷಯ ತೃತೀಯ
ಕ.ಪ್ರ.ವಾರ್ತೆ ಮೂಡಿಗೆರೆ ಮೇ 13
ಶಿಥಿಲಗೊಂಡಿದ್ದ ಶ್ರೀ ಮಾತೆಯ ಗರ್ಭಗುಡಿಯನ್ನು 1973ರಲ್ಲಿ ನೂತನವಾಗಿ ನಿರ್ಮಿಸಿ, ಶಿಲಾಮಯ ಚಕ್ರಾತ್ಮಕ ದಿವ್ಯ ಮಂದಿರದಲ್ಲಿ ಆದಿಶಕ್ತೀದೇವಿಯ ಪ್ರತಿಷ್ಠೆ ಹಾಗೂ ಅನ್ನಪೂರ್ಣೇಶ್ವರಿ ದೇವಿಯ ಪ್ರತಿಷ್ಠಾಪನೆ ನೆರವೇರಿಸಿದ ಪುಣ್ಯ ದಿನದ ಅಂಗವಾಗಿ ಅಕ್ಷಯ ತದಿಗೆಯಂದು ವರ್ಧಂತಿ ಉತ್ಸವ ನಡೆಸಲಾಗುತ್ತಿದೆ ಎಂದು ಹೊರನಾಡು ಕ್ಷೇತ್ರದ ಕ್ಷೇತ್ರದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ತಿಳಿಸಿದರು. ಅನ್ನಪೂರ್ಣೇಶ್ವರಿಯನ್ನು ನಂಬಿ ಬಂದ ಭಕ್ತರನ್ನು ಕೈಬಿಟ್ಟಿಲ್ಲ ಎಂಬುವುದಕ್ಕೆ ಭಕ್ತರೇ ಉದಾಹರಣೆಯಾಗಿದ್ದಾರೆ ಎಂದರು.