ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾಯಾವತಿ ಪ್ರಧಾನಿಯಾಗಲಿ

Srinivasa Murthy VN
Updated On : 17 Mar 2014, 10:20 am

ಸೊರಬ: ಸ್ವಸಾಮರ್ಥ್ಯದಲ್ಲಿ ದೃಢವಿಶ್ವಾಸ, ವಿವೇಚನಾಪೂರ್ಣ ನಿರ್ಧಾರ ಸ್ವಾವಲಂಬನೆ ಮುಂತಾದ ತತ್ವಗಳ ಮೇಲೆ ಹೊಸ ಸಮಾಜ ನಿರ್ಮಾಣ ಮಾಡುವ ಕನಸು ಹೊಂದಿದ್ದ ಕಾನ್ಷಿರಾಮ್ ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಮುಖ್ಯಮಂತ್ರಿ ಆಗುವ ಮೂಲಕ ನನಸಾಗಿದೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಹಿರಿಯ ಮುಖಂಡ ಎ.ಬಸವಣ್ಯಪ್ಪ ಗುಡವಿ ಹೇಳಿದರು.
ಪಟ್ಟಣದ ಬಿಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸಂಸ್ಥಾಪಕ ಕಾನ್ಷಿರಾಮ್ ಅವರ 80ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾಯಾವತಿ ಪ್ರಧಾನಿಯಾಗಲಿ:  ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಳಒಪ್ಪಂದ ಮಾಡಿಕೊಂಡು ಮಾಯಾವತಿ ಅವರ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನದಿಂದ ಅಧಿಕಾರ ಕಳೆದುಕೊಳ್ಳುವಂತಾಯಿತು. ಈ ದೇಶದಲ್ಲಿ ನೊಂದವರಿಗೆ ಸಾಮಾಜಿಕ ಸಮಾನತೆ ಕಲ್ಪಿಸುವ ಪ್ರಯತ್ನ ಮಾಡಿದ ಮಹಾನ್ ನಾಯಕ ಕಾನ್ಷಿರಾಮ್ ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜನಸೇವೆಯಲ್ಲಿರುವ ಏಕೈಕ ವ್ಯಕ್ತಿ ಎಂದರೆ ಮಾಯಾವತಿ ಮಾತ್ರ. ಅವರೇ ಈ ದೇಶದ ಪ್ರಧಾನಿಯಾಗಬೇಕು ಎಂದರು.
 ಶತಶತಮಾನಗಳಿಂದಲೂ ಭಾರತದಲ್ಲಿ ನೆಲೆ ನಿಂತಿದ್ದ ಅಸ್ಪೃಷ್ಯತೆ ದೂರ ಮಾಡಿ ಸಾಮಾಜಿಕ ಸಮಾನತೆ ಕಲ್ಪಿಸಿದ ದೇಶಪ್ರೇಮಿ ಡಾ. ಬಿ.ಆರ್. ಅಂಬೇಡ್ಕರ್‌ನ ನಂತರ ದಲಿತರಿಗೆ ಗುರಿ-ಸಾಧನೆ, ಛಲ, ಧೈರ್ಯದ ಬದುಕು ತುಂಬಿದ ನಾಯಕರೆಂದರೆ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಷಿರಾಮ್ ಎಂದು ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ ಯಾವುದೇ ಯೋಜನೆಗಳನ್ನು ರೂಪಿಸದೇ ಅನ್ಯಾಯ ಎಸಗಿದ್ದಾರೆ. ಉನ್ನತ ಸ್ಥಾನದಲ್ಲಿ ಇರುವವರಿಗೆ ಯೋಜನೆಗಳನ್ನು ರೂಪಿಸಿ, ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿರುವವರಿಗೆ ಸಾಮಾಜಿಕ ಸಮಾನತೆ ಕಲ್ಪಿಸಲು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಗೌರವಾಧ್ಯಕ್ಷ ನೂರ್‌ಜಹಾನ್ ಜಂಗಿನಕೊಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ, ಟೌನ್ ಅಧ್ಯಕ್ಷ ಮಂಜು, ವಕೀಲ ಕೆ.ಪಿ.ಲಕ್ಷ್ಮಣ, ದಿಲ್‌ಷಾದ್ ಬೇಗಂ, ಟೌನ್ ಅಧ್ಯಕ್ಷ ಮಂಜು, ಕೊಟ್ರೇಶ್ ತವನಂದಿ, ಅಬ್ದುಲ್ ಘನಿ, ಪುಟ್ಟಪ್ಪ ಚಂದ್ರಗುತ್ತಿ, ಶಶಿಕಲಾ ಬಾಸೂರು ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement