ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಮೊಗ್ಗದಲ್ಲೂ ರಿಯಾಯಿತಿ!

Srinivasa Murthy VN
Updated On : 16 Apr 2014, 12:43 pm

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಶಾಯಿಯ ಗುರುತು ತೋರಿಸಿ, ಕಣ್ಣಿನ ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯ್ತಿ ಪಡೆಯಿರಿ.
ಹೀಗೊಂದು ಕಡ್ಡಾಯ ಮತದಾನಕ್ಕಾಗಿ ಪ್ರೇರೇಪಿಸುವ ಕಾರ್ಯಕ್ರಮವನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನಡೆಸುತ್ತಿದೆ. ಏ.17ರಂದು ನಡೆಯಲಿರುವ ಮತದಾನದಲ್ಲಿ ಭಾಗವಹಿಸುವ ಮತದಾರರು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ತಮ್ಮ ಕೈ ಬೆರಳಿಗೆ ಹಾಕಿದ ಶಾಯಿಯ ಗುರುತು ತೋರಿಸಿ ಎರಡು ಕಣ್ಣಿನ ತಪಾಸಣೆಗೆ ಸಂಬಂಧಿಸಿದ ವೆಚ್ಚದಲ್ಲಿ ರಿಯಾಯ್ತಿ ಪಡೆಯಬಹುದಾಗಿದೆ.
ಮೊದಲ ರಿಯಾಯಿತಿ: ಏಪ್ರಿಲ್ 17 ಮತ್ತು 18ರಂದು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆಗೆ ಆಗಮಿಸುವ ರೋಗಿಗಳಿಗೆ ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಶೇ.50ರಷ್ಟು ರಿಯಾಯ್ತಿ ನೀಡಲಾಗುವುದು. ಈ ಸೌಲಭ್ಯ ಕೇವಲ ಎರಡು ದಿನಗಳಿಗೆ ಮಾತ್ರವಾಗಿದೆ.
ಎರಡನೇ ರಿಯಾಯಿತಿ: ಏ.17ರಿಂದ 30ರವರೆಗೆ ಲಾಸಿಕ್ ಕಣ್ಣಿನ ಚಿಕಿತ್ಸೆಯ ತಪಾಸಣೆ (1300) ಉಚಿತ. ಈ ಹಿನ್ನೆಲೆಯಲ್ಲಿ ಮತದಾರರು ಏ.17ರಂದು ನಡೆಯಲಿರುವ ಲೋಕಸಭೆ ಚುನಾವಣೆ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮಾಧ್ಯಮ ವಕ್ತಾರ ಎ.ಬಿ. ಪುರುಷೋತ್ತಮ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement