56ನೇ ಗಣೇಶೋತ್ಸವ
ಕ.ಪ್ರ.ವಾರ್ತೆ ಹೊಳಲ್ಕೆರೆ ಸೆ.10
ಪಟ್ಟಣದ ಗಜಾನನ ಸಂಘದಿಂದ 56ನೇ ವರ್ಷದ ಪೂಜಾ ಮಹೋತ್ಸವನ್ನು ಸೆ 9ರಿಂದ 19ರವರಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾ ಅವರಣದಲ್ಲಿ ಏರ್ಪಡಿಸಲಾಗಿದೆ.
ಸಂಜೆ 8 ಗಂಟೆಗೆ ಭರತನಾಟ್ಯ, ಆರ್ಕೆಸ್ಟ್ರಾ, ಹಾಸ್ಯ ನಾಟಕ, ಸಂಗೀತ ಸಂಜೆ, ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಸೆ.11ರಂದು ಹಾಸ್ಯ ನಾಟಕ ಕಿವುಡ ಮಾಡಿದ ಕಿತಾಪತಿ ನಡೆಯಲಿದೆ. 18ರಂದು ಉಚಿತ ಸಾಮೂಹಿಕ ವಿವಾಹ, 19 ರಂದು ಬೆಳಗ್ಗೆ 10.30 ಕ್ಕೆ ಗಣಪತಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಯಂಕಾಲ 6 ಕ್ಕೆ ಗಣಪತಿ ವಿಸರ್ಜಿಸಲಾಗುವುದು ಎಂದು ಗಜಾನನ ಸಂಘದವರು ತಿಳಿಸಿದ್ದಾರೆ.
ಸ್ವಾವಲಂಭಿ ಬದುಕಿಗಾಗಿ ಶಿಕ್ಷಣ ಅಗತ್ಯ: ಫಿರ್ದೋಸ್
ಕ.ಪ್ರ.ವಾರ್ತೆ ಹೊಳಲ್ಕೆರೆ ಸೆ.10
ಅನಕ್ಷರಸ್ಥ ಮಹಿಳಾ ಸಮಾಜ ಶೋಷಣೆಗೆ ಸಿಲುಕಿಸಿದೆ. ಮಹಿಳೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಶೈಕ್ಷಣೆಕ ಪ್ರಗತಿ ಸಾಧಿಸಬೇಕು ಎಂದು ಶಿಕ್ಷಕಿ ಫಿರ್ದೊಸ್ ಹೇಳಿದರು.
ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಅವರಣದಲ್ಲಿ ತಾಲೂಕು ಲೋಕಶಿಕ್ಷಣ ಸಮಿತಿ ಆಯೋಜಿಸಿದ 49ನೇ ಅಂತರ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಿಳಾ ಸಭಲಿಕರಣಕ್ಕೆ ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು. ಬಾಲ್ಯದಲ್ಲಿ ನಾನಾ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದ ಮಹಿಳೆಯರ ಪ್ರಗತಿಗೆ ಸರ್ಕಾರ ಸಾಕ್ಷರ ಭಾರತ ಮೊಲಕ ಶಿಕ್ಷಣ ನೀಡುತ್ತಿದೆ.ಅನಕ್ಷರಸ್ಥರು ಸರ್ಕಾರಿ ಯೋಜನೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಸಂಯೋಜಕಿ ಮಮತ ಮಾತನಾಡಿ ಸಾಕ್ಷರ ಭಾರತ್ ಕಾರ್ಯಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಎಲ್ಲಾ 15 ವಯಸ್ಸಿನ ಮೇಲಿನ ಆಸಕ್ತಿರಿಗೆ ಸಮಾನ ಶಿಕ್ಷಣ ನೀಡಬೇಕು. ವೃತ್ತಿ ಕೌಶಲ್ಯ ತರಬೇತಿ, ಆರ್ಥಿಕ ಭದ್ರತೆ ಒದಗಿಸಲು ಶ್ರಮಿಸಿತ್ತಿದೆ. ಎಲ್ಲಾ ಗ್ರಾಮ ಪ.ಪಂ.ಮಟ್ಟದಲ್ಲಿ ಸಾಕ್ಷರ ಭಾರತ್ ಕೇಂದ್ರಗಳಿದ್ದು ಅನಕ್ಷರಸ್ಥರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
17 ಜಿಲ್ಲೆಯಲ್ಲಿ ಜಾರಿ: 2001ರ ಜನ ಗಣತಿ ಪ್ರಕಾರ ಶೇ 50 ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತಾ ಪ್ರಮಾಣವಿದೆ. ಜಿಲ್ಲೆಯಲ್ಲಿ 2012 ರಿಂದ ಸಾಕ್ಷರ ಭಾರತ್ ಕಾರ್ಯಕ್ರಮ ಚಾಲನೆಯಲ್ಲಿದೆ. ದೇಶದ 25 ರಾಜ್ಯಗಳ 372 ಜಿಲ್ಲೆಗಳಲ್ಲಿ 1.5 ಲಕ್ಷ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ ಜಾರಿಯಲ್ಲಿದೆ. ರಾಜ್ಯದ 17 ಜಿಲ್ಲೆಗಳ 107 ತಾಲೂಕುಗಳ 3707 ಗ್ರಾ.ಪಂ.ಗಳಲ್ಲಿ ಚಾಲನೆಯಲ್ಲಿದೆ ಎಂದರು.
ಸಂಯೋಜಕ ಕೆ.ಎನ್ .ರಂಗಸ್ವಾಮಿ, ನಷೇಮನ್ನಾರ, ಶಿಕ್ಷಕಿಯರಾದ ಶಹನಾಜ್, ಶಕೀಲಾ ಶಿಕ್ಷಕ ತಿಪ್ಪೇಸ್ವಾಮಿ ಇತರರು ಇದ್ದರು.