ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉಳಿವಿಗಾಗಿ ಬುಡಕಟ್ಟು ಜನಾಂಗದ ಹೋರಾಟ ವಿಷಾದನೀಯ

Srinivasa Murthy VN
Updated On : 3 Feb 2014, 11:36 am

ಕ.ಪ್ರ.ವಾರ್ತೆ ಸೊರಬ ಫೆ. 2
ತಲೆತಲಾಂತರಗಳಿಂದ ಪ್ರಕೃತಿಯೊಂದಿಗೆ ಸಹಬಾಳ್ವೆಯಿಂದ ಬದುಕಿ, ನೆಲ, ಜಲ ಮತ್ತು ಕಾಡು ಸಂರಕ್ಷಿಸುತ್ತಿರುವುದರ ಜೊತೆಗೆ ನಮ್ಮ ಸಾಂಸ್ಕೃತಿಕ, ಸಾಮಾಜಿಕ ಬದುಕಿನೊಂದಿಗೆ ವೈವಿಧ್ಯತೆ ಬೆಳೆಸಿಕೊಂಡಿರುವ ಬುಡಕಟ್ಟು ಜನಾಂಗದವರು ಇಂದು ತಮ್ಮ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುವುದು ವಿಷಾದನೀಯ ಎಂದು ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಹಸಲರು ಸಂಘ ಹಾಗೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ತಾಲೂಕು ಶಾಖೆ ವತಿಯಿಂದ “¶ßsÚOÚlßo ಸಮುದಾಯಗಳ ಉಳವಿಗಾಗಿ ನಮ್ಮ «Úsæ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಇಂದು ಸಮುದಾಯ ಕಟ್ಟಲು ಸಾಧ್ಯವಾಗುತ್ತಿಲ್ಲ ಮತ್ತು ಸರ್ಕಾರದಿಂದ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಇಂದು ಇಂಥ ಸಮುದಾಯಗಳು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮಲ್ಲಿನ ವ್ಯವಸ್ಥೆ ಬದಲಾಗುವುದಿಲ್ಲ. ನಮ್ಮ ಹಕ್ಕುಗಳಿಗಾಗಿ ಹೋರಾಟ ಮನೋಭಾವ ಬೆಳೆಸಿಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಸಂಘಟನಾತ್ಮಕ ಹೋರಾಟದ ಮೂಲಕ ನಮ್ಮ ಸಮಸ್ಯೆಗಳನ್ನು ಈಡೇರಿಸಿಕೊಳ್ಳಬೇಕು. ಆದ್ದರಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಕರೆನೀಡಿದರು.
ಸಮಾಜ ಸೇವಕ ಆರ್. ಅಬ್ದುಲ್ ರಶೀದ್ ಮಾತನಾಡಿ, ಒಬ್ಬ ವ್ಯಕ್ತಿಗೆ ಸ್ಥಾನಮಾನ ದೊರೆತ ತಕ್ಷಣ ತನ್ನ ಸಮುದಾಯವನ್ನು ಮರೆಯುತ್ತಾನೆ. ಅನೇಕ ನಿರೀಕ್ಷೆಗಳನ್ನು ಹುಸಿ ಮಾಡುವ ಇಂಥ ಬೆಳವಣಿಗೆಯಿಂದ ಬುಡಕಟ್ಟು ಸಮುದಾಯದಂತಹ ಅನೇಕ ಸಮುದಾಯಗಳು ಧ್ವನಿ ಇಲ್ಲದೇ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿವೆ ಎಂದರು.
ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಕಟ್ಟಿದ ಪ್ರೊ.ಕೃಷ್ಣಪ್ಪ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಇಡೀ ಶೋಷಿತ ವರ್ಗ್ಗವನ್ನು ಸಂಘಟಿಸುವ ಮೂಲಕ ದಲಿತ ಸಮುದಾಯಗಳಿಗೆ ಧ್ವನಿಯಾಗಿದ್ದರು. ಆದರೆ, ಇಂದು ಅವರ ಚಿಂತನೆಗಳು ಹಾಗೂ ಹೋರಾಟದ ಮನೋಭಾವ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾನವ ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಬೆಳೆಯಬಾರದು. ಎಲ್ಲರನ್ನೂ ಸಮಾನತೆಯಿಂದ ಕಾಣುವುದರಿಂದ ಸೌಹಾರ್ದ ಬೆಳೆಯುತ್ತದೆ. ಅಹಂನಿಂದ ಸಂಘಟನೆಗಳು ನಾಶವಾಗುತ್ತವೆ. ಸಂಕಷ್ಟ-ನೋವುಗಳಿಗೆ ಸಿಲುಕಿರುವ ಜನರ ಧ್ವನಿಯಾಗುವುದೇ ನಿಜವಾದ ದೇಶ ಪ್ರೇಮ. ಸಾಮಾಜಿಕ ಬದ್ಧತೆಯಿಂದ ಶೋಷಣೆ ನಿರ್ಮೂಲನೆ ಸಾಧ ಎಂದರು.
ತಾಲೂಕು ಹಸಲರು ಸಂಘದ ಗೌರವಾಧ್ಯಕ್ಷ ಎನ್.ಬಿ. ಹಿರಿಯಣ್ಣ ಕಲ್ಲಂಬಿ ಜಾಗೃತಿ ಜಾಥಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಅರಣ್ಯ ಹಕ್ಕು ಸಮಿತಿಗೆ ಸಲ್ಲಿಸಿದ ಮತ್ತು ವಿಭಾಗಮಟ್ಟದಲ್ಲಿ ಸಲ್ಲಿಸಿದ ಬುಡಕಟ್ಟು ಜನರ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿಬೇಕು. ಅರಣ್ಯ ಹಕ್ಕಿನ ಕಾಯ್ದೆ -2012ರ ತಿದ್ದುಪಡಿ ಶೀಘ್ರವಾಗಿ ಜಾರಿಗೆ ಬರುವಂತೆ ಮತ್ತು 3ನೇ ಹಂತದ ಅರಣ್ಯ ಹಕ್ಕು ಸಮಿತಿಯಲ್ಲಿ 2:3 ರಷ್ಟು ಬುಡಕಟ್ಟು ಜನರು ಇರುವಂತೆ ಕ್ರಮ ಕೈಗೊಳ್ಳಬೇಕು, ಬುಡಕಟ್ಟು ಜನರಿಗೆ ಉಚಿತ ಪೌಷ್ಟಿಕ ಆಹಾರ ಯೋಜನೆ ಜಾರಿ ಮಾಡಬೇಕು. ಗುಡ್ಡಗಾಡು ಬುಡಕಟ್ಟು ಸಮುದಾಯಗಳಾದ ಹಸಲರು, ಗೊಂಡರು ಸಮುದಾಯಗಳಿಗೆ ಅನುಷ್ಠಾನ ಮಾಡಲಾಗುತ್ತಿಲ್ಲ. ಆದ್ದರಿಂದ ಯೋಜನೆಗಳ ಅನುಷ್ಟಾನ ಮಾಡುವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ವತಿಯಿಂದ ಜಾಗೃತಿ ಜಾಥಾ ನಡೆಸಿ, ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕೊರಗ ಸಮುದಾಯದ ಪ್ರಮುಖರಾದ ಗಿರಿಜಾ ಉಡುಪಿ, ಜೇನು ಕುರುಬ ಸಮುದಾಯದ ಪುಷ್ಪಾ ಕೊಡಗು, ರಾಮಪ್ಪ ಸಾಗರ, ಬಾಲರಾಜ್ ಚನ್ನಂಗಿ, ಮನೋಜ್ ಕೊರಗ ಮಂಗಳೂರು, ಬಸವೇಶ, ಎಂ.ಚಿದಾನಂದ ಕುಳವಳ್ಳಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement