ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶ್ರೀ ಪದ್ಧತಿಯಿಂದ ನೀರಿನ ಉಳಿತಾಯ'

Srinivasa Murthy VN
Updated On : 27 Nov 2013, 11:27 am

ಕ.ಪ್ರ.ವಾರ್ತೆ  ಶಿವಮೊಗ್ಗ ನ. 26
ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ರೈತರ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಡಿಯಲ್ಲಿ ಬತ್ತದ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕ್ಷೇತ್ರೋತ್ಸವವನ್ನು ತಾಲೂಕಿನ ಪಿಳ್ಳಂಗಿರಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಮತ್ತು ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ ಎಂ. ಎಸ್. ಗಣೇಶ್ ಬಾಬು, ಶ್ರೀ ಪದ್ಧತಿಯನ್ನು ಬತ್ತದಲ್ಲಿ ಅಳವಡಿಸಿಕೊಳ್ಳುವುದರಿಂದ ನೀರನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ನೀರಿನ ಉಳಿತಾಯ ಆಗುವುದಲ್ಲದೆ, ಹೆಚ್ಚಿನ ಇಳುವರಿ ಪಡೆಯಬಹುದು. ಮಣ್ಣಿನ ಫಲವತ್ತತೆಯನ್ನೂ ಹೆಚ್ಚಿಸಬಹುದೆಂದು ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ, ಹೈಬ್ರಿಡ್ ಬತ್ತದ ತಳಿಯ ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ಬತ್ತದ ಹೈಬ್ರೀಡ್ ತಳಿಯ ಬೀಜವು ಎಕರೆಗೆ 6 ಕೆಜಿ ಸಾಕಾಗಿದ್ದು, ಒಂದೊಂದೆ ಸಸಿ ನಾಟಿ ಮಾಡಿದರೂ ಅದು 25- 30 ತೆಂಡೆಗಳು ಒಡೆದು ಹೆಚ್ಚಿನ ಇಳುವರಿ ಬರುತ್ತದೆ. ನಮ್ಮ ವಿಶ್ವವಿದ್ಯಾನಿಲಯದಿಂದ ಬತ್ತದ ಹೈಬ್ರೀಡ್ ಕೆಆರ್‌ಎಚ್- 4 ಬಿಡುಗಡೆ ಮಾಡಿದ್ದು, ರೈತರಿಗೆ ಲಭ್ಯವಿರುತ್ತದೆ ಎಂದು ತಿಳಿಸಿದರು.  
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಅಧಿಕಾರಿ ಜಗದೀಶ್ ಅಲ್ಸೆ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಡಾ. ಡಿ.ಎಂ. ಬಸವರಾಜ್ ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ. ಹನುಮಂತಸ್ವಾಮಿ, ಪಿಳ್ಳಂಗಿರಿ ತಾಪಂ ಸದಸ್ಯ ಎ. ನಾಗರಾಜ, ಗ್ರಾಪಂ ಸದಸ್ಯೆ ರತ್ನಮ್ಮ, ಇಪ್ಕೋ ಅಧಿಕಾರಿ ಕೃಪಾ ಶಂಕರ್, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಬಿ.ಸಿ. ಧನಂಜಯ, ಡಾ. ಟಿ.ಎಂ. ಸೌಮ್ಯ, ಡಾ. ನಾಗರಾಜಪ್ಪ ಅಡಿವಪ್ಪರ್, ನಾಗರಾಜ ಮತ್ತು ಯೋಗೀಶ್ ಶ್ರೀನಿವಾಸ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement