ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರೋಗ್ಯ ಸೇವೆಗೆ '104'

Srinivasa Murthy VN
Updated On : 5 Feb 2014, 11:13 am

ಶಿವಮೊಗ್ಗ: ಪ್ರತಿಯೊಬ್ಬರಿಗೂ ಸುಲಭದಲ್ಲಿ ಆರೋಗ್ಯ ಸೇವಾ ಸೌಲಭ್ಯ ಕಲ್ಪಿಸಬೇಕೆಂಬುದು ಸರ್ಕಾರದ ಸಂಕಲ್ಪ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆಯಂತಹ ಅತ್ಯವಶ್ಯ ಸೌಲಭ್ಯಗಳು ಸಕಾಲದಲ್ಲಿ ಹಾಗೂ ಸುಲಭದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ದೊರೆಯುವಂತಾಗಬೇಕೆಂಬ ಸದುದ್ದೇಶದಿಂದ ಸಾರ್ವಜನಿಕರಿಗೆ ಆರೋಗ್ಯ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲು 104 ಆರೋಗ್ಯವಾಣಿ ಸೇವೆ ಜಾರಿಗೆ ತರಲಾಗಿದೆ.

ಅರ್ಜಿ ಆಹ್ವಾನ
ಶಿವಮೊಗ್ಗ: ಕುಮಟಾದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಫೆಬ್ರವರಿ 2ನೇ ವಾರದಿಂದ ಟಿವಿ ಮತ್ತು ವಿಸಿಡಿ, ಡಿವಿಡಿ ಹಾಗೂ ಇತರೆ ತಾಂತ್ರಿಕ ಉಪಕರಣಗಳ ರಿಪೇರಿ ತರಬೇತಿ ಮತ್ತು ಗೃಹೋಪಯೋಗಿ ವಸ್ತುಗಳನ್ನು(ಮೇಣಬತ್ತಿ, ಅಗರಬತ್ತಿ, ಪಿನೈಲ್, ಸೋಪ್ ಇತರೆ) ತಯಾರಿಸುವ ತರಬೇತಿ ಹಮ್ಮಿಕೊಳ್ಳಲಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.  ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ(ಸಿಂಡ್‌ಆರ್‌ಸೆಟಿ), ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆ ರಸ್ತೆ, ಕುಮಟಾ- ಉತ್ತರ ಕನ್ನಡ ಈ ವಿಳಾಸಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 08386- 220530.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement