ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ'

Srinivasa Murthy VN
Updated On : 5 Feb 2014, 11:11 am

ಜೋಗ್ ಫಾಲ್ಸ್: ಚಿಕ್ಕವರಾಗಲಿ ದೊಡ್ಡವರಾಗಲಿ ವಿದ್ಯೆ ಕಲಿಸಿದ ಗುರುವಿಗೆ ನಮನ ಸಲ್ಲಿಸುವ ದೊಡ್ಡ ಗುಣ ಭಾರತೀಯ ಸಂಸ್ಕೃತಿಯ ಪ್ರತೀಕ. ಹಿಂದೆ ಏಕಲವ್ಯ ಗುರುದಕ್ಷಿಣೆಗಾಗಿ ತನ್ನ ಹೆಬ್ಬೆರಳನ್ನೇ ನೀಡುವ ಮೂಲಕ ತನ್ನ ಗುರುವಿನ ಭಕ್ತಿಯನ್ನು ಮೆರೆಸುವ ಮೂಲಕ ಗುರುಶಿಷ್ಯರ ಬಾಂಧವ್ಯವನ್ನು ಅಜರಾಮರವಾಗಿಸಿದ ಎಂಬುದಾಗಿ ಗುರುವಂದನಾ ಕಾರ್ಯಕ್ರಮದ ಸಂಚಾಲಕ ಪಿ. ಸುರೇಶ್ ತಿಳಿಸಿದರು.
ಶ್ರೀ ಪ್ರಣವಂ ಯೋಗವುಂದಿರದ ವತಿಯಿಂದ ಯೋಗಗುರು ಕೆ.ಆರ್. ಮಂಜುನಾಥ್ ಅವರಿಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ನರಮಂಡಲಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ, ಪ್ರಾಣಾಯಾಮ ಸಹಕಾರಿ. ಉತ್ತಮ ಆಹಾರ ಕ್ರಮ, ಕೆಲಸವನ್ನು ಪ್ರೀತಿಸುವುದು ಹಾಗೂ ನಿಸ್ವಾರ್ಥ ಮನೋಭಾವನೆಗಳು ನಾವು ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಲಭ್ಯವಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಆರ್. ಮಂಜುನಾಥ್, ಯೋಗವು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸಿ ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಯೋಚನೆಗಳಿಂದ ಹೊರಬಂದು ಸಮರ್ಪಕವಾಗಿ ಬದುಕುವ ಸುಂದರವಾದ ತಮ್ಮ ಜೀವನ ಶೈಲಿಯನ್ನು ಹಸಲು ಮಾಡಲು ಕಲಿಸುತ್ತದೆ. ಖಾಯಿಲೆ ಮನುಷ್ಯನ ಬಳಿಸುಳಿಯುವುದೇ ಇಲ್ಲ, ಖಾಯಿಲೆ ಇಲ್ಲದ ಆರೋಗ್ಯವಂತ ಮನುಷ್ಯ ಅಚ್ಚುಕಟ್ಟಾಗಿ ತನಗೆ ವಹಿಸಿದ ಕೆಲಸವನ್ನು ನಿರ್ವಹಿಸುತ್ತಾನೆ ಎಂದರು.
ಬಿ. ವಿಜಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಎಂ.ಎಸ್. ಸತೀಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆಪಿಸಿಯಿಂದ ನಿವೃತ್ತರಾದ ಎಂ. ಜಾನಾಬಾಯಿ ರವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement