ಶ್ರೀ ಮಾರಿಕಾಂಬೆಗೆ ಧುಗಳು ಪರ್ಸೀ ಪೂಜೆ
ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿಯ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಗೆ ಅದ್ಧೂರಿಯಾಗಿ ಧುಗುಳು ಪರ್ಸೀ ಪೂಜೆ ಸಲ್ಲಿಸಿದರು.
5 ವರ್ಷಕ್ಕೊಮ್ಮೆ ಮಾರಿಕಾಂಬೆಯ ಜಾತ್ರಾ ಮಹೋತ್ಸವ ನೆರವೇರುತ್ತದೆ. ಜಾತ್ರೆಯ 1 ವರ್ಷದ ಮೊದಲು ಊರಿನ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸೇರಿ ಮಾರಿಕಾಂಬೆಯಲ್ಲಿ ಮುಂದಿನ ವರ್ಷ ಜಾತ್ರೆ ನಡೆಸಿಕೊಡುತ್ತೇವೆಂದು ಹರಕೆ ಮಾಡಿಕೊಂಡು ಸ್ಥಳೀಯ ಹಾಗೂ ಸುತ್ತ ಮುತ್ತಲಿನ ಗ್ರಾಮದ ಎಲ್ಲಾ ಜನ, ಜಾನುವಾರು, ಬೆಳೆಗಳಿಗೆ ರಕ್ಷಣೆ ನೀಡಿ ಕಾಪಾಡಬೇಕೆಂದು ಬೇಡಿಕೊಳ್ಳುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಈ ಸಂಪ್ರದಾಯಕ್ಕೆ ಧುಗುಳು ಪರ್ಸೀಯಾಗಿ ಆಚರಿಸುತ್ತೇವೆಂದು ಶ್ರೀ ಮಾರಿಕಾಂಬಾ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಧರ ಮೂರ್ತಿ ತ್ಯಾಗರ್ತಿ ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ಮಾರಿಕಾಂಬೆಗೆ ವಿಶೇಷ ಪೂಜೆ, ಬಲಿ ಸಮರ್ಪಣೆ ಹಾಗೂ ಭಕ್ತರಿಂದ ಹರಕೆ ಒಪ್ಪಿಸಿ ಜಾತ್ರಾ ಮಹೋತ್ಸವ ನೆರವೇರಿತು.ಈ ಸಂದರ್ಭದಲ್ಲಿ ತ್ಯಾಗರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸ್ಯಾಜೀ ಮ್ಯಾಥ್ಯು ಮಾರಿಕಾಂಬೆಗೆ ಪೂಜೆ ಸಲ್ಲಿಸಿ ಮಾತನಾಡಿದರು.