ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪರಿಸರ ಸ್ನೇಹಿ ಉತ್ಪನ್ನಬಳಸಲು ಕರೆ

Srinivasa Murthy VN
Updated On : 30 Nov 2013, 11:24 am

ಶಿವಮೊಗ್ಗ: ಸಾರ್ವಜನಿಕರು ಪರಿಸರಕ್ಕೆ ಮಾರಕವಾಗಿರುವ ಉತ್ಪನ್ನಗಳನ್ನು ಕೈಬಿಟ್ಟು ಪರಿಸರ ಸ್ನೇಹಿ ಉತ್ಪನ್ನಗಳನ್ನು ಪ್ರತಿನಿತ್ಯ ಬಳಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ವಿಸ್ತರಣಾ ನಿರ್ದೇಶಕ ಡಾ ಎಂ.ಎನ್. ಗಣೇಶ್ ಬಾಬು ಕರೆ ನೀಡಿದರು.
ನಗರದ ಕೃಷಿ ವಿಜ್ಞಾನ ಕೇಂದ್ರ ಮತ್ತು ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಡಿಕೆ ಹಾಳೆಯಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ ಕುರಿತ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಕೆಲ ಉತ್ಪನ್ನಗಳಿಂದ ಪರಿಸರಕ್ಕೆ ಮಾರಕವಾಗುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ಪರಿಸರದ ಸ್ವಾಸ್ಥ್ಯ ಹಾಳುಗುತ್ತಿದೆ. ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಆದರಿಂದ ಎಲ್ಲರೂ ಅದಕ್ಕೆ ಪರ್ಯಾಯ ವಸ್ತುಗಳ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಅಡಿಕೆ ಹಾಳೆ ಉತ್ಪನ್ನಗಳ ತಯಾರಕ ಜಗದೀಶ್, ತೋಟದಿಂದ ಉತ್ತಮ ಅಡಿಕೆ ಹಾಳೆಗಳನ್ನು ಸಂಗ್ರಹಿಸುವುದು, ಅವುಗಳನ್ನು ಸ್ವಚ್ಛಗೊಳಿಸುವುದು, ನೆರಳಿನಲ್ಲಿ ಒಣಗಿಸಿ ವಿವಿಧ ಆಕಾರ ಮತ್ತು ವಿಧದ ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮುಖಾಂತರ ವಿವರಿಸಿದರು. ಅಲ್ಲದೆ ಉತ್ಪನ್ನಗಳ ಮಾರಾಟ ಹಾಗೂ ಉತ್ಪನ್ನಗಳನ್ನು ತಯಾರಿಸಲು ಬೇಕಾಗುವ ಯಂತ್ರೋಪಕರಣಗಳ ಲಭ್ಯತೆ ಹಾಗೂ ಹಣಕಾಸಿನ ನೆರವು ಕುರಿತು ವಿವರಿಸಿದರು.  ತರಬೇತಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಒಟ್ಟು 35 ರೈತ ಮತ್ತು ರೈತ ಮಹಿಳೆಯರು ಪಾಲ್ಗೊಂಡಿದ್ದರು.  ಕೃಷಿ ವಿಜ್ಞಾನ ಕೇಂದ್ರ (ತೋಟಗಾರಿಕೆ) ವಿಷಯ ತಜ್ಞ, ಡಾ. ನಾಗರಾಜಪ್ಪ ಅಡಿವಪ್ಪರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿವಿಯ ಅಧಿಕಾರಿ ಡಾ. ಬಿ.ಸಿ.ಹನುಮಂತಸ್ವಾಮಿ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಬಸವರಾಜ್ ಬೀರಣ್ಣವರ್, ಆರ್. ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement