ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬರಿದಾಗುತ್ತಿದೆ ಜಿನಗೀ ನದಿ ಮಡಿಲು

Srinivasa Murthy VN
Updated On : 11 Sept 2013, 11:24 am

- ವಿಶೇಷ ವರದಿ
ಕ.ಪ್ರ.ವಾರ್ತೆ ಮೊಳಕಾಲ್ಮುರು  ಸೆ.10
ಚಳ್ಳಕೆರೆ ಮತ್ತು ಹಿರಿಯೂರು ತಾಲೂಕಿನ ಜೀವನದಿಗಳಾಗಿರುವ ಸುವರ್ಣಮುಖಿ ಮತ್ತು ವೇದಾವತಿ ನದಿಗಳು ಮರಳು ದಂದೆಕೋರರ ಕಪಿ ಮುಷ್ಟಿಯಲ್ಲಿ ಸಿಲುಕಿ ಸಂಪೂರ್ಣವಾಗಿ ಬರಿದಾಗಿರುವ ಬೆನ್ನಲ್ಲೇ ತಾಲೂಕಿನ ಜೀವನಾಡಿಯಾಗಿರುವ ಜಿನಗೀ ನದಿ ಸಹ ಮರಳು ಮಾಪಿಯದವರ ಕಪಿಮುಷ್ಟಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿದೆ.
ಒಂದು ಕಾಲದಲ್ಲಿ ಸದಾ ನೀರನ್ನು ಜಿನುಗಿಸುತ್ತಿದ್ದ ಜಿನಗೀನದಿಯು ಕಳೆದ ಹಲವಾರು ವರ್ಷಗಳ ಬರದ ದವಡೆಗೆ ಸಿಲುಕಿದ ನದಿಯು ಸಂಪೂರ್ಣವಾಗಿ ಒಣಗಿಹೋಗಿದೆ  ಇದರಿಂದ ಮರಳು ದಂದೆಕೋರರಿಗೆ ಜೆಸಿಬಿ ಯಂತ್ರಗಳ ಬಳಸಿಕೊಂಡು ಹತ್ತಾರು ಅಡಿಗಳ ಆಳದಿಂದ ಸುಲಭವಾಗಿ ಮರಳು ಸಾಗಾಟಕ್ಕೆ ದಾರಿಮಾಡಿಕೊಂಡಿದ್ದಾರೆ ಹಗಲು ಹೊತ್ತಿನಲ್ಲಿ ಸ್ತಬ್ದವಾಗುವ ಈ ದಂದೆ ರಾತ್ರಿಯಾದನಂತರ ನಿರ್ಭಯವಾಗಿ ಸಾಗಾಟ ಮಾಡಲಾಗುತ್ತದೆ ಎನ್ನುವುದು ನದಿಯ ಇಕ್ಕೆಲಗಳ ಗ್ರಾಮಗಳ ಜನತೆಯಿಂದ ಕೇಳಿಬರುತ್ತಿದೆ. ಇದಕ್ಕೆ ಸ್ಥಳೀಯರ ಸಹಕಾರವೂ ಇದೆ ಎಂಬ ಮಾಹಿತಿಯೂ ಕೇಳಿಬರುತ್ತಿದೆ.
ನೀರು, ಮೇವಿಗೆ ಬರ: ಸದಾ ಬರಗಾಲದ ಹೊಡೆತಕ್ಕೆ ಸಿಲುಕಿದ ಈಪ್ರದೇಶವು ಕುಡಿಯುವ ನೀರಿಗೂ ಜನತೆ ಆಹಾಕಾರ ಪಡುತ್ತಿದ್ದಾರೆ ಜಿನಗೀ ನದಿಯಲ್ಲಿ ಬರಗಾಲಕ್ಕೆ ಸಿಲುಕುತ್ತಿದ್ದರೂನದೀಪಾತ್ರದ ಗ್ರಾಮಗಳಿಗೆ ಮಾತ್ರ ಕುಡಿಯುವ ನೀರಿಗೆ ಬರ ಆವರಿಸಿರಲಿಲ್ಲ. ಕುರಿಮೇಕೆಗಳಿಗೆ ತುಸು ಹಸಿರಿನ ಚಿಗುರು ಸಿಗುತ್ತಿತ್ತು.  ಆದರೆ ಮರಳು ದಂದೆ ಕೋರರ ಕೈಗೆ ಸಿಲುಕಿದ ನದಿಯಲ್ಲಿ  ದನಕರುಗಳ ಮೇವಿಗೂ ಬರ ಆವರಿಸಿದೆ.  
ನದಿಯ ಆಸು ಪಾಸಿನ ಹಳ್ಳಿಗಳ ಕೊಳವೇಬಾವಿಗಳಲ್ಲಿ ನೂರೈವತ್ತು  ಇನ್ನೂರು ಅಡಿಗಳಲ್ಲಿ ನೀರು ಸಿಗುತ್ತಿತ್ತು. ಆದರೆ ಈಗ ಏಳುನೂರು ಅಡಿ ಕೊಳವೆಬಾವಿ ಕೊರೆದರೂ ಸಹ ನೀರು  ಕಾಣದಂತಾಗಿದೆ. ತಾಲೂಕಿನ ಹಲವಾರು ಗ್ರಾಮಗಳ ಅಂತರ್ಜಲ ಸುಧಾರಿಸುತ್ತಿದ್ದ  ಜಿನಗೀನದಿಯು  ಮರಳು ಗಣಿಗಾರಿಕೆಯಿಂದ ಒಡಲೆಲ್ಲ ಬರಿದಾಗುತ್ತಿದೆ.  
ನಗರಗಳಿಗೆ ರವಾನೆ: ತಾಲುಕಿನ ನಾಗಸಮುದ್ರ, ವೆಂಕಟಾಪುರ, ಮಾಚೇನಹಳ್ಳಿ, ಸಿದ್ದಯ್ಯನಕೊಟೆ, ತಳವಾರಹಳ್ಳಿ, ಚಿಕ್ಕೋಬನಹಳ್ಳಿ ಗ್ರಾಮಗಳಲ್ಲಿ ಹಾದು ಹೋಗುತ್ತಿದೆ ನದಿಯ ವಿಶಾಲ ಭೂ ಪ್ರದೇಶದಲ್ಲಿ ಹೇರಳವಾಗಿ ದೊರೆಯತ್ತಿರುವ ಇಲ್ಲಿನ ಮರಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು  ನಗರಗಳಿಗೆ ಮರಳು ರವಾನೆ ಮಾಡಲಾಗುತ್ತದೆ. ಮಾಫಿಯ ಅಧಿಕಾರಿಗಳ ಕಣ್ತಪ್ಪಿಸಿ ನಿರ್ಭಯವಾಗಿ ಜೆಸಿಬಿ ಯಂತ್ರಗಳ ಮೂಲಕ  ಜಿನಗೀನನದಿಯ ಒಡಲನ್ನು ಬರಿದು ಮಾಡುತ್ತಿವೆ.
ಅಧಿಕಾರಿಗಳು ಸಹ ನಿತ್ಯ ನಡೆಯುವ ದಂದೆಗೆ  ಕಡಿವಾಣ ಹಾಕಲು ಸಿಕ್ಕ ಲಾರಿಗಳನ್ನು ಜಪ್ತಿಮಾಡಿ ಕೇಸು ಹಾಕುತ್ತಿದ್ದಾರೆ. ಕೆಲವು ಕಡೆ ದಾಸ್ತಾನು ಮಾಡಿರುವ ಮರಳನ್ನು ಸಹ ವಶಕ್ಕೆ ತೆಗೆದುಕೊಂಡು ಸಂಬಂಧಿಸಿದವರದವರ ಮೇಲೆ ಕ್ರಮ ಕೈಗೊಳ್ಳುಲು ಮುಂದಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಮರಳು ದಂದೆ ತಡೆಯಿಲ್ಲದೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement