ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರಕಾಶ್‌ರಾವ್‌ಗೆ ಗುರುವಂದನೆ

Srinivasa Murthy VN
Updated On : 3 Feb 2014, 11:35 am

ಶಿವಮೊಗ್ಗ: ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಳೆದೊಂದು ವಾರದಿಂದ ಆಯೋಜಿಸಿದ್ದ ಶ್ರೀ ರಾಮಾಯಣ ದರ್ಶನಂ ಸಮೀಕ್ಷೆ ತೃತೀಯ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಭಾನುವಾರ ನೆರವೇರಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಪಾವಗಡ ಪ್ರಕಾಶ್ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಗುರುವಂದನೆಗೆ ಮುನ್ನ ಕೊನೆ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್‌ರಾವ್, ರಾಮಾಯಣ ಚಿಂತನೆಯಲ್ಲಿ ಯಾವುದನ್ನು ಮರೆತರೂ ಆದ್ಯ ಗೌರವ, ಮುಖ್ಯ ಮಾನ್ಯತೆ, ಮರ್ಯಾದೆ, ಧಾರ್ಮಿಕ ವಂದನೆ ಮರೆಯಬಾರದು. ಧಾರ್ಮಿಕ ಪ್ರತಿಜ್ಞೆ ಸ್ವೀಕರಿಸಬೇಕು. ತಂದೆ- ತಾಯಿಗಳ ಮಾತೇ ಪರಮವಾಗಿರಬೇಕೆಂದು ಕರೆ ನೀಡಿದರು.
ಕಾನೂನಿನ ವ್ಯಾಪ್ತಿ ಅರ್ಥ ಬಹಳ ಸಣ್ಣದು. ಧರ್ಮ ಎಂಬ ದೊಡ್ಡ ವೃತ್ತದಲ್ಲಿ ಕಾನೂನು ಎಂಬುದು ಸಣ್ಣ ವೃತ್ತ ಎಂದು ಹೇಳಿದ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ವಿವರಿಸಿದರು.
ಮ.ಸ. ನಂಜುಂಡಸ್ವಾಮಿ, ವಿಪ್ರ ನೌಕರರ ಸಂಘದ ಸ್ಥಾಪಕ ಅಧ್ಯಕ್ಷ ಅಚ್ಯುತರಾವ್, ಸಂಸದ ಆಯನೂರು ಮಂಜುನಾಥ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಶಾಸಕಿ ಶಾರದಾ ಪೂರ್ಯಾ ನಾಯ್ಕ, ಜಂಟಿ ಕಾರ್ಯದರ್ಶಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಅಬಸೆ ದಿನೇಶ್‌ಕುಮಾರ್, ಸಂಘಟನೆಯ ಖಜಾಂಚಿ ಛಾಯಾಪತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement